Coastal Bulletin

ಮೇಷ ಕೆಲವರ ಕೌಟುಂಬಿಕ ವಿವಾದಗಳು ರಾಜಿ ಸಂಧಾನದ ಮೂಲಕ ಪರಿಹಾರವಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿದೆ. ವ್ಯವಹಾರಗಳಲ್ಲಿ ನಿಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಸರಿಯಾಗಿ ವ್ಯವಹರಿಸುವುದರಿಂದ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಗಳು ದೊರೆಯುತ್ತವೆ.

ವೃಷಭ

ವಂಶಪಾರಂಪರ್ಯದ ವೃತ್ತಿಯನ್ನು ಮುಂದುವರಿಸುವುದರಿಂದ ಆದಾಯ ಇರುತ್ತದೆ. ಕೆಲವು ರಾಜಕಾರಣಿಗಳಿಗೆ ರಾಜಕೀಯ ವಿದ್ಯಮಾನಗಳಿಂದ ಹೆಚ್ಚಿನ ಓಡಾಟವಿರುತ್ತದೆ. ನಿಮ್ಮ ಕೆಲವೊಂದು ಕೆಲಸಗಳಲ್ಲಿ ಅನುಭವದ ಕೊರತೆ ಎದುರಾಗಬಹುದು. ಮಾತಿನಲ್ಲಿ ಹಾಗೂ ವ್ಯವಹಾರದಲ್ಲಿ ನೀವು ತೋರುವ ದಕ್ಷತೆಯಿಂದ ವ್ಯವಹಾರದಲ್ಲಿ ಲಾಭ ಬರುತ್ತದೆ. ಕೃಷಿಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು.

ಮಿಥುನ

ಕಾರ್ಯದೊತ್ತಡದ ನಡುವೆಯೂ ಕುಟುಂಬದ ಕಡೆಗೆ ಗಮನ ಕೊಡುವುದು ಅಗತ್ಯ. ವೃತ್ತಿಯಲ್ಲಿ ಹೊಸ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳು ನಿಮಗೆ ಕೊಟ್ಟಾಗ ಜಾಣ್ಮೆಯಿಂದ ಒಪ್ಪಿಕೊಳ್ಳುವುದು ಒಳಿತು. ಮುದ್ರಣಕಾರರಿಗೆ ಪ್ರಮುಖ ಮುದ್ರಣದಲ್ಲಿ ಹೆಚ್ಚಿನ ತಪ್ಪಾಗುವ ಸಂದರ್ಭಗಳಿವೆ, ಎಚ್ಚರವಹಿಸಿರಿ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಸ್ವಲ್ಪ ಕುಂಠಿತವಾಗುವ ಸಂದರ್ಭಗಳಿವೆ, ಗಮನಕೊಡಿರಿ. 

ಕಟಕ

ಆಲಸ್ಯ ದೂರವಾಗಿ ಕೆಲಸಕಾರ್ಯಗಳಲ್ಲಿ ಅತಿಯಾದ ಉತ್ಸಾಹವನ್ನು ಕಾಣುವಿರಿ. ಕೆಲಸದಲ್ಲಿ ಬರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವುದು ಉತ್ತಮ. ಸ್ವತ್ತಿನ ಮಾರಾಟ ವಿಚಾರದಲ್ಲಿ ಹಿರಿಯರ ಮಾತಿನಂತೆ ನಡೆದು ಹೆಚ್ಚು ಲಾಭಾಂಶ ಪಡೆಯುವಿರಿ. 

ಸಿಂಹ

ವಸ್ತ್ರ ವಿನ್ಯಾಸದಲ್ಲಿ ಪರಿಣಿತಿಯನ್ನು ಪಡೆದಿರುವವರಿಗೆ ಬೇಡಿಕೆ ಬರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಜನರು ನಿಮ್ಮ ಸೇವೆಯನ್ನು ಗುರುತಿಸಿ ಗೌರವ ಕೊಡುವರು. ಕಾನೂನು ಶಾಸ್ತ್ರ ಅಧ್ಯಯನ ಮಾಡುತ್ತಿರುವವರಿಗೆ ಉತ್ತಮ ಫಲಿತಾಂಶವಿರುತ್ತದೆ. ಅಕ್ಕಪಕ್ಕದವರೊಡನೆ ಹೆಚ್ಚಿನ ಸ್ನೇಹದಿಂದ ಇರುವುದು ಬಹಳ ಒಳ್ಳೆಯದು. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇರುವುದಿಲ್ಲ. 

ಕನ್ಯಾ

ನಿಮ್ಮ ಯೋಜನೆಗಳ ಬಗ್ಗೆ ಸರಿಯಾದ ತಿಳಿವಳಿಕೆ ನಿಮಗಿರಲಿ. ಉನ್ನತ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆಯಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕುಟುಂಬದ ಏಳಿಗೆಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಆಶಿಸುತ್ತಿದ್ದ ಆಸ್ತಿ ದೊರೆಯುವ ಸಂದರ್ಭವಿದೆ. ವಿದೇಶಕ್ಕೆ ಹೋಗಬೇಕೆನ್ನುವವರು ದಾಖಲಾತಿಗಳನ್ನು ಸರಿಯಾಗಿ ಇಟ್ಟು ಕೊಳ್ಳುವುದು ಉತ್ತಮ. ಕೃಷಿಕರಿಗೆ ಉತ್ತಮ ಬೆಳೆಯ ಯೋಗವಿದೆ.

ತುಲಾ

ಪಾಲುದಾರಿಕೆ, ಸಹಭಾಗಿತ್ವದ ವ್ಯವಹಾರಗಳಲ್ಲಿ ನಿಮಗೆ ಲಾಭವಿದೆ. ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ವ್ಯವಹಾರದಲ್ಲಿನ ಕೆಲವು ನಿರ್ಧಾರಗಳನ್ನು ನಿಮ್ಮ ಒಳಿತಿಗಾಗಿ ಬದಲಿಸಿ ಹೊಸ ನಿರ್ಧಾರ ಪ್ರಕಟಿಸುವ ಅಗತ್ಯ ಇರುತ್ತದೆ. ರಾಜಕೀಯ

ನಾಯಕರುಗಳ ವಶೀಲಿಯಿಂದ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಓಡಾಡುತ್ತಿರಿ. ವ್ಯಾಪಾರದಲ್ಲಿ ಮಧ್ಯವರ್ತಿಗಳ ಉಪಟಳ ಇರುತ್ತದೆ, ಎಚ್ಚರಿಕೆವಹಿಸಿ. 

ವೃಶ್ಚಿಕ

ವೃತ್ತಿಯಲ್ಲಿ ಮೇಲಧಿಕಾರಿಯ ಮೃದು ವರ್ತನೆಯಿಂದ ನಿಮ್ಮ ಮೇಲಿನ ದೂರುಗಳು ನಿವಾರಣೆಯಾಗುವುದು. ನಿಮ್ಮ ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ನ್ಯಾಯವಾದಿಗಳಿಗೆ ಹೆಚ್ಚಿನ ಕೇಸ್‌ಗಳು ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ವೈದ್ಯರ ಸಲಹೆಯಂತೆ ದೇಹಕ್ಕೆ ಪುಷ್ಟಿ ಕೊಡುವ ಆಹಾರ ಸೇವಿಸುವುದು ಒಳ್ಳೆಯದು. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ತೃಪ್ತಿ ಇರುತ್ತದೆ.

ಧನು

ವ್ಯವಹಾರದ ಕೆಲಸಗಳಿಂದಾಗಿ ಬಿಡುವಿಲ್ಲದೆ ದೇಹಶ್ರಮ ಆಗುವುದು. ನಿಮ್ಮ ಜೀವನ ಶೈಲಿಗೆ ತಕ್ಕಂತೆ ನಿರ್ಧಾರವನ್ನು ಈಗ ತೆಗೆದುಕೊಳ್ಳಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ತೆರಿಗೆ ತಜ್ಞರಿಗೆ ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿದ್ದು ಆದಾಯ ಹೆಚ್ಚುತ್ತದೆ. ವ್ಯಾವಹಾರಿಕ ವಿಷಯದಲ್ಲಿ ಪ್ರಯತ್ನಗಳು ಈಗ ಫಲ ಕೊಡಲಾರಂಭಿಸುತ್ತದೆ.

ಮಕರ

ಬಹಳ ಶ್ರಮಪಟ್ಟು ಕೆಲಸ ಮಾಡುವಿರಿ. ಹಣದ ನಿರ್ವಹಣೆಯನ್ನು ಬಹಳ ಜಾಣ್ಮೆಯಿಂದ ಮಾಡುವಿರಿ.  ಒಡಹುಟ್ಟಿದವರಿಗಾಗಿ ಸಾಕಷ್ಟು ಸಹಾಯ ಮಾಡುವಿರಿ. ಹೊಸ ಆಸ್ತಿ ಖರೀದಿಗೆ ಮುಂದಾಗುವುದು ಬೇಡ. ಉನ್ನತ ವಿದ್ಯೆಯನ್ನು ಓದುತ್ತಿರುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ತಂದೆಯಿಂದ ಅವರ ವ್ಯವಹಾರಗಳ ಒಳಗುಟ್ಟುಗಳನ್ನು ತಿಳಿಯಬಹುದು. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ನಿಧಾನಗತಿಯನ್ನು ಕಾಣಬಹುದು. 

ಕುಂಭ

ಸ್ವಂತ ಉದ್ಯೋಗ ಮಾಡುವವರಿಗೆ ಬಿಡುವಿಲ್ಲದ ಕೆಲಸ ದೊರೆತು ಕೆಲಸಗಳನ್ನು ಪೂರ್ತಿ ಮಾಡಬೇಕಾದ ಅನಿವಾರ್ಯವಿರುತ್ತದೆ. ಆದಾಯವೂ ಹೆಚ್ಚು ಇರುತ್ತದೆ. ಭಾಷಣಕಾರರಿಗೆ ಮತ್ತು ಉಪನ್ಯಾಸಕರಿಗೆ ಉತ್ತಮ ವೇದಿಕೆಗಳು ದೊರೆತು ಅವರ ವಿಷಯಗಳನ್ನು ಸಂಪೂರ್ಣವಾಗಿ ಮಂಡಿಸಲು ಅವಕಾಶ ದೊರೆತು  ಸಂತಸವಾಗುತ್ತದೆ. ಮಾಡಿದ್ದ ಸಾಲಗಳನ್ನು ತೀರಿಸಿ ನೆಮ್ಮದಿಯನ್ನು ಕಾಣುವಿರಿ. 

ಮೀನ

ವಿವಾದಾಸ್ಪದ ವಿಷಯಗಳಲ್ಲಿ ತಲೆ ಹಾಕದಿರುವುದು ಬಹಳ ಉತ್ತಮ. ಶಸ್ತ್ರಚಿಕಿತ್ಸೆಯನ್ನು ಮಾಡುವ ವೈದ್ಯರಿಗೆ ಸಂಪಾದನೆ ಮಾಡುವ ಯೋಗವಿದೆ. ವಾಹನ ರಿಪೇರಿ ಮಾಡುವವರಿಗೆ ಬಿಡುವಿಲ್ಲದ ಕೆಲಸವಿದ್ದು ಆದಾಯ ಹೆಚ್ಚುತ್ತದೆ. ವಾಹನ ಮಾರಾಟಗಾರರಿಗೆ ಅಭಿವೃದ್ಧಿಯ ಯೋಗವಿದೆ. ಕೃಷಿ ವಿಸ್ತರಣೆಯ ಬಗ್ಗೆ ಸಾಕಷ್ಟು ಗಮನ ಕೊಡುವಿರಿ. ನೂತನ ಮಾದರಿಯ ಕೃಷಿ ಮಾಡುವ ಬಗ್ಗೆ ತಿಳಿವಳಿಕೆ ಪಡೆಯುವಿರಿ.

Leave a Comment