Coastal Bulletin

ಮೇಷ‌: ವೃತ್ತಿಯಲ್ಲಿ ಹೊಸ ಸಂಕಷ್ಟಗಳು ಎದುರಾಗಬಹುದು. ಪರರನ್ನು ಟೀಕಿಸುವ ಬದಲು ನಿಮ್ಮ ಏಳಿಗೆ ಬಗ್ಗೆ ಚಿಂತಿಸಿರಿ. ಹಣದ ಒಳಹರಿವು ಕಡಿಮೆ ಇರುತ್ತದೆ. ವ್ಯಾಪಾರಿಗಳು ಗ್ರಾಹಕರನ್ನು ವಿಶ್ವಾಸದಿಂದ ಕಾಣುವುದು ಒಳ್ಳೆಯದು. ಕೆಲವು ವ್ಯಾಪಾರಿಗಳಿಗೆ ವಿದೇಶಿ ವ್ಯಾಪಾರದ ಸಂಬಂಧ ಕುದುರುತ್ತದೆ. ಕೆಲವು ಸಂಶೋಧಕರಿಗೆ ಹೊಸ ರೀತಿಯ ಆವಿಷ್ಕಾರದಿಂದ ಹೆಸರು ಬರುತ್ತದೆ. ಕೃಷಿಯಿಂದ ಆದಾಯ ಬರುತ್ತದೆ. ಕೃಷಿಕರಿಗೆ ಹೆಚ್ಚು ಸೌಲಭ್ಯ ದೊರೆಯುತ್ತದೆ.

ವೃಷಭ : ವೃತ್ತಿಯಲ್ಲಿ ಸತತ ಜವಾಬ್ದಾರಿಯುತ ನಡವಳಿಕೆಗಳನ್ನು ಪ್ರದರ್ಶಿಸುವ ನಿಮಗೆ ಹಿರಿಯ ಅಧಿಕಾರಿಗಳ ಬೆಂಬಲ ದೊರೆಯುತ್ತದೆ. ರೇಷ್ಮೆ ಬಟ್ಟೆ ವ್ಯವಹಾರ ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ಉದ್ದಿಮೆದಾರರಿಗೆ ಕಾರ್ಮಿಕರು ಕೊಡುವ ಸಲಹೆಗಳು ಬಹಳ ಅಮೂಲ್ಯವಾಗಿರುತ್ತದೆ. ಲೇವಾದೇವಿ ವ್ಯವಹಾರ ಆದಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ನವೋದ್ಯಮಿಗಳಿಗೆ ಸರ್ಕಾರದ ಸಹಾಯ, ಸವಲತ್ತುಗಳು ದೊರೆಯುತ್ತವೆ. 

ಮಿಥುನ‌ : ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುವವರು ಹೆಚ್ಚು ಜಾಗ್ರತೆವಹಿಸಿರಿ. ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಹೆಚ್ಚು ಲಾಭವಿರುತ್ತದೆ. ಕಂಪನಿಯ ಕೆಲಸಕ್ಕಾಗಿ ಈಗ ತುರ್ತು ಪ್ರಯಾಣ ಮಾಡುವ ಸಂದರ್ಭವಿದೆ. ಅಬಕಾರಿ ಗುತ್ತಿಗೆದಾರರಿಗೆ ಉತ್ತಮ ವ್ಯವಹಾರವಿರುತ್ತದೆ. ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳುವುದು ನಿಮಗೆ ಒಳಿತು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಹಿರಿಯರು ನಿಮ್ಮ ಕೃಷಿ ವ್ಯವಹಾರಗಳಿಗೆ ಉತ್ತಮ ಮಾರ್ಗದರ್ಶನ ನೀಡುವರು. 

ಕಟಕ : ಹಣಕಾಸು ಸಂಸ್ಥೆಯ ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ಆತಂಕಗಳು ಎದುರಾಗಬಹುದು. ಚಿನ್ನಾಭರಣಗಳ ಮೇಲಿನ ಹೂಡಿಕೆ ಲಾಭ ತರುತ್ತದೆ. ನಾಟಕರಂಗದವರಿಗೆ ಹೆಚ್ಚಿನ ಪ್ರೋತ್ಸಾಹಗಳು ದೊರೆಯುತ್ತವೆ. ಕೆಲವರಿಗೆ ಸಮಾಜದಲ್ಲಿ ಸ್ಥಾನ ಸಿಗುವ ಯೋಗವಿದೆ. ಇನ್ನೊಬ್ಬರನ್ನು ಅವಹೇಳನ ಮಾಡಲು ಹೋಗಬೇಡಿರಿ. ಹಣ್ಣು ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ನಡೆದು ಲಾಭ ಬರುತ್ತದೆ. 

ಸಿಂಹ : ಮಕ್ಕಳ ಸಂತಸ ಮತ್ತು ಸಡಗರಕ್ಕಾಗಿ ಹೆಚ್ಚು ಖರ್ಚು ಮಾಡುವಿರಿ. ವೃತ್ತಿಯಲ್ಲಿ ಸ್ವಲ್ಪ ಮಟ್ಟಿನ ನಕಾರಾತ್ಮಕ ಬೆಳವಣಿಗೆಯನ್ನು ಕಾಣಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಮಧ್ಯಮ ಫಲಿತಾಂಶವಿರುತ್ತದೆ. ಉಳಿತಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಧನ ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಹೆಚ್ಚು ಸಾಲ ಮಾಡುವುದು ಸರಿಯಲ್ಲ. ನಿಮ್ಮ ಸ್ನೇಹಿತನ ಮೇಲಿನ ಅಪನಂಬಿಕೆಗಳ ಬಗ್ಗೆ ನಿಮಗೆ ಸುಳಿವು ದೊರೆಯುತ್ತದೆ. 

ಕನ್ಯಾ‌ : ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಕೈಗೊಂಡ ನಿಮ್ಮ ಕೆಲಸಗಳು ಆರ್ಥಿಕ ಹಿನ್ನಡೆಯಿಂದ ಅಲ್ಲಿಯೇ ನಿಲ್ಲುತ್ತವೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಉತ್ತಮ ವ್ಯವಹಾರವಿರುತ್ತದೆ. ಮನೆಯಲ್ಲಿ ಮಂಗಳಕಾರ್ಯ ನಡೆಯುವ ಸೂಚನೆ ಇದೆ. ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ರೈತರ ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಕೃಷಿ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚಿನ ಬೆಳವಣಿಗೆಯನ್ನು ಕಾಣಬಹುದು.

ತುಲಾ‌ : ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳ ಒತ್ತಡದ ಮೇರೆಗೆ

ಗ್ರಾಹಕರಿಗೆ ಮೋಸ ಮಾಡಬೇಕಾಗಬಹುದು. ಹೈನುಗಾರಿಕೆಯನ್ನು ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ಹೋಟೆಲ್ ಉದ್ಯಮಿಗಳಿಗೆ ಅವರ ವ್ಯವಹಾರದಲ್ಲಿ ಲಾಭ ಹೆಚ್ಚುತ್ತದೆ. ಜವಳಿ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ಆಗುವ ಸಂದರ್ಭವಿದೆ. ಪದೇ ಪದೇ ಕೆಲಸಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗಬಹುದು.

ವೃಶ್ಚಿಕ‌ : ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಶ್ರಮಪಡಬೇಕು. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಉತ್ತಮ. ವ್ಯವಹಾರದಲ್ಲಿ ಜಾಣ್ಮೆಯಿಂದ ವ್ಯವಹರಿಸಿ ಲಾಭಗಳಿಸುವಿರಿ. ಮಾತಿನ ಮೋಡಿಗೆ ಪಾಲುದಾರರು ಒಪ್ಪಿ ನಿಮಗೆ ಪ್ರಮುಖ ಸ್ಥಾನ ನೀಡುವರು. ವೈವಾಹಿಕ ಮಾತುಕತೆಗಳು ಫಲಪ್ರದವಾಗುತ್ತವೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬಯಸುವವರಿಗೆ ಅವಕಾಶಗಳು ದೊರೆಯುತ್ತವೆ. 

ಧನು : ಆಸ್ತಿ ಖರೀದಿಯ ಬಗ್ಗೆ ಗಮನಹರಿಸಬಹುದು ಹಾಗೂ ಇದಕ್ಕೆ ಬೇಕಾದ ಆರ್ಥಿಕ ನೆರವುಗಳು ದೊರೆಯುತ್ತವೆ. ಹವ್ಯಾಸಿ ಛಾಯಾಗ್ರಾಹಕರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಸಾಂಸ್ಕೃತಿಕ ರಂಗದಲ್ಲಿರುವವರಿಗೆ ಸಾಧನೆ ಮಾಡುವ ಅವಕಾಶ ದೊರೆಯುತ್ತದೆ. ರಾಜಕೀಯಪಟುಗಳು ಎಚ್ಚರಿಕೆಯಿಂದಲೇ ನಡೆಯಿರಿ, ಕೆಲವರು ಮೋಸ ಮಾಡಲು ಕಾಯುತ್ತಿರುತ್ತಾರೆ.

ಮಕರ : ವ್ಯವಹಾರದಲ್ಲಿ ಎಲ್ಲರನ್ನೂ ಅತಿಯಾಗಿ ನಂಬುವುದು ಬೇಡ. ನಿಮ್ಮ ವ್ಯವಹಾರಗಳ ಬಗ್ಗೆ ಹೆಚ್ಚಿನ ಗಮನಕೊಡಿರಿ. ತರಕಾರಿ ಕಮಿಷನ್ ಏಜೆಂಟರುಗಳಿಗೆ ಹೆಚ್ಚಿನ ಆದಾಯವಿರುತ್ತದೆ. ಉನ್ನತ ವ್ಯಾಸಂಗದಲ್ಲಿರುವವರಿಗೆ ನಿರೀಕ್ಷಿತ ಫಲಿತಾಂಶವಿರುತ್ತದೆ. ಪ್ರಸಿದ್ಧ ವಾಣಿಜ್ಯ ಸಂಸ್ಥೆಯೊಂದರಲ್ಲಿ ಕೆಲಸ ಸಂಪಾದಿಸಿಕೊಳ್ಳುವ ಪ್ರಯತ್ನ ಸಫಲವಾಗುತ್ತದೆ. 

ಕುಂಭ : ಆತ್ಮಗೌರವ ಹೆಚ್ಚುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಒಡಹುಟ್ಟಿದವರು ನಿಮಗೆ ಮೋಸ ಮಾಡಲೆತ್ನಿಸುವರು. ಆಸ್ತಿ ವಿಚಾರದಲ್ಲಿ ಸ್ವಲ್ಪ ಮುನ್ನಡೆ ಕಾಣುವಿರಿ. ಕೆಲವರಿಗೆ ಶೀತಬಾಧೆ ಹೆಚ್ಚಾಗಿ ಬಾಧಿಸಬಹುದು. ಸಂಗಾತಿಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಸಂಗಾತಿ ಮಾಡುವ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಅದಿರು ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.

ಮೀನ : ​​​​​​​ವಾಹನ ಮಾರಾಟಗಾರರಿಗೆ ವ್ಯವಹಾರ ಹೆಚ್ಚುತ್ತದೆ. ಕಾನೂನು ಪಂಡಿತರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಆಗಬಹುದು. ಮಕ್ಕಳ ಭವಿಷ್ಯದ ಬಗ್ಗೆ ಸಾಕಷ್ಟು ಚಿಂತೆ ಇರುತ್ತದೆ. ಅವರ ಭವಿಷ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ನಿಮ್ಮ ಶತ್ರುಗಳ ವಿರುದ್ಧ ಜಾಗರೂಕರಾಗಿರಿ. ಹಿರಿಯರಿಂದ ನಿರೀಕ್ಷಿತ ಉಡುಗೊರೆ ದೊರೆಯಬಹುದು. ನೋವು ನಿವಾರಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ.

Leave a Comment