ಮಂಗಳೂರು : ಇಲ್ಲಿನ ಉಳಾಯಿಬೆಟ್ಟು ಗ್ರಾಮದ ಪ್ರೀತಿ ಗೇಮ್ಸ್ (ರಿ)ಇದರ 39 ನೇ ವಾರ್ಷಿಕೋತ್ಸವವು ಇತೀಚೆಗೆ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆಯೊಂದಿಗೆ ಪೆರ್ಮಂಕಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾದ,ಸಾರ್ವಜನಿಕ ಬಸ್ಸು ತಂಗುದಾಣ, ಪುಸ್ತಕ ಗೂಡು , ಮಾರ್ಗಸೂಚಿ ಫಲಕ, ಸಂಘದ ಮೊದಲ ಮಹಡಿಯ ಉದ್ಘಾಟನೆಯು ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಕೃಷ್ಣಪ್ರಕಾಶ್ ಉಳಿತ್ತಾಯ, ಪದ್ಮನಾಭ ಕೋಟ್ಯಾನ್, ಲತಾ ಜಗನ್ನಾಥ ಶೆಟ್ಟಿ, ಹರಿಕೇಶ ಶೆಟ್ಟಿ ಅಂತೋನಿ ಡಿಸೋಜ, ರತ್ನ ಸುರೇಶ,ಪದ್ಮನಾಭ ಶೆಟ್ಟಿ ಶೈಲೇಂದ್ರ ಸುವರ್ಣ, ಶಶಿಕಲಾ, ದಿನೇಶ್, ಜಾನ್ ಮೊರಸ್, ಗುಣಕರ ಸಾಲಿಯಾನ್, ಕಿರಣ್ ಪಕ್ಕಳ,ಅನಿತಾ ವಿ ಕ್ಯಾಥರೀನ್ , ರವಿರಾಜ್ ರಾವ್, ಪ್ರಶಾಂತ್ ಸಲ್ದಾನ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ, ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ರುಕ್ಮಯ ಪೂಜಾರಿ ಸ್ವಾಗತಿಸಿ. ಶ್ರೀನಾಥ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.