breaking news

ಕೊಡ್ಮಾಣ್:ಶ್ರೀ ಶಾರದಾ ಪೂಜಾ ಮಹೋತ್ಸವದ ಸಂಭ್ರಮ, ಧಾರ್ಮಿಕ ಸಭೆ. ಸಂಸ್ಕಾರ ಮತ್ತು ನೈತಿಕ ಶಿಕ್ಷಣದಿಂದ ರಾಷ್ಟ್ರಭಕ್ತಿ:ನಳಿನ್ ಕುಮಾರ್ ಕಟೀಲ್

Coastal Bulletin
ಕೊಡ್ಮಾಣ್:ಶ್ರೀ ಶಾರದಾ ಪೂಜಾ ಮಹೋತ್ಸವದ ಸಂಭ್ರಮ, ಧಾರ್ಮಿಕ ಸಭೆ. ಸಂಸ್ಕಾರ ಮತ್ತು ನೈತಿಕ ಶಿಕ್ಷಣದಿಂದ ರಾಷ್ಟ್ರಭಕ್ತಿ:ನಳಿನ್ ಕುಮಾರ್ ಕಟೀಲ್

ಬಂಟ್ವಾಳ :ಶಾಲೆಯ ಕಟ್ಟಡದ ವೈಭವೀಕರಣಕ್ಕಿಂತ ಮಕ್ಕಳಿಗೆ ವಿದ್ಯೆ, ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವುದು ಮುಖ್ಯ. ರಾಷ್ಟ್ರ ಚಿಂತನೆಯ ನೇತಾರ ದಿ. ಕೊಡ್ಮಾಣ್ ಕಾಂತಪ್ಪ ಶೆಟ್ಟಿಯವರ ಗರಡಿಯಲ್ಲಿ ಪಳಗಿದ ತಂಡವು ಶಾರದೋತ್ಸವದ ಮೂಲಕ ಇಂತಹ ಸಮಾಜ ನಿರ್ಮಾಣದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ನವರಾತ್ರಿಯು ದುಷ್ಟ ಗುಣಗಳನ್ನು ತೊರೆದು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಸಂಸ್ಕಾರ ಮತ್ತು ನೈತಿಕ ಶಿಕ್ಷಣದಿಂದ ಮಕ್ಕಳು ರಾಷ್ಟ್ರಭಕ್ತ ನಾಗರಿಕರಾಗಲು ಸಾಧ್ಯ. ದೇವರು ನಮ್ಮೊಂದಿಗಿದ್ದರೆ ಜಯ ಖಂಡಿತ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್  ಹೇಳಿದರು.

ಅವರು ಶ್ರೀ ಶಾರದಾ ಪೂಜಾ ಸೇವಾ ವೇದಿಕೆ, ಕೊಡ್ಮಾಣ್ ಇದರ ಅಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ 3ನೇ ದಿನದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.


ಆತ್ಮಶಕ್ತಿ ವಿವಿದ್ದೋದ್ದೇಶ ಸಂಘದ ಅಧ್ಯಕ್ಷ ಸಹಕಾರಿ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ತಾನು ಕಲಿತ ಶಾಲೆಯ ಮೇಲಿನ ಅಭಿಮಾನದಿಂದ ಹಳೆಯ ವಿದ್ಯಾರ್ಥಿಗಳೆಲ್ಲರೂ ಒಂದಾಗಿ ಶಾರದೋತ್ಸವವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಶಾಲೆಯೊಂದಿಗಿನ ನಂಟನ್ನು ಗಟ್ಟಿಗೊಳಿಸುವುದರ ಜೊತೆಗೆ ಊರಿನ ಒಗ್ಗಟ್ಟು ಮತ್ತು ಸಂಸ್ಕಾರವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು,


ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ ಶಾರದಾ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಕೊಡ್ಮಾಣ್ ಮಾತನಾಡಿ, ಈ ಮಣ್ಣಿನ ಗುಣವೇ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಕಾರ್ಯ ನಿರಂತರ ಇಲ್ಲಿ ನಡೆಯುತ್ತಿರುವುದು ಶ್ಲಾಘನೀಯ.ದೇವರ ಪೂಜೆಯ ಫಲ ನಮ್ಮೆಲ್ಲರಿಗೂ ಪ್ರಾಪ್ತಿ ಯಾಗಲಿ ಎಂದು ಹೇಳಿದರು.


ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಶಕುಂತಲಾ ಭಟ್ ನಡುಬೈಲು ಹಾಗೂ ಕೊಡ್ಮಾಣ್  ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ  ಪ್ರೇಮ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು, ಎಸ್ ಎಸ್ ಎಲ್ ಸಿ ಸಾಧಕ

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.


ವಿ ಹಿಂ ಪ ಗ್ರಾಮಾಂತರ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಮಂಗಳೂರು ಕೆನರಾ ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ಸುಶಾಮ ಸಿ,ಕೊಡ್ಮಾಣ್  ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಶುಭ ಹಾರೈಸಿದರು.


ವೇದಿಕೆಯಲ್ಲಿ ಅಜಿತ್ ಚೌಟ ದೇವಸ್ಯ ಉದ್ಯಮಿ ನೈಜೀರಿಯಾ, ಬಾ ಜ ಪ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು,ಪ್ರಗತಿಪರ ಕೃಷಿಕರು ಶಕುಂತಲಾ ಭಟ್ ನಡುಬೈಲು, ಭಾಸ್ಕರ್ ರಾವ್ ಟಿ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಕೊಡ್ಮಾಣ್, ಮೇರಮಜಲು ಗ್ರಾ ಪಂ ನಿಕಟಪೂರ್ವ ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ,ಮೇರಮಜಲು ಗ್ರಾ ಪಂ ನಿಕಟಪೂರ್ವ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿಯ ಪ್ರ ಕಾರ್ಯದರ್ಶಿ ಹರೀಶ್ ಕಲ್ಲಜಾಲ್, ಕೋಶಾಧಿಕಾರಿ ಸಚಿನ್ ಪೂಜಾರಿ ಪಿಲಿಮಾರ್ ಉಪಸ್ಥಿತರಿದ್ದರು,


ಸಂಯೋಜಕ ಗೋಪಾಲ್ ಕುಲಾಲ್ ಗೋವಿಂತೋಟ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶ್ರೇಯಾ ನಿತಿನ್ ಶೆಟ್ಟಿ ಪ್ರಾರ್ಥಿಸಿದರು, ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ ಧನ್ಯವಾದವಿತ್ತು, ಮನೋಜ್ ವಾಮಂಜೂರ್ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಪೊಳಲಿ ಶ್ರೀ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾಯಾಗ ನಡೆದು ಪೂರ್ಣಹುತಿ ಬಳಿಕ ಅನ್ನಸಂತರ್ಪಣೆ ಜರುಗಿತು.

Leave a Comment