ಬಂಟ್ವಾಳ: ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ. ಯುವಜನತೆಯಿಂದ ದೇಶ ಮತ್ತಷ್ಟು ಬಲಿಷ್ಠ: ರಾಜೇಶ್ ನಾಯ್ಕ್.

Coastal Bulletin
ಬಂಟ್ವಾಳ: ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ. ಯುವಜನತೆಯಿಂದ ದೇಶ ಮತ್ತಷ್ಟು ಬಲಿಷ್ಠ: ರಾಜೇಶ್ ನಾಯ್ಕ್.

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣ ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಯುವಜನತೆಯಿಂದ ದೇಶ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂದರು.

ಸಜೀಪಮೂಡ ಸರಕಾರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ರಿತ್ವಿಕ್ ಪ್ರಧಾನ ಭಾಷಣ ಮಾಡಿದರು. ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಪರಿಸರ ರಕ್ಷಣೆ, ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ ಎಂದರು.

ಸಮಯಪ್ರಜ್ಞೆ ಮೆರೆದು ಸಂಭವನೀಯ ಅನಾಹುತವನ್ನು ಶಾಲೆಯಲ್ಲಿ ತಪ್ಪಿಸಿದ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್

ಅವರನ್ನು ಸನ್ಮಾನಿಸಿದ್ದಲ್ಲದೆ, ಆತನ ಪೋಷಕರಾದ ಸುರೇಶ್ ಮತ್ತು ಜಯಂತಿ ಅವರನ್ನು ಗೌರವಿಸಲಾಯಿತು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ವಿ.ಜಯಂತಿ ವಿ. ಪೂಜಾರಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಪಂಚಾಯತ್ ಇಓ ಸಚಿನ್ ಕುಮಾರ್ ಸ್ವಾಗತಿಸಿದರು. ಕಳ್ಳಿಗೆ ನೆತ್ರಕೆರೆ ದ.ಕ.ಜಿ. ಹಿ.ಪ್ರಾ.ಶಾಲೆಯ ಶಿಕ್ಷಕ ಅವಿನಾಶ್ ಡಿಸೋಜ ನಿರೂಪಿಸಿದರು.

Leave a Comment