ಬಂಟ್ವಾಳ: ಕೇಂದ್ರ ಸರ್ಕಾರದ 'ಅಮೃತ ಭಾರತ್ ಸ್ಟೇಶನ್' ಯೋಜನೆಯಡಿ ರೂ 26.18 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಬಿ.ಸಿ.ರೋಡು ರೈಲ್ವೆ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಜು. 17ರಂದು ಶುಕ್ರವಾರ ವಿಡಿಯೋ ಕನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿದರು.
ಉದ್ಘಾಟನ ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ರೈಲ್ವೆ ವಿಭಾಗದಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವ ಸಲುವಾಗಿ ಪ್ರಧಾನಿಯವರು ಅಮೃತ ಭಾರತ್ ಸ್ಟೇಶನ್' ಯೋಜನೆ ರೂಪಿಸಿದ್ದಾರೆ, ಇದರಿಂದ ಹೆಚ್ಚಿನ ರೈಲು ಓಡಾಟ ಹಾಗೂ ಅಭಿವೃದ್ಧಿ ಸಾಧ್ಯ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಯೊಂದಿಗೆ ವಿಲೀನಗೊಳಿಸಲು ಅಗತ್ಯವಿದ್ದು ಎಲ್ಲಾ ಜನಪ್ರತಿನಿದಿನಗಳು ಹಾಗೂ ಅಧಿಕಾರಿಗಳು ಇಲಾಖೆಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಸಹಕರಿಸಬೇಕು , ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ನಮ್ಮ ಮುಂದಿನ ಬೇಡಿಕೆಯಾಗಿದೆ, ಪಾರದರ್ಶಕ ಬದಲಾವಣೆಯೊಂದಿಗೆ ಬಂಟ್ವಾಳ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಪ್ರಧಾನಿಗೆ ವಿಶೇಷ ಧನ್ಯವಾದ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ
ಸಚಿವ ನಾಗರಾಜ ಶೆಟ್ಟಿ,ಮಾಜಿ ಶಾಸಕ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪದ್ಮಶ್ರೀ ಪುರಸ್ಕೃತರಾದ ಹರೆಕಲ ಹಾಜಬ್ಬ,
ಅಮೈ ಮಹಾಲಿಂಗ ನಾಯ್ಕ್, ಮುದಿತ್ ಮಿತ್ತಲ್ ವಿಭಾಗೀಯ ವ್ಯವಸ್ಥಾಪಕರು, ಆನಂದ ಭಾರತಿ,ಹಿರಿಯ ಅಭಿಯಂತರರು ಗತಿ ಶಕ್ತಿ, ಉಪಸ್ಥಿತರಿದ್ದರು. ರೈಲ್ವೆ ಸಿಬ್ಬಂದಿ ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು.
ವರ್ಚವಲ್ ಮೂಲಕ ಎರಡನೇ ಹಂತದಲ್ಲಿ ಪುನರ್ ನಿಮಾಣಗೊಂಡ ಒಟ್ಟು 75 ರೈಲ್ವೆ ನಿಲ್ದಾಣಗಳನ್ನು ಏಕ ಕಾಲದಲ್ಲಿ ಪ್ರಧಾನಿ ಮೋದಿ ಉದ್ಘಾಟಿದರು. ಈ ಸಂದರ್ಭದಲ್ಲಿ ಬಂಟವಾಳ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಪರದೆ ಸಹಿತ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು,ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ರೈಲ್ವೆ ಉದ್ಯೋಗಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.















