ಬಂಟ್ವಾಳ :ಶ್ರೀ ಕೃಷ್ಣ ಮಂದಿರ ಸೇವಾ ಟ್ರಸ್ಟ್ (ರಿ.), ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ, ಶ್ರೀ ಕೃಷ್ಣ ಮಾತೃ ಬಳಗಗಳ ಆಶ್ರಯದಲ್ಲಿ ನಡೆಯುವ 75 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಟ್ರಸ್ಟ್ ನ ಅಧ್ಯಕ್ಷರು ಶ್ರೀ ನಾರಾಯಣ ಮೂಲ್ಯರ ಅಧ್ಯಕ್ಷತೆಯಲ್ಲಿ ಆದಿತ್ಯವಾರ ನಡೆಯಿತು.
ಪ್ರಮುಖರಾದ ರೋ. ಕಿಶೋರ್ ಕುಮಾರ್, ಅಪೂರ್ವ ಜ್ಯುವೆಲ್ಲರ್ಸ್ ಮಾಲೀಕರಾದ ಶ್ರೀ ಸುನೀಲ್ ಬಿ, ಮಂಗಳ ಜ್ಯುವೆಲ್ಲರ್ಸ್ ನ ಬಿ ಯುವರಾಜ್ ಆಚಾರ್ಯ, ಮಾಜಿ ಪುರಸಭಾ ಸದಸ್ಯರಾದ ಬಿ ಜಗದೀಶ್ ಕುಂದರ್, ಹಿರಿಯರಾದ ಕೊಗ್ಗಣ್ಣ ಆಚಾರ್, ಚಂದ್ರಶೇಖರ ಶೆಟ್ಟಿ ಕನ್ನಡಿಗುತ್ತು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ದಯಾನಂದ ಗೌಡ, ಮಾತೃ ಬಳಗದ ಪ್ರ.ಕಾರ್ಯದರ್ಶಿ ಶ್ರೀಮತಿ ಶೋಭಾ ಲಕ್ಷ್ಮಣ, ಹಿರಿಯರಾದ ಪುರಂದರ ಆಚಾರ್ಯ, ರಾಜೇಶ್ ಗೌಡ ಮುರಳಿಧರ ಆಚಾರ್, ಸ್ಥಳೀಯ ಸಂಘ ಸಂಸ್ಥೆ ಪ್ರಮುಖರಾದ ಭಾಸ್ಕರ್ ಟೈಲರ್ ಕಾಮಾಜೆ, ಬಾಲಕೃಷ್ಣ ಕಲಾಯಿ, ಜಯಪ್ರಕಾಶ್, ಅನಿಲ್ ಮಂಡಾಡಿ, ವಿನೀತ್ ಮಯ್ಯರಬೈಲು, ಸಮಿತಿಯ ಹರೀಶ್ ಬಿ, ಜಯ ಕುಲಾಲ್, ಲಕ್ಷ್ಮಣ, ರಘುನಾಥ ಸಾಲ್ಯಾನ್, ಸತೀಶ ಗೌಡ, ಟ್ರಸ್ಟ್ ನ ಸದಸ್ಯರು, ಸಮಿತಿಯ ಸದಸ್ಯರು, ಮಾತೃ ಬಳಗದ ಸದಸ್ಯರು, ಊರಿನ ಹಿರಿಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.
75ನೇ ಮೊಸರು ಕುಡಿಕೆ ಉತ್ಸವದ ಕಾರ್ಯಕ್ರಮಗಳು
ಸೆಪ್ಟೆಂಬರ್ ತಿಂಗಳ ದಿನಾಂಕ 04, 05 ಹಾಗೂ 06 ರಂದು ನಡೆಯಲಿದೆ..
ದಿನಾಂಕ 04 ಶುಕ್ರವಾರ ಶ್ರೀ ಕೃಷ್ಣಾಷ್ಟಮಿಯಂದು ಮಂದಿರದಲ್ಲಿ ಬೆಳಿಗ್ಗೆ 7.30ಕ್ಕೆ ಗಣಹೋಮ,9.00 ರಿಂದ ರಾತ್ರಿ 12 ಗಂಟೆಯ ವರೆಗೆ ವಿವಿಧ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ.. ರಾತ್ರಿ 12.00 ಕ್ಕೆ ಶ್ರೀ ಕೃಷ್ಣನಿಗೆ ಮಹಾಪೂಜೆ. ದಿನಾಂಕ 05 ಶನಿವಾರ ಬೆಳಿಗ್ಗೆ 9.00 ಕ್ಕೆ ಸರಿಯಾಗಿ ದೇವರ ಪ್ರತಿಬಿಂಬದ ಶೋಭಯಾತ್ರೆ, ಸಂಜೆ 3.30ರಿಂದ ಎಸ್ ವಿ ಎಸ್ ಮೈದಾನದಲ್ಲಿ ಶ್ರೀ ಕೃಷ್ಣ ಮುದ್ದು ಕೃಷ್ಣ ವೇಷ ಹಾಗೂ ಇತರ ಸ್ಪರ್ಧೆಗಳು
ಸಂಜೆ 6.00 ಕ್ಕೆ ಸಭಾ ಕಾರ್ಯಕ್ರಮ,ರಾತ್ರಿ 7.30 ರಿಂದ ಯಕ್ಷ ತೆಲಿಕೆ ಕಾರ್ಯಕ್ರಮ ನಡೆಯಲಿದೆ.,ದಿನಾಂಕ 06 ಆದಿತ್ಯವಾರಕ,ಬೆಳಿಗ್ಗೆ 9.00 ರಿಂದ ವಿವಿಧ ಆಟೋಟ ಸ್ಪರ್ಧೆಗಳು.. ಮಧ್ಯಾಹ್ನ ಅನ್ನ ಸಂತರ್ಪಣೆ.ನಂತರ ವಿವಿಧ ಸ್ಪರ್ಧೆಗಳ ಮುಂದುವರಿಕೆ,ಸಂಜೆ 6.00 ರಿಂದ ಸಭಾ ಕಾರ್ಯಕ್ರಮ,ಸಂಜೆ 7.30 ಕ್ಕೆ ಕಲಾ ಸಂಗಮ ತಂಡದ ಕಲಾವಿದರಿಂದ "ಶಿವದೂತ ಗುಳಿಗೆ"ನಾಟಕ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
















