ಬೆಳಕಿನ ಕವಿತೆಗಳು

ಸತೀಶ್ ನೆತ್ತರಕೆರೆ-ದುಬೈ
ಬೆಳಕಿನ ಕವಿತೆಗಳು

ಕತ್ತಲು ಎಂದರೆ ಅವ್ಯಕ್ತ ಭಯ ಬೆಳಕೆಂದರೆ ಭರವಸೆ,ಅಭಯ ಕತ್ತಲು ಎಂದರೆ ಕರಾಳ ಬೆಳಕೆಂದರೆ ನಿರಾಳ ಕತ್ತಲು ಎಂದೊಡನೆ ನೀರವ ಮೌನ ಬೆಳಕೆಂದರೆ ಹೊಸ ಆಶಾ ಕಿರಣ *****

ಅಂಧಕಾರದ ಇರುಳಿನಲ್ಲಿ

ದೀಪ ಬೆಳಕ ತೋರುವವರು

ಇರುವರು ಬೆರಳೆಣಿಕೆಯಲ್ಲಿ

ಜೀವನದಲ್ಲಿ ನೆನಪಿಟ್ಟುಕೊಳ್ಳಿ

 ಬದುಕ ಸುಟ್ಟು ಬಿಡಲು

ಬತ್ತಿಯಿಡುವವರು

ಕೊಳ್ಳಿಯಿಡುವವರೇ ಹೆಚ್ಚು ಇಲ್ಲಿ!!


*****


ಇಲ್ಲಿ ಎಲ್ಲವೂ ನಿಜವಲ್ಲ

ಅವರವರ ಭಾವಕ್ಕೆ 

ಅವರವರ ದೃಷ್ಟಿಗೆ

ಸುಟ್ಟು ಬೂದಿಯಾಗಿಸುವ

ಕೆನ್ನಾಲಿಗೆಯ ಬೆಂಕಿಯ ಜ್ವಾಲೆ

ಹೊಳೆಯುವ

ಬೆಳಕಿನಂತೆ

ದೂರದಿಂದ ಈ ಕಣ್ಣಿನ ದೃಷ್ಟಿಗೆ..!


*****


ಕಂಡದ್ದೆಲ್ಲವೂ ಪಡೆವ ಬಯಕೆ

ದುರಾಸೆ,ದುರಾಲೋಚನೆಗಳೇ

ಸುಟ್ಟು ಬಿಡುವುದು ನಮ್ಮನ್ನು

ಬೇಕಿದ್ದರೆ ನೋಡಿ..

ಬೆಳಕ ಕಂಡೊಡನೆ ದೀಪಕ್ಕೆ ಮುತ್ತಿಟ್ಟು ಸುಟ್ಟು ಸತ್ತು ಬಿಡುವ ಪತಂಗವನ್ನು !!

Leave a Comment