Coastal Bulletin

ಬಂಟ್ವಾಳ :ತಾಲೂಕಿನ ಕಾರಣಿಕ ಕ್ಷೇತ್ರ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಉತ್ಸವವು ಸೆ 26ರಿಂದ ಅ 4ರ ವರೆಗೆ ನಡೆಯಲಿದೆ.

ಸೆ.26 ಕ್ಕೆ ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ಮತ್ತು‌ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.30 ಕ್ಕೆ ಯಕ್ಷಜ್ಯೋತಿ ಜ್ಯೋತಿಗುಡ್ಡೆ ಸಂಯೋಜನೆಯಲ್ಲಿ ತರಿಕಿಟ ಕಲಾ ಕಮ್ಮಟ ಜ್ಯೋತಿಗುಡ್ಡೆ ಇದರ ಕಲಾವಿದರಿಂದ ಕೀರ್ತಿಮುಖ ಯಕ್ಷಗಾನ ನಡೆಯಲಿದೆ.

ಸೆ.27 ರಂದು ಸಂಜೆ ಗಂಟೆಗೆ ಯಕ್ಷಶಿಕ್ಷಕ ವೃಂದ ಬೆಂಜನಪದವು ಮತ್ತು ಶ್ರೀ ಅಂಬಿಕಾ ಯಕ್ಷಗಾನ ಕಲಾ ಮಂಡಳಿ ಕಲಾಯಿ ಇವರ ಸಹಯೋಗದಲ್ಲಿ ಅತಿಕಾಯ

ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಅ 2ರ ಸೂರ್ಯೋದಯದಿಂದ ಅ 3ರ ಸೂರ್ಯೋದಯ ವರೆಗೆ ಏಕಹಾ ಭಜನೆ ಹಾಗೂ ಅ.4ರಂದು ರಾತ್ರಿ 9ರಂದು ಆಯುಧ ಪೂಜೆ ನಡೆಯಲಿದೆ.ಪ್ರತಿದಿನ ಸಂಜೆ 6ಗಂಟೆಗೆ ಸಂಧ್ಯಾ ದೀಪ ಪ್ರಜ್ವಲನೆ ನಡೆಯಲ್ಲಿದು ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪ್ರತಿ ದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆಯ ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸಮಿತಿಯ ಪ್ರದಾನ ಕಾರ್ಯದರ್ಶಿ ಉದಯ ಕುಮಾರ್ ಜ್ಯೋತಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment