ಬಂಟ್ವಾಳ :ಫೋಟೋ ಗ್ರಾಫರ್ಸ್ ವತಿಯಿಂದ ನಿವೃತ್ತ ಸೇನಾನಿಗೆ ಗೌರವ.

Coastal Bulletin
ಬಂಟ್ವಾಳ :ಫೋಟೋ ಗ್ರಾಫರ್ಸ್ ವತಿಯಿಂದ ನಿವೃತ್ತ ಸೇನಾನಿಗೆ ಗೌರವ.

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ದ. ಕ. ಉಡುಪಿ ಜಿಲ್ಲೆ ಬಂಟ್ವಾಳ ವಲಯದಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ  ನಿವೃತ್ತ ಸೇನಾನಿ  ಶ್ರೀ ಡಿ. ಶಿವರಾಮ್ ರಾವ್ ಬೈರಿಕಟ್ಟೆ ಯವರನ್ನು ಭಾರತ ಸೇವಾಶ್ರಮ ಕನ್ಯಾನ ದಲ್ಲಿ ವಲಯದಿಂದ ಗೌರವವಿಸಲಾಯಿತು.

ನಂತರ ಸೇನಾನಿಯವರು ಭಾರತಾಂಬೆಯ ರಕ್ಷಣೆಯಲ್ಲಿ ಸೈನಿಕನಾಗಿ ಸೇವೆಯನ್ನು ನೀಡಿದ ವಿವರವನ್ನು ಸದಸ್ಯರಿಗೆ ನೀಡಿದರು.

ಈ ಸಂಧರ್ಭದಲ್ಲಿ ಭಾರತ ಸೇವಾಶ್ರಮ ಕನ್ಯಾನದ ಕಾರ್ಯದರ್ಶಿ ಯಾದ ಶ್ರೀ ಈಶ್ವರ್ ಭಟ್, ವಲಯಧ್ಯಕ್ಷರಾದ ರಾಜೇಂದ್ರ ಕೆ. ಸೇನಾನಿ ಧರ್ಮಪತ್ನಿ ಶ್ರೀಮತಿ ಸುನಂದಾ, ಮನೋಹರ ದೇಸಾಯಿ ಬಿಜಾಪುರ,

ಅರುಂದತಿ ಬಿಜಾಪುರ, ಮಾಜಿ ಅಧ್ಯಕ್ಷರು ಗಳಾದ ಕುಮಾರಸ್ವಾಮಿ, ದಯಾನಂದ್ ಬಂಟ್ವಾಳ್, ಆನಂದ್ ಯಾನ್, ಹರೀಶ್ ಕುಂದರ್, ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿ ರವಿಕಲ್ಪನೆ, ಉಪಾಧ್ಯಕ್ಷರಾದ ಹರೀಶ್ ನಾಟಿ, ಸದಸ್ಯರಾದ  ವಿಕೇಶ್,ಗೋಪಾಲ ಕೃಷ್ಣ ವಿಟ್ಲ, ವಿವೇಕ್, ಶ್ರೀಕೃಷ್ಣ ಭಟ್ ಯಸ್, ಮೋಹನ್ ದಾಸ್ ರವರು ಉಪಸ್ಥಿತರಿದ್ದರು

Leave a Comment