Coastal Bulletin

ಮೇಷ ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚು ಸಂಪಾದನೆ ಆಗುವ ಯೋಗವಿದೆ. ಕ್ರೀಡಾಪಟುಗಳಿಗೆ ಅವರ ಇಲಾಖೆಯಲ್ಲಿ ಮುಂಬಡ್ತಿ ಸಿಗುವ ಯೋಗವಿದೆ. ಸಹೋದರಿಯರು ಮತ್ತು ತಾಯಿಯಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ಸರ್ಕಾರಿ ಕಚೇರಿಯ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ನಿಧಾನಗತಿಯನ್ನು ಕಾಣಬಹುದು. ಮಾತುಕತೆಯಿಂದ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ದೂರಮಾಡಿಕೊಳ್ಳಬಹುದು.

ವೃಷಭ

ಹಿರಿಯರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ  ಮಾಡುವವರಿಗೆ ವ್ಯಾಪಾರ ವೃದ್ಧಿಸಿ ಆದಾಯ ಬರುತ್ತದೆ. ಕಾರ್ಯಸಾಧನೆಗೆ ಅಕ್ಕಪಕ್ಕದವರಿಂದ ಅಡ್ಡಿ ಅಥವಾ ಸಹೋದ್ಯೋಗಿಗಳಿಂದ ಅಡ್ಡಿ ಇರುತ್ತದೆ. ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಯಾವುದಾದರೊಂದು ಉದ್ಯೋಗ ದೊರೆಯುತ್ತದೆ. ನ್ಯಾಯಾಲಯದ ವಿಚಾರಗಳಲ್ಲಿ ಮುನ್ನಡೆ ಇರುತ್ತದೆ. 

ಮಿಥುನ

ನಿಮ್ಮನ್ನು ಮೋಸ ಮಾಡಲು ಕಾಯುತ್ತಿರುವ ಜನರಿದ್ದಾರೆ ಎಚ್ಚರವಾಗಿರಿ. ಉನ್ನತ ವ್ಯಾಸಂಗಕ್ಕಾಗಿ ವಿದೇಶಯಾನ ಮಾಡುವವರಿಗೆ ಅವಕಾಶಗಳು ಈಗ ದೊರೆಯುತ್ತವೆ. ಬಹಳ ದೊಡ್ಡಮಟ್ಟದ ಹೂಡಿಕೆಗಳನ್ನು ಈಗ ಮಾಡುವುದು ಅಷ್ಟು ಒಳಿತಲ್ಲ. ನಿಮ್ಮ ಕೆಲವೊಂದು ವಿಚಾರಗಳಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗದೆ ಗೊಂದಲಕ್ಕೆ ಸಿಲುಕುವಿರಿ.

ಕಟಕ

ಆದಾಯದಷ್ಟೇ ಖರ್ಚು ಇರುತ್ತದೆ. ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಸೋದರರೊಳಗೆ ಆಸ್ತಿ ವಿಷಯದಲ್ಲಿ ಮುಸುಕಿನ ಗುದ್ದಾಟ ಇರುತ್ತದೆ. ನೀವು ಆಸೆ ಪಡುತ್ತಿದ್ದ ಆಸ್ತಿಯನ್ನು ಬೇರೆಯವರು ಖರೀದಿಸಬಹುದು. ಕೃಷಿಭೂಮಿ ಕೊಳ್ಳುವ ಯೋಗವಿದೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವ ರೈತರ ಬೆಳೆಗೆ ಬೇಡಿಕೆ ಹೆಚ್ಚುತ್ತದೆ. 

ಸಿಂಹ

ದಾಯಾದಿಗಳಲ್ಲಿ ಬಂದ ವ್ಯಾಜ್ಯಗಳನ್ನು ನಿವಾರಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಬೇಕಾಗಬಹುದು.  ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯವಿದೆ.  ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಕಚ್ಛಾ ವಸ್ತು ಪೂರೈಕೆ ಮಾಡುವವರಿಗೆ ಹೆಚ್ಚಿನ ಮಾಲು ಪೂರೈಕೆ ಮಾಡಲು ಆದೇಶ ದೊರೆಯುತ್ತದೆ. 

ಕನ್ಯಾ

ಸರ್ಕಾರಿ ಉನ್ನತ ಹುದ್ದೆಯಲ್ಲಿರುವವರಿಗೆ ಮೇಲ್ದರ್ಜೆಗೇರುವ ಅವಕಾಶವಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವ್ಯವಹಾರಗಳಲ್ಲಿ ನಿಮ್ಮ ಸ್ಥಾನಮಾನವನ್ನು ಹೋರಾಟ ಮಾಡಿ ಉಳಿಸಿಕೊಳ್ಳಬೇಕಾಗುತ್ತದೆ. ಕೊಟ್ಟ ಸಾಲದ ವಸೂಲಾತಿಗಾಗಿ ಸಂಗಾತಿಯ ಸಹಚರರು ಬರಬಹುದು. ಉನ್ನತ ವಿದ್ಯಾಭ್ಯಾಸವನ್ನು ಮಾಡುತ್ತಿರುವವರ ಸೌಲಭ್ಯಗಳಲ್ಲಿ ಕುಂಠಿತವಾಗಬಹುದು. ಆಸ್ತಿ ಚಿಕಿತ್ಸಕ ವೈದ್ಯರಿಗೆ ಬೇಡಿಕೆ ಬಂದು ಸಂಪಾದನೆ ಹೆಚ್ಚುತ್ತದೆ. 

ತುಲಾ

ಕೃಷಿಕರಿಗೆ ಉತ್ತಮ ಬೆಳೆಯ ಜೊತೆಗೆ ಉತ್ತಮ ಧನಲಾಭವಿರುತ್ತದೆ. ಹಣದ ಒಳಹರಿವು ಉತ್ತಮವಾಗಿದ್ದರೂ ಅದಕ್ಕಿಂತ ಮೀರಿದ ಖರ್ಚು ಇರುತ್ತದೆ. ನಿಮ್ಮ ಒಡೆದು ಆಳುವ ನೀತಿ ಎಲ್ಲರಿಗೂ

ತಿಳಿಯುತ್ತದೆ. ಅದರಲ್ಲೂ ರಾಜಕಾರಣಿಗಳು ಮಾಡುವ ಒಳಸಂಚುಗಳು ಜನರಿಗೆ ತಿಳಿದು ಛೀಮಾರಿ ಹಾಕುವ ಸಂದರ್ಭ ಬರಬಹುದು. ಬಹಳ ಹಿಂದೆ ಕೊಟ್ಟ ಸಾಲ ಈಗ ವಾಪಸ್ ಬರುವ ಸಾಧ್ಯತೆ ಇದೆ.

ವೃಶ್ಚಿಕ

ಶ್ರಮಜೀವಿಗಳಾದ ನಿಮಗೆ ಗುರು-ಹಿರಿಯರ ಆಶೀರ್ವಾದದಿಂದ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಸಾಮಾಜಿಕ ಕೆಲಸಗಳ ಜೊತೆಗೆ ಊರಿನ ಅಭಿವೃದ್ಧಿ ಕೆಲಸಗಳನ್ನು ಮಾಡಲೆತ್ನಿಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿನಿಂದಾಗಿ ಸ್ವಲ್ಪ ಬದಲಾವಣೆ ಬೇಕೆನಿಸುತ್ತದೆ. ತೈಲ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಒದಗುವ ಸಾಧ್ಯತೆ ಇದೆ. 

ಧನು

ಬಂಧುಗಳ ಕುಟುಂಬ ಕಲಹಗಳನ್ನು ರಾಜಿಮಾಡಿಸಿ ವಾತಾವರಣವನ್ನು ತಿಳಿಗೊಳಿಸುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಶೇಷ ಆಸಕ್ತಿ ಬರುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳ ಬಾಧೆಯನ್ನು ಕಾಣಬಹುದು. ಷೇರು ಮಾರುಕಟ್ಟೆ ವ್ಯವಹಾರಗಳು ಅಂತಹ ಲಾಭವನ್ನು ತರುವುದಿಲ್ಲ. ಕುಟುಂಬದ ವ್ಯವಹಾರಗಳಲ್ಲಿ ಅಂತಃಕಲಹ ಜಾಸ್ತಿಯಾಗಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಮಕರ

ಉದ್ದಿಮೆದಾರರು ತಮ್ಮ ಕೆಲಸಗಾರರ ಕೆಲಸದ ಅವಧಿಯನ್ನು ಹೆಚ್ಚಿಸಬಹುದು. ಹಣ್ಣು ಮತ್ತು ತರಕಾರಿ ವ್ಯಾಪಾರಗಾರರಿಗೆ ಉತ್ತಮ ವ್ಯವಹಾರವಿರುತ್ತದೆ. ಧಾರ್ಮಿಕ ದತ್ತಿ ಇಲಾಖೆಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿಗಳು ಬರುತ್ತವೆ. ಸರ್ಕಾರಿ ವ್ಯವಹಾರಗಳ ಒಪ್ಪಂದಗಳಿಂದ ನಿಮಗೆ ಲಾಭವಾಗುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವವರಿಗೆ ಅಭಿವೃದ್ಧಿ ಇರುತ್ತದೆ. 

ಕುಂಭ

ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯವಿರುತ್ತದೆ. ಪ್ರವೃತ್ತಿಯಿಂದ ಹೆಚ್ಚು ಸಂಪಾದನೆಯಾದರೂ ವೃತ್ತಿಯ ಬಗ್ಗೆ ಹೆಚ್ಚಿನ ಗಮನವಿರಲಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ನಿಮ್ಮ ಬೆಳವಣಿಗೆಗಳ ಬಗ್ಗೆ ನಿಮ್ಮ ಬಂಧುಗಳಲ್ಲಿ ಮೆಚ್ಚುಗೆ ವ್ಯಕ್ತವಾದರೂ ಕೆಲವರಿಗೆ ಅಸೂಯೆ ಇರುತ್ತದೆ. ವಾರದ ಮಧ್ಯದಲ್ಲಿ ಸವಿಯಾದ ಭೋಜನದ ಯೋಗವಿದೆ. 

ಮೀನ

ಉದ್ದಿಮೆದಾರರಿಗೆ ವಿದೇಶಿ ಕಂಪನಿಗಳ ಸಹಕಾರ ದೊರೆಯುತ್ತದೆ. ಕೆಲಸಗಳನ್ನು ಪೂರ್ಣಗೊಳಿಸಲು ಕಾಲಮಿತಿಯನ್ನು ಹಾಕಿಕೊಳ್ಳುವುದು ಅತಿ ಅಗತ್ಯ. ವೈಯಕ್ತಿಕ ಕೆಲಸಗಳನ್ನು ಅಡೆತಡೆಯಿಲ್ಲದೇ ಮಾಡಿಕೊಳ್ಳುವಿರಿ. ಆಮದು ರಫ್ತು ವ್ಯವಹಾರ ಮಾಡುವವರಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಕಟ್ಟಡ ನಿರ್ಮಾಣ ಕೆಲಸ ಮಾಡುವವರಿಗೆ ಕೈತುಂಬಾ ಕೆಲಸವಿರುತ್ತದೆ. 

Leave a Comment