ಮೇಷ ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮುನ್ನಡೆಯನ್ನು ಕಾಣಬಹುದು. ಮರಮುಟ್ಟುಗಳ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರವಾಗಿ ಉತ್ತಮ ಲಾಭವಿರುತ್ತದೆ.
ವೃಷಭ
ಆತ್ಮಾಭಿಮಾನ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಮನೆಯ ನವೀಕರಣ ಅಥವಾ ವಿಸ್ತರಣೆಯನ್ನು ಮಾಡುವ ಸಾಧ್ಯತೆ ಇದೆ. ನಿಮ್ಮ ವಿಚಾರಗಳನ್ನು ಸಾರ್ವಜನಿಕವಾಗಿ ಮಂಡಿಸಿ ಜನರ ಮನಸ್ಸನ್ನು ಗೆಲ್ಲುವಿರಿ. ಗೆಳೆಯರೊಂದಿಗೆ ಪ್ರವಾಸ ಹೋಗಲು ನಿರ್ಧಾರ ಮಾಡುವಿರಿ.
ಮಿಥುನ
ವಿಲಾಸಿ ಜೀವನದಿಂದ ಸ್ವಲ್ಪಮಟ್ಟಿಗೆ ದೂರವಿರುವುದು ಬಹಳ ಒಳ್ಳೆಯದು. ಕಬ್ಬಿಣ ಮತ್ತು ಸಿಮೆಂಟ್ ತಯಾರಕರಿಗೆ ಮತ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರವಿರುತ್ತದೆ.
ಕಟಕ
ನಾಲ್ಕು ಕಾಲಿನ ಪ್ರಾಣಿಗಳನ್ನು ಸಾಕಾಣಿಕೆ ಮಾಡಿ ಮಾರುವವರಿಗೆ ಲಾಭವಿರುತ್ತದೆ. ಧನ ಆದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಬಂಧು-ಮಿತ್ರರಿಂದ ಆಯೋಜಿಸಲ್ಪಟ್ಟ ಕುಟುಂಬ ಮಿಲನದಲ್ಲಿ ಭಾಗವಹಿಸುವಿರಿ.
ಸಿಂಹ
ಸ್ವಲ್ಪ ದಿನದ ಮಟ್ಟಿಗೆ ದೂರಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ವಿವಾಹ ಅಪೇಕ್ಷಿತರಿಗೆ ವಿವಾಹ ಸಂಬಂಧ ಒದಗುವ ಸಂದರ್ಭವಿದೆ. ವೃತ್ತಿಯಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆಯನ್ನು ಕಾಣಬಹುದು.
ಕನ್ಯಾ
ಮಿತ್ರರಿಂದ ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಕಾರ ದೊರೆಯುತ್ತದೆ. ಆರ್ಥಿಕತೆಯು ಚೇತರಿಕೆಯತ್ತ ಸಾಗುತ್ತದೆ. ವೃತ್ತಿಯಲ್ಲಿ ಸ್ಥಾನಮಾನದ ಬಗ್ಗೆ ಹಿರಿಯ ಅಧಿಕಾರಿಗಳೊಡನೆ ಚರ್ಚೆ ಮಾಡುವಿರಿ.
ತುಲಾ
ಆರಕ್ಷಕ ಠಾಣೆಯಲ್ಲಿರುವ ಕೆಲವರಿಗೆ ಬಡ್ತಿ ದೊರೆಯಬಹುದು. ಕ್ರೀಡಾಪಟುಗಳಿಗೆ ಹೆಚ್ಚಿನ
ಯಶಸ್ಸು ದೊರೆಯುತ್ತದೆ. ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ
ವೃಶ್ಚಿಕ
ದೂರದೂರಿಗೆ ನಿಮ್ಮ ವ್ಯವಹಾರ ವಿಸ್ತರಣೆಯ ಸಲುವಾಗಿ ಮಾಡುವ ಪ್ರಯಾಣ ಉತ್ತಮ ಫಲಿತಾಂಶವನ್ನು ಕೊಡುತ್ತದೆ. ರಾಸಾಯನಿಕ ಮತ್ತು ಔಷಧಿ ವ್ಯಾಪಾರವನ್ನು ಮಾಡುವವರ ವ್ಯವಹಾರದಲ್ಲಿ ಹೆಚ್ಚಳವನ್ನು ಕಾಣಬಹುದು.
ಧನು
ನಿಮ್ಮ ಇಷ್ಟದಂತೆ ಕೆಲಸ ಕಾರ್ಯಗಳು ಆಗುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸದ್ಯದಲ್ಲೇ ಅನಿವಾರ್ಯವಾಗಿ ನಿಮ್ಮ ಸ್ನೇಹಿತನ ಬೆನ್ನಿಗೆ ನೀವು ನಿಲ್ಲಬೇಕಾದ ಸಂದರ್ಭ ಬರುತ್ತದೆ.
ಮಕರ
ವಾಣಿಜ್ಯ ಬೆಳೆಗಳನ್ನು ಬೆಳೆಯುವವರಿಗೆ ಹೆಚ್ಚಿನ ಹಣ ಬರುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ತೋರುವರು. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಗೌರವಾದರಗಳು ದೊರಕುವ ಸಾಧ್ಯತೆಗಳಿವೆ.
ಕುಂಭ
ಬದುಕಿಗೊಂದು ಹೊಸ ಆಯಾಮವನ್ನು ಕಂಡುಕೊಳ್ಳುವಿರಿ. ನಿಮ್ಮ ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಇರುತ್ತದೆ. ವ್ಯಾಜ್ಯವೊಂದರ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆಯನ್ನು ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಹಣಕಾಸಿನ ಅಡಚಣೆಗಳು ಸ್ವಲ್ಪ ಕಡಿಮೆ ಅನಿಸುತ್ತವೆ.
ಮೀನ
ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ತಪ್ಪು ತೀರ್ಮಾನಗಳಿಂದ ವೈಮನಸ್ಯ ಉಂಟಾಗಬಹುದು.














