ನೆತ್ತರಕೆರೆ: ಸರ್ಕಾರಿ ಶಾಲೆಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯದಿನಾಚರಣೆ. ವಿದ್ಯಾರ್ಥಿಗಳ ಆಕರ್ಷಕ ಕವಾಯತು, ಜಾದೂ ಪ್ರದರ್ಶನ.

Coastal Bulletin
ನೆತ್ತರಕೆರೆ: ಸರ್ಕಾರಿ ಶಾಲೆಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯದಿನಾಚರಣೆ. ವಿದ್ಯಾರ್ಥಿಗಳ ಆಕರ್ಷಕ ಕವಾಯತು, ಜಾದೂ ಪ್ರದರ್ಶನ.

ಬಂಟ್ವಾಳ :ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕಳ್ಳಿಗೆ ನೆತ್ತರಕೆರೆ ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ ಅವರು ಧ್ವಜಾರೋಹಣ ನೆರವೇರಿಸಿದರು, ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಂಡಾಜೆಗುತ್ತು ಜ್ಯೋತಿಂದ್ರ ಶೆಟ್ಟಿ,ಎಸ್‌ಡಿಎಂಸಿ ಮಾಜಿ ಅಧ್ಯಕ್ಷರುಗಳಾದ  ಸುರೇಶ್ ಭಂಡಾರಿ ಅರ್ಬಿ, ಭಾಸ್ಕರ್ ನೆತ್ತರಕೆರೆ, ಚಂದ್ರಹಾಸ ನೆತ್ತರಕೆರೆ,ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ್ ಎನ್, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಮಹೇಶ್,ಉದ್ಯಮಿ ಕಿಶೋರ್ ಕುಮಾರ್, ನೇತ್ರಾವತಿ ಮಾತ್ರ ಮಂಡಳಿಯ ಅಧ್ಯಕ್ಷೆ ಸುಶೀಲಾ ಶೇಖರ್, ನಿವೃತ್ತ ಅಂಗನವಾಡಿ ಶಿಕ್ಷಕಿ ಶಶಿಕಲಾ, ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯಾ ಬ್ರೇಗ್ಸ್,ಹಾಗೂ ಎಸ್‌ಡಿಎಂಸಿ ಉಪಾಧ್ಯಕ್ಷರು ಹಾಗೂ ಸದಸ್ಯರು,ಪೋಷಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸ್ಥಳೀಯರು ಉಪಸ್ಥಿತರಿದ್ದರು.


ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ

ವಿದ್ಯಾರ್ಥಿಗಳು ವಿವಿಧ ಬಗೆಯ ಸಾಮೂಹಿಕ ಕವಾಯತುಗಳ ಆಕರ್ಷಕ ಪ್ರದರ್ಶನ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ಸುರೇಶ್ ಜಾದು ತಂಡದ ವತಿಯಿಂದ ಮನರಂಜನೀಯ ಜಾದು ಪ್ರದರ್ಶನ ನಡೆಯಿತು.

ಶಿಕ್ಷಕಿ  ಜಸಿಂತಾ ರೊಡ್ರಿಗಸ್ ಅವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿ ನಿಶಾ ಅವರು ವಂದಿಸಿದರು. ಶಿಕ್ಷಕಿ ಮೋಹಿನಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

ಶಿಕ್ಷಕರಾದ ಕೆ.ಜೆ. ಮರಿಯಾ ಸೆಲಿನ್, ಹನಮಂತಪ್ಪ ಗುತ್ತಲ, ಚೇತನ, ಆಶಿಕಾ, ಮನಿಷಾ ಹಾಗೂ ದೀಕ್ಷಾ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ದೇಶಭಕ್ತಿ, ಸಂಭ್ರಮ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣದೊಂದಿಗೆ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಸಿಹಿ ಹಂಚಿ ಸಂಭ್ರಮಿಸಲಾಯಿತು.

Leave a Comment