Coastal Bulletin

ಕೇರಳ :ಕೇರಳ ಮೂಲದ ಡಾ.ಶ್ಯಾಮ ವಿಶ್ವನಾಥನ್ ಪಿಳ್ಳೆ ಮತ್ತು ಡಾ.ಜಸ್ನಾ ಜಮಾಲ್ ಎಂಬ ಆಯುರ್ವೇದ ವೈದ್ಯರಿಬ್ಬರಿಗೆ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಸರ್ಕಾರ ಗೋಲ್ಡನ್ ವೀಸಾ ನೀಡಿದೆ.

ವಿಶ್ವನಾಥನ್ ಕೇರಳದ ಕೊಲ್ಲಂ ಜಿಲ್ಲೆಯ ಮೂಲದವರು. 2001ರಲ್ಲಿ ದುಬೈಗೆ ತೆರಳಿದ್ದು ಅಲ್ಲಿಯೇ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಪ್ರಸ್ತುತ ಅಬುಧಾಬಿಯಲ್ಲಿರುವ ವೈದ್ಯಶಾಲಾ ಸಂಸ್ಥೆಯಲ್ಲಿ ಸಿಇಒ ಆಗಿದ್ದಾರೆ.ಜಸ್ನಾ ಜಮಾಲ್ ದುಬೈನ ಅಲ್ ಮಮ್ಹಾರ್‌ನಲ್ಲಿ ವಾಸಿಸುತ್ತಿದ್ದಾರೆ. ಮೂಲತಃ ಕೇರಳದ ತ್ರಿಶೂರ್ ಜಿಲ್ಲೆಯವರು. 12 ವರ್ಷಗಳ ಹಿಂದೆಯೇ ಆಕೆ ಯುಎಇಗೆ ತೆರಳಿ ವಾಸವಿದ್ದರು. 


ದುಬೈ ಮಾಧ್ಯಮಕ್ಕೆ ಹೇಳಿಕೆ ನೀಡಿದ ವಿಶ್ವನಾಥನ್ ಯುಎಇ ನಿವಾಸಿಗಳ ಯೋಗಕ್ಷೇಮಕ್ಕಾಗಿ ಆಯುರ್ವೇದ ಪದ್ದತಿಗೆ ಒತ್ತುನೀಡಿದ ಯುಎಇ ಸರಕಾರದ ದೃಷ್ಟಿಕೋನವನ್ನು ನಾನು ನಿಜವಾಗಿಯೂ

ಪ್ರಶಂಸಿಸುತ್ತೇನೆ ಮತ್ತು ಆಯುರ್ವೇದಲ್ಲಿ ಉತ್ತಮ‌ ಗುಣಮಟ್ಟದ  ಚಿಕಿತ್ಸೆ ನೀಡುವಲ್ಲಿ ಶ್ರಮವಹಿಸುತ್ತೇನೆ"ಎಂದು ಅವರು ಹೇಳಿದರು.


2019 ರಿಂದ ವಿದೇಶಿಯರಿಗೆ 'ಗೋಲ್ಡನ್ ವೀಸಾ'ವನ್ನು ಯುಎಇ ಸರ್ಕಾರ ನೀಡುತ್ತಿದೆ. ಇದರಿಂದ ವಿದೇಶಿಯರು ಯುಎಇನಲ್ಲಿ ಯಾವುದೇ ಅನುಮತಿ ಇಲ್ಲದೆ ವಿದ್ಯಾಭ್ಯಾಸ, ಕೆಲಸ, ಉದ್ಯಮ ನಡೆಸಬಹುದು. 'ಗೋಲ್ಡನ್ ವೀಸಾ'ದಿಂದ ವಿದೇಶಿ ಹೂಡಿಕೆದಾರರು ಮತ್ತು ಉದ್ಯಮಿಗಳು ಯುಎಇನಲ್ಲಿ ಸಂಪೂರ್ಣ ಮಾಲೀಕತ್ವದಲ್ಲಿ ಉದ್ಯಮ ನಡೆಸಬಹುದು. 5 ಅಥವಾ 10 ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ನೀಡಲಾಗುತ್ತದೆ. ಬಳಿಕ ಅದನ್ನು ನವೀಕರಿಸಿಕೊಳ್ಳಬಹುದು

Leave a Comment