ಮೇಷ ಹಿರಿಯರೊಂದಿಗೆ ಶಾಂತಿಯಿಂದ ವ್ಯವಹರಿಸುವುದು ಉತ್ತಮ. ಅನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವವರು ಜನರೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ.
ವೃಷಭ
ವಿದೇಶಿ ವ್ಯವಹಾರಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಮುಂದಾಲೋಚನೆಯಿಂದ ಹೂಡಿದ ಹಣದಲ್ಲಿ ನಿರೀಕ್ಷಿತ ಲಾಭವನ್ನು ಕಾಣಬಹುದು. ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಉತ್ತಮ ಬೆಳವಣಿಗೆ ಇರುತ್ತದೆ.
ಮಿಥುನ
ಮಾನಸಿಕ ಉದ್ವೇಗದಿಂದ ಯಾವುದೇ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಬೇಡ. ಬಂಧುಗಳ ನಡುವೆ ಕೆಲವು ಜಿಜ್ಞಾಸೆಗಳು ಮೂಡಬಹುದು. ಹೊಸ ವಸ್ತ್ರಗಳ ಸಗಟು ದಾಸ್ತಾನುಗಾರರು ಎಚ್ಚರಿಕೆಯನ್ನು ವಹಿಸಬೇಕಾದ ಸಂದರ್ಭವಿದೆ.
ಕಟಕ
ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ. ಉದ್ಯೋಗದಲ್ಲಿರುವವರಿಗೆ ಅಧಿಕಾರ ವರ್ಗದವರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಕೃಷಿಕರು ತಾವು ಬೆಳೆಯುವ ಬೆಳೆಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳುವುದು ಉತ್ತಮ
ಸಿಂಹ
ನೌಕರಸ್ಥರಿಗೆ ಉದ್ಯೋಗದ ಸ್ಥಳಗಳು ಬದಲಾವಣೆ ಆಗುವ ಸಾಧ್ಯತೆಗಳಿವೆ. ಮನೆಯಲ್ಲಿನ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರವನ್ನು ಕಂಡು ಕೊಳ್ಳುವಿರಿ. ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಒಳ್ಳೆಯ ಸ್ಥಾನ ಸಿಗುವ ಸಾಧ್ಯತೆಗಳಿವೆ
ಕನ್ಯಾ
ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಇದ್ದು ಹೆಚ್ಚಿನ ಲಾಭಾಂಶವನ್ನು ಕಾಣಬಹುದು. ನ್ಯಾಯಾಲಯದ ತೀರ್ಪು ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಅನುಕೂಲ ವಾತಾವರಣವಿದ್ದರೂ ಒಳಗೊಳಗೆ ನಿಮಗೆ ಅತೃಪ್ತಿ ಇರುತ್ತದೆ. ಕಾಡುತ್ತಿದ್ದ ಒಂದೆರಡು ಸಮಸ್ಯೆಗಳು ಪರಿಹಾರವಾಗಿ ಮನಸ್ಸಿಗೆ ಸಂತೋಷವಾಗುವುದು.
ತುಲಾ
ಕೃಷಿಕರ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಶತ್ರುಗಳನ್ನು ಈಗ ನೀವು ಎದುರಿಸಬಹುದು. ಪ್ರಿಯವ್ಯಕ್ತಿಗಳ ಆಗಮನದಿಂದ ಮನಸ್ಸಿಗೆ ಉಲ್ಲಾಸವಾಗುವುದು. ಕೆಲವು ಶತ್ರುಗಳು ತಾವಾಗಿಯೇ ಬಯಸಿ ಮಿತ್ರರಾಗುವರು. ಬಂಧುಗಳ ಆಸ್ತಿಯನ್ನು ಕೊಳ್ಳುವಲ್ಲಿ
ಯಶಸ್ವಿಯಾಗುವಿರಿ.
ವೃಶ್ಚಿಕ
ಕೆಲವು ಹಿರಿಯ ಉದ್ಯಮಿಗಳು ತಮ್ಮ ನಡೆನುಡಿಯ ಬಗ್ಗೆ ಎಚ್ಚರದಿಂದ ಇರುವುದು ಬಹಳ ಒಳ್ಳೆಯದು. ಆರ್ಥಿಕ ಮುಗ್ಗಟ್ಟು ದೂರವಾಗಿ ಆರ್ಥಿಕ ಸಬಲತೆ ಬರುವ ಸಾಧ್ಯತೆಗಳಿವೆ. ಆಸ್ತಿ ವಿವಾದಗಳಿಂದ ಮುಕ್ತಿ ದೊರೆಯಬಹುದು. ಹಿರಿಯರ ಆರೋಗ್ಯದಲ್ಲಿ ಏರುಪೇರಾದರೂ ಭಯವಿಲ್ಲ. ಸಹವರ್ತಿಗಳಿಗೆ ಉತ್ಸಾಹ ತುಂಬಿ ಕೆಲಸ ಮಾಡಿಸುವಿರಿ.
ಧನು
ಮಂದಗತಿಯಲ್ಲಿ ಇದ್ದ ನಿಮ್ಮ ಕೆಲಸ ಕಾರ್ಯಗಳು ವೇಗವನ್ನು ಪಡೆಯುವವು. ಹಿರಿಯರು ತಮ್ಮ ಸ್ವಯಂಕೃತ ಅಪರಾಧಗಳಿಂದ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಗಳಿವೆ, ಎಚ್ಚರ. ಆಯುಧ ವ್ಯಾಪಾರಿಗಳು ಅವರ ಗಿರಾಕಿಗಳ ಬಗ್ಗೆ ಹೆಚ್ಚಿನ ಎಚ್ಚರ ಹಾಗೂ ಮಾಹಿತಿ ಸಂಗ್ರಹಣೆ ಮಾಡುವುದು ಬಹಳ ಮುಖ್ಯ.
ಮಕರ
ಆದಾಯ ಮತ್ತು ಉಳಿತಾಯದಲ್ಲಿ ಪ್ರಗತಿಯನ್ನು ಕಾಣಬಹುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಮಂಗಳ ಕಾರ್ಯಗಳ ಬಗ್ಗೆ ಮನೆಯಲ್ಲಿ ಮಾತಾಗಬಹುದು. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ.
ಕುಂಭ
ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸನ್ನು ಕಂಡು ಅದರಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ.
ಮೀನ
ವಾರದ ಆರಂಭದಲ್ಲಿ ಅತ್ಯಂತ ಉಲ್ಲಾಸ ಇರುತ್ತದೆ. ಆಸಕ್ತಿ ಹೊಂದಿದ್ದ ಕೃಷಿಭೂಮಿಯನ್ನು ಕೊಂಡು ಸಂತೋಷ ಪಡುವಿರಿ. ಮಕ್ಕಳ ಅಭಿವೃದ್ಧಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಅಪರೂಪದ ವಸ್ತುಗಳ ಖರೀದಿ ಬಗ್ಗೆ ಆಸಕ್ತಿ ಬೆಳೆಯುತ್ತದೆ.














