ಬ್ರಹ್ಮರಕೂಟ್ಲು: ಭಾರತ್ ಆಗ್ರೋವೆಟ್ ಕೊಡುಗೆಯ ಬ್ರಹ್ಮಶ್ರೀ ರಿಕ್ಷಾ ನಿಲ್ದಾಣ ಉದ್ಘಾಟನೆ.

Coastal Bulletin
ಬ್ರಹ್ಮರಕೂಟ್ಲು: ಭಾರತ್ ಆಗ್ರೋವೆಟ್ ಕೊಡುಗೆಯ ಬ್ರಹ್ಮಶ್ರೀ ರಿಕ್ಷಾ ನಿಲ್ದಾಣ ಉದ್ಘಾಟನೆ.

ಬಂಟ್ವಾಳ :ಭಾರತ್ ಆಗ್ರೋವೆಟ್ ಇಂಡಸ್ಟ್ರಿಸ್ ಫ್ರೈ ಲಿ ಇವರು ಬ್ರಹ್ಮಶ್ರೀ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ (ರಿ ) ಇವರಿಗೆ ಕೊಡುಗೆಯಾಗಿ ನಿರ್ಮಿಸಿ ಕೊಟ್ಟ ಬ್ರಹ್ಮಶ್ರೀ ರಿಕ್ಷಾ ನಿಲ್ದಾಣವನ್ನು  ಜ್ಯೋತಿಷಿ ಅನಿಲ್ ಪಂಡಿತ್ ವಲವೂರು ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಥಿತಿಗಳಾಗಿ ಪ್ರಗತಿಪರ ಕೃಷಿಕ ಜ್ಯೋತಿoದ್ರ ಶೆಟ್ಟಿ ಮುಂಡಾಜೆಗುತ್ತು, ಯುವ ನ್ಯಾಯವಾದಿ ಅರುಣ್ ರೋಷನ್ ಡಿಸೋಜ, ತಾ ಪಂ ಮಾಜಿ ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ರಕೆರೆ, ಬ್ರಹ್ಮರಕೂಟ್ಲು ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಶಶಿಧರ ಬ್ರಹ್ಮರಕೂಟ್ಲು, ಕಳ್ಳಿಗೆ ಗ್ರಾ ಪಂ ಸದಸ್ಯರಾದ

ಮನೋಜ್ ವಳವೂರ್,ರವಿರಾಜ್ ಜೈನ್ ಮಾಡಂಗೆ, ಸಾಮಾಜಿಕ ಕಾರ್ಯಕರ್ತೆ ಪ್ರಿಯ ಸುನೀಲ್ ದರಿಬಾಗಿಲು, ಸಮಿತಿಯ ಅಧ್ಯಕ್ಷರಾದ ರೂಪೇಶ್ ಜ್ಯೋತಿಗುಡ್ಡೆ, ಹಿರಿಯ ರಿಕ್ಷಾ ಚಾಲಕ ಸತೀಶ್ ಬ್ರಹ್ಮರಕೂಟ್ಲು ಮತ್ತಿತರರು ಉಪಸ್ಥಿತರಿದ್ದರು. ಕುಮಾರಿ ಧರಿತ್ರಿ ಪ್ರಾರ್ಥಿಸಿ, ಪ್ರವೀಣ್ ಲೋಬೋ ಸ್ವಾಗತಿಸಿ,ಪೂವಪ್ಪ ದರಿಬಾಗಿಲು ಧನ್ಯವಾದವಿತ್ತು, ಮೊಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

Leave a Comment