ತುಂಬೆ :ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣೆ

Coastal Bulletin
ತುಂಬೆ :ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣೆ

ಬಂಟ್ವಾಳ :ಜೂನ್ 14: ಉಳ್ಳಾಲ ಶ್ರೀ ಭಗವತಿ ತೀಯಾ ಸಮಾಜ ಸೇವಾ ಸಮಿತಿ ತುಂಬೆ–ಪುದು, ಮೇರಮಜಲು, ಕೊಡ್ಮಾನ್ ಹಾಗೂ ಅಡ್ಯಾರ್ ಗ್ರಾಮಗಳ ಜಂಟಿ ಆಶ್ರಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ತುಂಬೆ ದರ್ಖಾಸು ದಿ. ಲಿಂಗಪ್ಪ ಸುವರ್ಣರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜಮುಖಿ ಚಿಂತಕ ಹಾಗೂ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಬಟ್ನಗರ್ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರದ ಅಧ್ಯಕ್ಷ ಹಾಗೂ ಗುರಿಕಾರರಾದ ಚಿದಾನಂದ ಗುರಿಕಾರ ನಂದ್ಯ ಅವರು ಸಮಾಜದ ಏಳಿಗೆ, ಸಂಸ್ಕಾರ, ಆಚಾರ-ವಿಚಾರಗಳು ಮತ್ತು ಯುವಜನರು ಉನ್ನತ ಸ್ಥಾನಗಳನ್ನು ಅಲಂಕರಿಸುವ ಅಗತ್ಯತೆಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಮೋಹನ್ ಬಿ ತುಂಬೆ ಅವರು ಸಮಿತಿಯ ಇದುವರೆಗಿನ ಕಾರ್ಯಚಟುವಟಿಕೆಗಳು, ಸಮಾಜಮುಖಿ ಸೇವೆಗಳು, ಮರಣ ಸಹಾಯ ನಿಧಿ

ಸೇರಿದಂತೆ ವಿವಿಧ ಯೋಜನೆಗಳು ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಹಿರಿಯರಾದ ಸದಾಶಿವ ತುಂಬೆ ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಉಪನ್ಯಾಸಕಿ ಕವಿತಾ ಕೆ. ಪುತ್ತೂರು ತೀಯಾ ಸಮಾಜದ ಅಧ್ಯಕ್ಷರಾದ ಸಂತೋಷ್ ಮುರ, ಗೌರವಾಧ್ಯಕ್ಷರಾದ ರಾಮಚಂದ್ರ ಬಂಗೇರ ಮಾರಿಪಳ್ಳ, ಸುರೇಶ್ ಸುವರ್ಣ ಕುಮ್ಡೇಲು, ಚರಿತ್ ಮೇರಮಜಲು, ತಾರನಾಥ್ ಕೊಡ್ಮಾನ್ ಉಪಸ್ಥಿತರಿದ್ದರು.

ಕಾರ್ಯದರ್ಶಿಯಾದ ಹರೀಶ್ ಸುವರ್ಣ ಬಜಾಲ್, ಕೋಶಾಧಿಕಾರಿ ಗೋಪಾಲಕೃಷ್ಣ ದರ್ಖಾಸು,ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯೆಯರು, ವಿವಿಧ ಗ್ರಾಮಗಳ ಹಿರಿಯರು, ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ವಿಶ್ವನಾಥ್ ಸ್ವಾಗತಿಸಿ ಮಹಿಳಾ ಸಮಿತಿಯ ಅಧ್ಯಕ್ಷೆ ಕಲಾವತಿ ಸುರೇಶ್ ಧನ್ಯವಾದವಿತ್ತು  ಜಗದೀಶ್ ನಿರೂಪಿಸಿದರು

Leave a Comment