Coastal Bulletin

ಮೇಷ ಕೃಷಿ ಕ್ಷೇತ್ರದಲ್ಲಿರುವವರ ಆದಾಯ ಹೆಚ್ಚುತ್ತದೆ. ಹಣಕಾಸು ವ್ಯವಹಾರಗಳ ಒಪ್ಪಂದದ ವಿಚಾರದಲ್ಲಿ ಬಹಳ ಎಚ್ಚರಿಕೆ ಇರಲಿ. ಹೂವಿನ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ತನ್ಮೂಲಕ ಆದಾಯವೂ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ಉನ್ನತ ವ್ಯಾಸಂಗದ ವಿಚಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. 

ವೃಷಭ

ವೃತ್ತಿಯಲ್ಲಿ ಹೆಚ್ಚು ಅನುಕೂಲವನ್ನು ಕಾಣಬಹುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಹೆಚ್ಚು ಅನುಕೂಲಗಳು ದೊರೆಯುತ್ತವೆ. ನಿಮ್ಮ ವ್ಯವಹಾರಕ್ಕೆ ವಿದೇಶಿ ಪಾಲುದಾರರು ದೊರೆಯುವ ಸಾಧ್ಯತೆಗಳಿವೆ ಮತ್ತು ಅವರಿಂದ ಬಂಡವಾಳ ಹೂಡಿಕೆಯೂ ಆಗುತ್ತದೆ.

ಮಿಥುನ

ಉದ್ಯೋಗದಲ್ಲಿ ನಿಮ್ಮ ಮೇಲಿಟ್ಟಿದ್ದ ಭರವಸೆಗಳನ್ನು ಈಡೇರಿಸಿ ಸಂತಸಪಡುವಿರಿ. ಪುರಾತನ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗಿ ಅನಿರೀಕ್ಷಿತ ಧನಲಾಭವಿರುತ್ತದೆ. ವಿಗ್ರಹಗಳನ್ನು ಕೆತ್ತುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. 

ಕಟಕ

ಉದ್ಯೋಗ ಸ್ಥಳದಲ್ಲಿ ಹಿರಿಯ ಅಧಿಕಾರಿಯ ಸಹಾಯದಿಂದ ನಿಮ್ಮ ಶತ್ರುಗಳನ್ನು ಮಟ್ಟ ಹಾಕುವಿರಿ. ಪ್ರೀತಿ ಪಾತ್ರರೊಡನೆ ನಿಮ್ಮ ಅನಿಸಿಕೆ ಮತ್ತು ಸಾಧನೆಗಳನ್ನು ಹಂಚಿಕೊಳ್ಳುವಿರಿ.

ಸಿಂಹ

ನಿಮ್ಮ ಸಮಸ್ಯೆ ಪರಿಹಾರಕ್ಕಾಗಿ ಹಿರಿಯರನ್ನು ಭೇಟಿಮಾಡುವಿರಿ. ಅವರ ಸಲಹೆಯಂತೆ ದೈವಕಾರ್ಯಗಳನ್ನು ಮಾಡುವಿರಿ. ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವವರು ಕುಟುಂಬ ಜೀವನದ ಕಡೆಗೂ ಗಮನಹರಿಸುವುದು ಅಗತ್ಯ.

ಕನ್ಯಾ

ವ್ಯವಹಾರದಲ್ಲಿ ಕೆಲವೊಂದು ಅವಸರದ ತೀರ್ಮಾನಗಳನ್ನು ತೆಗೆದುಕೊಂಡು ಸಂಕಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಚ್ಚರ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಉದಾಸೀನತೆ ಸಲ್ಲದು. ಬರಹಗಾರರು ಮತ್ತು ಪ್ರಕಾಶಕರ ನಡುವೆ ಒಪ್ಪಂದವೇರ್ಪಡುವ ಸಾಧ್ಯತೆಗಳಿವೆ.

ತುಲಾ

ಸಂಗಾತಿ ಕಡೆಯವರಿಗೆ ನಿಮ್ಮ ಎಲ್ಲಾ ಕಷ್ಟಸುಖಗಳನ್ನು ಹೇಳಿಕೊಳ್ಳುವುದು ತರವಲ್ಲ. ಬಂಧುಗಳ ನಡುವೆ ಬರುವ ಭಿನ್ನಾಭಿಪ್ರಾಯಗಳಿಗೆ ನೀವೇ ಕಾರಣಕರ್ತರಾಗಬಹುದು, ಎಚ್ಚರ ಇರಲಿ.

ವೃಶ್ಚಿಕ

dir="ltr">ನಿಮ್ಮ ಆಲೋಚನೆಗೆ ಬಂದ ವಿಷಯಗಳನ್ನು ಕಾರ್ಯರೂಪಕ್ಕೆ ತರುವುದರಿಂದ ಅನುಕೂಲ ಹೆಚ್ಚುತ್ತದೆ. ಹೊಂದಿಕೊಳ್ಳುವ ಮನೋಭಾವದಿಂದಾಗಿ ಹೆಚ್ಚು ಜನರ ವಿಶ್ವಾಸವನ್ನು ಗಳಿಸುವಿರಿ. ಆರ್ಥಿಕ ಸ್ಥಿತಿಯು ಸುಧಾರಣೆ ಸ್ಥಿತಿಯತ್ತ ಹೊರಳುತ್ತದೆ. ಕಾನೂನು ಕಾಯ್ದೆ ವಿಚಾರದಲ್ಲಿ ನಿಮಗೆ ಯಶಸ್ಸು ಇರುತ್ತದೆ.

ಧನು

ಚಿನ್ನಾಭರಣಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ಮಾಧ್ಯಮದ ಕೆಲಸಗಾರರಿಗೆ ಹೆಚ್ಚಿನ ಕೆಲಸಗಳು ದೊರೆತು ಆದಾಯ ಹೆಚ್ಚುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಸೂಕ್ತ ಪದೋನ್ನತಿಯ ಅವಕಾಶ ಇರುತ್ತದೆ. ಆಪ್ತ ಬಂಧುಗಳ ಭೇಟಿಯನ್ನು ಮಾಡುವ ಅವಕಾಶವಿದೆ.

ಮಕರ

ರಾಜಕೀಯದವರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಸಾಧಿಸಿಕೊಳ್ಳುವಿರಿ. ಗುತ್ತಿಗೆ ಕೆಲಸ ಮಾಡುವವರಿಗೆ ಕೆಲಸಗಳಲ್ಲಿ ಹೆಚ್ಚಿನ ಲಾಭವಿದೆ. ಗುಣವಂತರ ಸ್ನೇಹ ಮತ್ತು ಸಹಕಾರಗಳು ದೊರೆತು ಸಂತಸವಾಗುತ್ತದೆ.

ಕುಂಭ

ಬಹಳ ದಿನಗಳಿಂದ ಬಾಕಿ ಇರುವ ಕೆಲಸವೊಂದನ್ನು ಮಾಡಿ ಮುಗಿಸುವಿರಿ. ಮಹಿಳೆಯರು ವಿದ್ಯುತ್ ಉಪಕರಣಗಳನ್ನು ಬಳಸುವಾಗ ಬಹಳ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು. ನಿತ್ಯದ ಕೆಲಸಗಳ ಕಡೆಗೆ ಹೆಚ್ಚಿನ ನಿಗಾ ವಹಿಸುವಿರಿ. ವಸ್ತ್ರದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. 

ಮೀನ

ನಿಮ್ಮ ನಡೆ-ನುಡಿಗಳಿಂದ ಜನರು ಮಹತ್ವ ಕೊಡುವುದು ಕಡಿಮೆಯಾಗಬಹುದು. ಆತ್ಮೀಯರೊಬ್ಬರ ಶಿಫಾರಸಿನಿಂದ ಸರ್ಕಾರಿ ಕಚೇರಿಯ ಕೆಲ ಕೆಲಸಗಳು ಆಗುತ್ತವೆ. ವಾಣಿಜ್ಯ ವ್ಯವಹಾರಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು. 



Leave a Comment