ಕೊಯಿಲ: ಬೊಬ್ಬರ್ಯ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಚಾಲನೆ.

Coastal Bulletin
ಕೊಯಿಲ: ಬೊಬ್ಬರ್ಯ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಚಾಲನೆ.

ಬಂಟ್ವಾಳ:ಇಲ್ಲಿನ ಕೊಯಿಲ ಗ್ರಾಮದ ಬಬ್ಬರಬೈಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಬೊಬ್ಬರ್ಯ ದೈವಸ್ಥಾನಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿತು. ಅರಳ ಶ್ರೀ ಗರುಡ ಮಹಾಕಾಳಿ ದೇವಳದ ಪ್ರಧಾನ ಅರ್ಚಕ ಎ.ಹರೀಶ ಭಟ್ ಶಿಲಾನ್ಯಾಸ ನೆರವೇರಿಸಿದರು.

ಕಳೆದ 13 ವರ್ಷಗಳ ಹಿಂದೆ ಸ್ಥಳೀಯ ಕೊಯಿಲ ಮತ್ತು ಪಂಜಿಕಲ್ಲು ಗ್ರಾಮದ ಗಡಿ ಭಾಗದ ಬಬ್ಬರಬೈಲು ಎಂಬಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕರಾವಳಿ ಮೀನುಗಾರರು ಆರಾಧಿಸುವ ಬೊಬ್ಬರ್ಯ ದೈವಸ್ಥಾನ ನಿರ್ಮಿಸಿ ದೈವ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನಡೆದಿತ್ತು. ಇದೇ ಪರಿಸರದಲ್ಲಿ ಅಣ್ಣಪ್ಪ ಪಂಜುರ್ಲಿ , ಗುಳಿಗ ಮತ್ತು ಕೊರಗಜ್ಜ ಗುಡಿ ನಿರ್ಮಾಣಗೊಂಡು ಕಲಶಾಭಿಷೇಕವೂ ನಡೆದಿದೆ ಎಂದು ಆಡಳಿ ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ ತಿಳಿಸಿದ್ದಾರೆ.

ಆಡಳಿತ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿ ಬ್ಯಾರಿಕೋಡಿ, ಮಾವಂತೂರು ಬಲವಂಡಿ ಕ್ಷೇತ್ರದ ಗಡಿ ಪ್ರಧಾನ ಎಂ. ದುರ್ಗಾದಾಸ್ ಶೆಟ್ಟಿ,  ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಚೌಟ, ಪ್ರಮುಖರಾದ ದೇರಾಜೆಗುತ್ತು

ಯಶೋಧರ ರೈ, ಹರ್ಷೇಂದ್ರ  ಹಗ್ಡೆ ಅಂತರಗುತ್ತು, ಶೇಖರ ಅಂಚನ್ ಪಿಲ್ಕಾಜೆಗುತ್ತು, ರಾಜೇಶ್ ಜೈನ್ ಪಡ್ರಾಯಿಗುತ್ತು, ರಾಜೇಶ್ ಸಪಲ್ಯ ಗೋವಿಂದಬೆಟ್ಟ, ಸುಧೀರ್ ಶೆಟ್ಟಿ ಹೋರಂಗಳ, ರಾಜೇಶ್ ಆಚಾರ್ಯ ಪಟ್ರಾಡಿ, ದಿನೇಶ ಶೆಟ್ಟಿ ಮಡಂದೂರು, ಜಯಂತ ಪೂಜಾರಿ ಪಿಲ್ಕಾಜೆ, ಗಂಗಾಧರ ಪಿಲ್ಕಾಜೆ, ಕಿರಣ್ ಕುಮಾರ್ ಮಂಜಿಲ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸಂತೋಷ್ ಕುಮಾರ್ ರಾಯಿಬೆಟ್ಟು, ಪ್ರಭಾಕರ ಪ್ರಭು ಕರ್ಪೆ , ಉಮೇಶ ಸಪಲ್ಯ ಗೋವಿಂದಬೆಟ್ಟ, ಕೇಶವ ಶೆಟ್ಟಿ ಪಿಲ್ಕಾಜೆ, ಜಿ.ದಾಮೋದರ ಬಂಗೇರ, ಚಂದ್ರಶೇಖರ ಶೆಟ್ಟಿ ಅರಳ, ಸುಕುಮಾರ್ ಶೆಟ್ಟಿ ಅರಳ, ಚಂದ್ರಶೇಖರ ಗೌಡ ಕಾರಂಬಡೆ, ಕೆ.ಪರಮೇಶ್ವರ ಪೂಜಾರಿ, ಜಯರಾಮ ಅಡಪ, ಪ್ರವೀಣ ಅಂಚನ್ ಕೊಯಿಲ, ಜನಾರ್ದನ ಪೂಜಾರಿ ಪಿಲ್ಕಾಜೆ ಮತ್ತಿತರರು ಇದ್ದರು.

Leave a Comment