ಬಂಟ್ವಾಳ :ಎಸ್ ವಿ ಎಸ್ ಕಾಲೇಜ್ ನಲ್ಲಿ ಸರ್ ಸಿ.ವಿ.ರಾಮನ್ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ.

Coastal Bulletin
ಬಂಟ್ವಾಳ :ಎಸ್ ವಿ ಎಸ್ ಕಾಲೇಜ್ ನಲ್ಲಿ ಸರ್ ಸಿ.ವಿ.ರಾಮನ್ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ.

ಬಂಟ್ವಾಳ: ಭಾರತದ ಚಂದ್ರಯಾನ-೩ ಯಶಸ್ಸಿನ ನಂತರ ಬಾಹ್ಯಾಕಾಶ ಸಂಶೋಧನೆಯ ಸ್ಪರ್ಧೆ ವಿಶ್ವಮಟ್ಟದಲ್ಲಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಬಾಹ್ಯಾಕಾಶದ ಸಂಶೋಧನೆಯು ಹಿಂದೆಂದಿಗಿಂತಲೂ ಅಭಿವೃದ್ಧಿಗೊಂಡಿದ್ದು, ಖ್ಯಾತ ವಿಜ್ಞಾನಿ ವಿಕ್ರಮ್ ಸಾರಾಭಾಯಿಯವರ ಪರಿಶ್ರಮದ ಫಲವಾಗಿ ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಗಳು ಆರಂಭವಾದವು. ಇದರ ಫಲವಾಗಿ ಇಸ್ರೋ ಸಂಸ್ಥೆಯ ಸಾಧನೆಗಳು ಜಗತ್ತಿನ ಗಮನಸೆಳೆಯುತ್ತಿರುವುದನ್ನು ಕಾಣಬಹುದಾಗಿದೆ ಎಂದು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಭೌತಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಅತುಲ್ ಭಟ್ ವಿವರಿಸಿದರು.

ಅವರು ಎಸ್.ವಿ.ಎಸ್. ಕಾಲೇಜಿನ ವಿಜ್ಞಾನ ವೇದಿಕೆ ಹಾಗೂ ಐ.ಕ್ಯೂ.ಎ.ಸಿ. ಯ ಸಂಯುಕ್ತಾಶ್ರಯದಲ್ಲಿ ಸರ್ ಸಿ.ವಿ.ರಾಮನ್‌ರವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಬಾಹ್ಯಾಕಾಶ ಸಂಶೋಧನೆಯ ಹೊಸ ಆಯಾಮಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಸುಯೋಗ ವರ್ಧನ್ ಡಿ.ಎಮ್. ರವರು ಪ್ರಸ್ತುತ ಕಾಲಘಟ್ಟದಲ್ಲಿ ಬಾಹ್ಯಾಕಾಶ

ಸಂಶೋಧನೆಗಳ ಅಗತ್ಯತೆ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುದರ್ಶನ್ ಬಿ ಹಾಗೂ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಟಿ.ಕೆ. ರವೀಂದ್ರನ್ ಉಪಸ್ಥಿತರಿದ್ದರು.

ವಿಜ್ಞಾನವೇದಿಕೆಯ ಅಧ್ಯಕ್ಷರಾದ ಡಾ.ವಿನಾಯಕ ಕೆ.ಎಸ್. ಸ್ವಾಗತಿಸಿ, ಭೌತಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ಎಂ.ಪಿ. ವಂದಿಸಿದರು. ವಿದ್ಯಾರ್ಥಿಗಳಾದ ಹೇಮಲತಾ ಮತ್ತು ಅನುಷಾ ಪ್ರಾರ್ಥಿಸಿ, ಯಶ್ವಿತಾ ನಿರೂಪಿಸಿದರು.

Leave a Comment