ಬಂಟ್ವಾಳ: ದೇಶದ ಸಂಸ್ಕೃತಿ ಮತ್ತು ಪರಂಪರೆಯಂತೆ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶದಿಂದ ಜಗತ್ತಿಗೆ ಕ್ಷೇಮ ಮತ್ತು ಒಳಿತು ಉಂಟಾಗುವುದು ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಇಲ್ಲಿನ ನ ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸರಕಾರದ ಹಿಡಿತದಿಂದ ದೇವಸ್ಥಾನಗಳು ಭಕ್ತರ ಕೈಗೆ ನೀಡಲು ಮುಂದಾಗಿರುವ ನಿರ್ದಾರ ಸ್ವಾಗತಾರ್ಹ. ಮುಂಬರುವ ಉಡುಪಿ ನಾಲ್ಕನೇ ಪರ್ಯಾಯಕ್ಕೆ ಗೀತೆಯ ಸಂದೇಶ ಪಸರಿಸಲು 'ಕೋಟಿ ಗೀತಾ ಲೇಖನ ಯಜ್ಞ' ನಡೆಸಲಾಗುವುದು ಎಂದರು.
ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ಕೆ.ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ವೇದ ಉಪನಿಷತ್ತುಗಳ ಸಾರ ಜನಸಾಮಾನ್ಯರಿಗೆ ತಿಳಿಯಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಪುಣ್ಕೆಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರೆ ಅಲೆಮಾರಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಕಾಕುಂಜೆ ಸಾಫ್ಟ್ ವೇರ್ ನ ಗೋಪಾಲಕೃಷ್ಣ ಭಟ್ ಕಾಕುಂಜೆ, ಕೆನರಾ ಬ್ಯಾಂಕ್ ಮಹಾಪ್ರಬಂಧಕ ಯೋಗೀಶ್ ಆಚಾರ್ಯ, ಕರ್ಣಾಟಕ ಬ್ಯಾಂಕ್ ಡಿಜಿಎಂ ರಾಜಾ ಬಿ.ಎಸ್., ಮೆಸ್ಕಾಂ
ಎಇಇ ನಾರಾಯಣ ಭಟ್, ಮುಂಬೈ ಎನ್ ಕ್ಯೂಬ್ ಯೆತಿಕಲ್ಸ್ ಸಂಸ್ಥೆ ಉಪಾಧ್ಯಕ್ಷ ಜಿನರಾಜ ಪೂಜಾರಿ ದೇರಾಜೆ, ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಸುರೇಶ್ ಆಳ್ವ, ಉದ್ಯಮಿ ಜಿತೇಂದ್ರ ಪೂಜಾರಿ ದೇರಾಜೆ, ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕ ಪುರಂದರ ಎ., ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ, ಉದ್ಯಮಿ ಶರತ್ ರಾಜ್ ಶೆಟ್ಟಿ, ಉದ್ಯಮಿ ಚೇತನ್ ಅರಸ್, ಇಂಜಿನಿಯರ್ ರಕ್ಷಿತ್ ಶೆಟ್ಟಿ ಇದ್ದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಅಶೋಕ ಪಕ್ಕಳ ಮತ್ತು ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.














