ಅಖಿಲ ಭಾರತ ತುಳುನಾಡ ದೈವಾರದಕರ ಒಕ್ಕೂಟ (ರಿ )ಉಡುಪಿ ಜಿಲ್ಲೆ ಹಾಗೂ ಬ್ರಹ್ಮಾವರ ಘಟಕ ಇದರ ಜಂಟಿ ಆಶ್ರಯದಲ್ಲಿ ಸಪ್ಟೆಂಬರ್ 25 ಆದಿತ್ಯವಾರದಂದು ಸತ್ಯನಾರಾಯಣ ಪೂಜೆ ಹಾಗೂ ರಕ್ತದಾನ ಶಿಬಿರವು ಉಡುಪಿ ಜಿಲ್ಲೆಯ ಫಿಶೇರೀಸ್ ಸಬಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 11.00 ಗಂಟೆಯಿಂದ ಸಂಜೆ 8 ಗಂಟೆವರೆಗೆ ಉಡುಪಿ ಜಿಲ್ಲೆಯ ಬಹಳ ಹೆಸರುವಾಸಿ ಕಲಾವಿದರಿಂದ ವೇದಿಕೆಯಲ್ಲಿ ನಾಗಸ್ವರ ವಾದನ, ಕೊಳಲು ವಾದನ ಹಾಗೂ ಬ್ಯಾಂಡ್ ಡೋಲು ಕಲಾವಿದರಿಂದ ಕಾರ್ಯಕ್ರಮ.
ಪ್ರಮುಖ ಕಲಾವಿದರಾದ ಉದಯ ಸೇರಿಗಾರ್, ಅಲೆವೂರ್ ರಂಜಿತ್ ಸೇರಿಗಾರ್, ಅಲೆವೂರು ಸದಾನಂದ
ಸೇರಿಗಾರ್, ಕೊಡವೂರು ಸಂತೋಷ್ ಸೇರಿಗಾರ್, ಮೂಡು ಅಲೆವೂರು , ಸಂತೋಷ ದೇವಾಡಿಗ ನೀಲಾವರ , ಪಾಂಡುರಂಗ ಪಾಣಾರ ಹಿರಿಯಡ್ಕ ಹಾಗೂ ಉದಯ ಮೆಂಡನ್ ಇವರಿಂದ ಬ್ಯಾಂಡ್ ವಾದನ ಹಾಗೂ ಶ್ಯಾಮ್ ಮತ್ತು ತಂಡದವರಿಂದ ಡೋಲು ಹಾಗೂ ಕೊಳಲು ವಾದನ ಕಾರ್ಯಕ್ರಮ ಜರಗಲಿದೆ.














