Coastal Bulletin

ಮೇಷ ಹಣದ ಒಳಹರಿವು ಉತ್ತಮವಾಗಿರುತ್ತದೆ. ನಿರೀಕ್ಷಿತ ಮೂಲಗಳಿಂದ ಆದಾಯ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಲಾಭವಿರುತ್ತದೆ. ಕುಟುಂಬದಲ್ಲಿ ಮಹಿಳೆಯರ ನಡುವೆ ಮನಃಸ್ತಾಪ ತಲೆದೋರಬಹುದು.

ವೃಷಭ

ಆರ್ಥಿಕ ಸಂಪನ್ಮೂಲಗಳು ಸಮಾಧಾನ ಪಡುವಷ್ಟು ಇರುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಏರಿಳಿತಗಳನ್ನು ಕಾಣಬಹುದು. ಭೂವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಮಾತಿನ ಬಗ್ಗೆ ಗೃಹಿಣಿಯರು ಅತ್ಯಂತ ಜಾಗರೂಕರಾಗಿರುವುದು ಬಹಳ ಒಳ್ಳೆಯದು.

ಮಿಥುನ

ವಾರದ ಆರಂಭದಲ್ಲಿ ಬಹಳ ಸಂತೋಷವಿರುತ್ತದೆ. ಬಂಧುಗಳ ಮಕ್ಕಳ ನಡುವೆ ಪ್ರೀತಿ ಪ್ರೇಮ ಬೆಳೆಯಬಹುದು. ಸ್ವಂತ ಉದ್ದಿಮೆ ಸ್ಥಾಪಿಸುವ ಬಗ್ಗೆ ಸಾಕಷ್ಟು ಆಲೋಚನೆ ನಡೆಯುತ್ತದೆ. ನಿಮ್ಮ ಕೆಲವು ಸಮಸ್ಯೆಗಳನ್ನು ನೀವೇ ಕುಳಿತು ಬಗೆಹರಿಸಿಕೊಳ್ಳುವಿರಿ. 

ಕಟಕ

ಗೌರವಾನ್ವಿತ ಜನರ ಸಂಪರ್ಕಗಳು ದೊರೆಯುತ್ತವೆ. ಮಹಿಳೆಯರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರ ಇರಲಿ. ಮೋಸ ಹೋಗುವ ಸಾಧ್ಯತೆಗಳಿವೆ. ಬಾಂಧವರ ನಡುವೆ ಸಂಪರ್ಕ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಹೆಚ್ಚಿನ ಒತ್ತಡ ಕಂಡು ಬಂದರೂ ಅದನ್ನು ನಿಭಾಯಿಸುವ ಶಕ್ತಿ ಇರುತ್ತದೆ.

ಸಿಂಹ

ಕಮಿಷನ್ ಏಜೆಂಟರುಗಳಿಗೆ ಉತ್ತಮ ಕಮಿಷನ್ ದೊರೆಯುವ ಸಂದರ್ಭ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಉದ್ಯೋಗಿಗಳಿಗೆ ಹಿತಶತ್ರುಗಳ ಕಾಟ ಇರುತ್ತದೆ. ಕುಟುಂಬದಲ್ಲಿ ಹೆಚ್ಚಿನ ಸಂತೋಷವನ್ನು ಕಾಣುವಿರಿ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ಇರುತ್ತದೆ. 

ಕನ್ಯಾ

ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಬಹಳ ಉತ್ತಮ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚಿನ ಶ್ರಮ ವಹಿಸಬೇಕು. ಹೊಸ ವಸ್ತ್ರಗಳನ್ನು ಕೊಳ್ಳುವ ಯೋಗವಿದೆ. ರಾಜಕೀಯ ವ್ಯಕ್ತಿಗಳಿಗೆ ಅವರ ಹಿಂಬಾಲಕರಿಂದ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು. 

ತುಲಾ

ಪತ್ನಿಯಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳಿಂದ ಕಿರುಕುಳ ಬರಬಹುದು. ಆಪ್ತ

ಸ್ನೇಹಿತನ ದ್ವಂದ್ವ ನಿಲುವಿನಿಂದಾಗಿ ವ್ಯವಹಾರದಲ್ಲಿ ಸಲ್ಪ ಹಿನ್ನಡೆಯಾಗಬಹುದು. ಸಂಗಾತಿಯ ಶೃಂಗಾರ ಸಾಮಗ್ರಿಗಳಿಗಾಗಿ ಹೆಚ್ಚಿನ ಹಣ ಖರ್ಚಾಗುವುದು.

ವೃಶ್ಚಿಕ

ದೈನಂದಿನ ಕೆಲಸಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಇಂಧನ ಇಲಾಖೆಯಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆಯನ್ನು ಕಾಣಬಹುದು. ಉದ್ಯಮಿಗಳಿಗೆ ಇದ್ದ ಕಾರ್ಮಿಕರ ಸಮಸ್ಯೆ ಬಗೆಹರಿಯುವುದು. 

ಧನು

ಹಿರಿಯರ ಒಡವೆಗಳನ್ನು ಖರೀದಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಅಂತಹ ಹಿಂಜರಿಕೆ ಇರುವುದಿಲ್ಲ. ಕೋರ್ಟ್ ಕಚೇರಿ ಸಂಬಂಧದ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಮಂದಗತಿಯ ಆರ್ಥಿಕ ಸ್ಥಿತಿಗೆ, ಸಂಬಂಧಪಟ್ಟ ಸಂಸ್ಥೆಗಳಿಂದ ಸಾಲ ಪಡೆದು ಸರಿದೂಗಿಸುವಿರಿ. ರಂಗ ಕಲಾವಿದರುಗಳಿಗೆ ಕೆಲವು ಸಂಸ್ಥೆಗಳಿಂದ ಗೌರವ ದೊರೆಯುತ್ತದೆ. ಕೀಲು ನೋವು ಬಾಧಿಸಬಹುದು.

ಮಕರ

ಪುರಾತನ ವಸ್ತುಗಳನ್ನು ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ. ವಾಹನಗಳ ಬಿಡಿಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ವಿಸ್ತರಣೆಯಾಗುತ್ತದೆ. ಷೇರು ಮಾರುಕಟ್ಟೆಯ ಮಧ್ಯವರ್ತಿಗಳಿಗೆ ಆದಾಯ ಹೆಚ್ಚುತ್ತದೆ. ಮಾಧ್ಯಮ ಮಿತ್ರರಿಗೆ ಕೆಲವು ಮೂಲಗಳಿಂದ ಧನ ಲಾಭವಿರುತ್ತದೆ.

ಕುಂಭ

ಕೆಲವು ಕಲಾವಿದರುಗಳಿಗೆ ಉತ್ತಮ ಪ್ರೋತ್ಸಾಹ ದೊರೆಯುವುದು. ಆರ್ಥಿಕವಾಗಿ ಚೇತರಿಕೆ ಕಾಣಬಹುದು. ಹೊಸ ಸ್ಥಿರಾಸ್ತಿ ಕೊಳ್ಳುವ ಬಗ್ಗೆ ಸಾಕಷ್ಟು ಆಲೋಚನೆಯನ್ನು ಮಾಡುವಿರಿ. ಉಪನ್ಯಾಸಕರಿಗೆ ಉತ್ತಮ ಸ್ಥಾನ ದೊರಕುತ್ತದೆ. ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಹೊಸ ಆಶಾಕಿರಣವೊಂದು ಗೋಚರಿಸುತ್ತದೆ.

ಮೀನ

ಸಿದ್ಧ ವಸ್ತ್ರ ಉಡುಪುಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವ್ಯವಹಾರಗಳ ಮಧ್ಯವರ್ತಿ ಕೆಲಸವನ್ನು ಮಾಡುವವರಿಗೆ ಅವರ ಕೆಲಸದಲ್ಲಿ ಯಶಸ್ಸು ಇರುತ್ತದೆ. ಕ್ರೀಡಾಪಟುಗಳಿಗೆ ಅನಿರೀಕ್ಷಿತವಾಗಿ ವಿದೇಶಯಾನ ದೊರೆಯಬಹುದು.

Leave a Comment