Coastal Bulletin

ಮೇಷ ರಾಶಿ : ಬುಧ ಶನಿ ಲಾಭ ಸ್ಥಾನದಲ್ಲಿ ಧನಲಾಭ ಕೊಡುತ್ತಾರೆ. 12ರ ಗುರು ಮತ್ತು ಸೂರ್ಯ ಶುಭ ಕಾರ್ಯಗಳಿಗೆ ಖರ್ಚು ಹಾಗೂ ಸೂರ್ಯ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ನಿಧಾನ ಮಾಡಿಸುತ್ತಾರೆ. ಈ ಶನಿಯ ಜೊತೆ ಮಂಗಳ ಕೂಡ ನಿಮಗೆ ಉತ್ತಮ ಸ್ಥಾನದಲ್ಲಿ ಇರುವುದರಿಂದ ಹಣದ ಸಮಸ್ಯೆಗಳೇನೂ ಇಲ್ಲ. ವಿಹಾರ ಪ್ರವಾಸ ಮೊದಲಾದ ವಿನೋದ ಕಾರ್ಯಗಳನ್ನು ಮಾಡುತ್ತೀರಿ.‌

ವೃಷಭ ರಾಶಿ : ಮನಸ್ಸಿಗೆ ಆತಂಕ ನಾನಾ ರೀತಿಯ ಚಿಂತೆಗಳು.‌ ಗುರುಬಲ ಇರುವುದರಿಂದ ಹಣದ ಸಮಸ್ಯೆ ಇಲ್ಲದಿದ್ದರೂ ಮಾನಸಿಕ ಚಿಂತೆಗಳು ಹೆಚ್ಚಾಗುತ್ತದೆ. ಭಾವನಾತ್ಮಕ ವಿಷಯಗಳಲ್ಲಿ ಪೆಟ್ಟು ತಿನ್ನುತ್ತೀರಿ. ಒಂದು ವಿಧದ ಅಸಹಾಯಕತೆ ಆವರಿಸಿಕೊಳ್ಳುತ್ತದೆ. ಆದರೆ ನೀವು ಸ್ವಭಾವತಃ ಗಟ್ಟಿ ಹೀಗಾಗಿ ಏಳುಬೀಳುಗಳನ್ನು ಸಮರ್ಥವಾಗಿ ಎದುರಿಸುತ್ತೀರಿ.‌ 

ಮಿಥುನ ರಾಶಿ : ನಿಮ್ಮ ಬೆಳವಣಿಗೆಗೆ ಅಡ್ಡವಾಗಿ ಇರುವ ಒಂದೋಂದೇ ಅಡ್ಡಿಗಳು ತೊಲಗಿಹೋಗುತ್ತದೆ. ನಿಮ್ಮ ದಾರಿ‌ ಈಗ ಸುಗಮ. ಶತ್ರುಗಳು ನಾಶವಾಗುತ್ತಾರೆ. ಹಣದ ಹರಿವು ಉತ್ತಮವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಗುರುಬಲ ಬರುವುದರಿಂದ ನಿಮಗೆ ಇನ್ನೂ ಹೆಚ್ಚಿನ ಶಕ್ತಿ ನೀಡುತ್ತದೆ. ವೃತ್ತಿಯಲ್ಲಿ ಒಳ್ಳೆಯ ಬದಲಾವಣೆ ಇದೆ. 

ಕಟಕ ರಾಶಿ : ಈಗ ನಿಮಗೆ ಕೊಂಚ ಅಡ್ಡಿ ಆತಂಕಗಳ ಸಮಯ. ಯಾವ ಕೆಲಸವೂ ಬೇಗ ಆಗುವುದಿಲ್ಲ. ನಿಧಾನಗತಿ. ಅಡೆತಡೆಗಳು. ಒಂಬತ್ತರಲ್ಲಿ ಗುರು ಈಗ ನಿಮಗೆ ರಕ್ಷೆ. ಮನೆಯಲ್ಲಿ ಅಶಾಂತಿಯ ವಾತಾವರಣ ಮೂಡಬಹುದು. ಯಾವುದಕ್ಕೂ ಮೌನವಾಗಿರಿ. ಹೆಚ್ವು ವಾದ ವಿವಾದ ಬೇಡ.‌ ವಿವಾಹದ ಮಾತುಕತೆಗಳು ಮುಂದಕ್ಕೆ ಹಾಕಿ. ಏನೇ ಹೊಸ ಕೆಲಸ ಆರಂಭಿಸಬೇಕಿದ್ದರೂ ಮುಂದಕ್ಕೆ ಹಾಕಿ.

ಸಿಂಹ ರಾಶಿ : ಈಗ ಗುರು ಬಲ‌ ಮತ್ತು ಶನಿ ಬಲ ಇಲ್ಲದೆ ಬಹಳ ಕಷ್ಟಪಡುತ್ತಿದ್ದೀರಿ. ಖರ್ಚಿಗೆ ಸಮನಾಗಿ ಹಣ ಉತ್ಪತ್ತಿ ಆಗುತ್ತಿಲ್ಲ. ಆದರೆ ಕೆಲಸಗಳು ಒಂದೇ ಸಮನಾಗಿ ನಡೆಯುತ್ತಿದೆ. ಹಣ ಹೊಂದಿಸಲಾರದೆ ಕಷ್ಟ ಪಡುತ್ತಿದ್ದೀರಿ.‌ ಮೂರನೇ ಮನೆ ಕೇತು ಕೊಂಚ ಬೆಂಬಲ ಕೊಡುತ್ತಾನೆ. ಆದರೆ ಬೇರೆ ಗ್ರಹಗಳು ಅಷ್ಟು ಅನುಕೂಲ ಜಾಗದಲ್ಲಿ ಇಲ್ಲದ ಕಾರಣ ಎಚ್ಚರಿಕೆಯಿಂದ ಇರಿ.

ಕನ್ಯಾ ರಾಶಿ : ಹತ್ತರಲ್ಲಿ ಕುಜ ವೃತ್ತಿಯ ಯಶಸ್ಸನ್ನು ಸೂಚಿಸುತ್ತಾನೆ.‌ ಏಳರ ಗುರು ನಿಮಗೆ ಗೌರವ ಮರ್ಯಾದೆಗಳನ್ನು ಕೊಡಿಸುತ್ತಾನೆ. ಮನೆಯಲ್ಲಿ ಶುಭಕಾರ್ಯ ನಡೆಯುವಂತೆ ಮಾಡುತ್ತಾನೆ. ಆರರ ಶನಿ ನಿಮ್ಮ ಕೆಲಸಕಾರ್ಯಗಳು ಏನೇ ಇದ್ದರೂ ಅಡೆತಡೆ ಇಲ್ಲದೆ ನಡೆಯುವಂತೆ ಮಾಡುತ್ತಾನೆ. ಹಣ ಒದಗಿಸಿಕೊಡುತ್ತಾನೆ.‌ ಎಂಟರ ರಾಹು ಆರೋಗ್ಯಕ್ಕೆ ತೊಂದರೆ ಮಾಡುತ್ತಾನೆ. 

ತುಲಾ ರಾಶಿ : ನಿಮ್ಮ ಮನಸ್ಸಿಗೆ ಈಗ ವಿನಾಕಾರಣ ಭೀತಿ‌ ಅನುಮಾನ.‌ ನಿಮ್ಮವರನ್ನೇ ಅನುಮಾನಿಸುವಷ್ಡು ಅತಂತ್ರ ಮನಸ್ಥಿತಿ. ಯಾವ ಕೆಲಸಗಳೂ ವೇಗವಾಗಿ‌ ನಡೆಯುತ್ತಿಲ್ಲ ಎಂಬ ಕೊರಗು. ಹಣಕಾಸಿನ ಅಭದ್ರತೆ ಇವೆಲ್ಲ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತಿಗೆ. ಧೈರ್ಯಗೆಡಬೇಡಿ. ಕೆಲವು ದಿನ ಸಹಿಸಿಕೊಳ್ಳಿ.‌ ಮುಂದೆ ಗುರು

ಬಲ ಬಂದಾಗ ಎಷ್ಟೋ ಸಮಸ್ಯೆಗಳು ಹಗುರವಾಗುತ್ತದೆ. ಸಂಗಾತಿಯೊಡನೆ ಜಗಳ ಮನಸ್ತಾಪ ಇರುತ್ತದೆ. ಕೌಟುಂಬಿಕವಾಗಿ ಕೊಂಚ ಅಶಾಂತಿ ಇದೆ. 

ವೃಶ್ಚಿಕ ರಾಶಿ : ಮನೆಯಲ್ಲಿ ಶುಭಕಾರ್ಯದ ಸಂಭ್ರಮ ಇದೆ. ಪರಿಸ್ಥಿತಿಗಳು ನಿಮಗೆ ಅನುಕೂಲವಾಗುವ ರೀತಿಯಲ್ಲೇ ಇದೆ. ಸಾಮಾಜಿಕ ಗೌರವ ಮನ್ನಣೆಗಳಿಗೆ ಭಾಜನರಾಗುತ್ತೀರಿ. ಅರ್ಹರಿಗೆ ಪ್ರಶಸ್ತಿ ಸನ್ಮಾನಗಳು ಲಭಿಸುತ್ತದೆ. ವಿದೇಶ ಪ್ರಯಾಣ ಯೋಗ ಇದೆ. ಮಕ್ಕಳಿಗೆ ಅಭಿವೃದ್ಧಿ ಇದೆ. ಮಕ್ಕಳಿಂದ ಶುಭ ಸಮಾಚಾರ ಕೇಳುತ್ತೀರಿ. ಹಣದ ಹರಿವು ಉತ್ತಮವಾಗಿದೆ. ನೌಕರಿಯಲ್ಲಿ ಬಡ್ತಿ ಸಿಗುವ ಯೋಗ ಇದೆ. ಆಸ್ತಿ‌ಕೊಳ್ಳುವ ಯೋಗ ಇದೆ.

ಧನಸ್ಸು ರಾಶಿ : ಈಗ ನಿಮಗೆ ಐದರಲ್ಲಿ ಶುಕ್ರ ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಇನ್ನು ಕೆಲವೇ ದಿನಗಳಲ್ಲಿ ಗುರುಬಲ ಬರುವುದರಿಂದ ನಿಮಗೆ ಸಾಕಷ್ಡು ಲಾಭಗಳಿವೆ.‌ ಈಗ ಮೂರರ ಶನಿ ಕೂಡ ನಿಮಗೆ ಅನುಕೂಲವಾಗಿ ಇದ್ದಾನೆ.‌ ಎಲ್ಲ ಗ್ರಹಗಳೂ ಈಗ ನಿಮಗೆ ಅನುಕೂಲವಾಗಿದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಶೀಘ್ರವಾಗಿ ನೆರವೇರುತ್ತದೆ. ಸರ್ಕಾರದಿಂದ ಲಾಭ, ಬಂಧುಮಿತ್ರರಿಂದ ಸಹಕಾರ ಇದೆ. 

ಮಕರ ರಾಶಿ : ಶನಿ ನಿಮ್ಮ ರಾಶಿಯನ್ನು ಬಿಟ್ಟು ಹೋಗಿದ್ದರೂ ಈಗ ನಿಮಗೆ ಇನ್ನೂ ಪರೀಕ್ಷಾ ಕಾಲ ನಡೆಯುತ್ತಿದೆ. ಎರಡನೇ ಮನೆಯಲ್ಲಿ ಇರುವ ಶನಿ ಕುಟುಂಬದಲ್ಲಿ ಅಶಾಂತಿ ಯನ್ನು ತುಂಬುತ್ತಾನೆ. ಪ್ರತಿ‌ನಡೆಯನ್ನು ನೀವು ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ನಿಮ್ಮ ಸುತ್ತಮುತ್ತಲೂ ನಿಮ್ಮ ಗಮನಿಸುವ ಆರೋಪಿಸುವ ಜನಗಳು ಇದ್ದಾರೆ. ಕೆಲವು ದಿನಗಳು ಮೌನವಾಗಿ ಇದ್ದುಬಿಡಿ. ಮೌನವೇ ನಿಮ್ಮನ್ನು ರಕ್ಷಿಸುತ್ತದೆ. 

ಕುಂಭ ರಾಶಿ‌ : ಈಗ ನಿಮಗೆ ಗ್ರಹಗಳು ಅನುಕೂಲವಾಗಿದ್ದರೂ ಶನಿ ನಿಮ್ಮ ರಾಶಿಯಲ್ಲೇ ಇರುವುದರಿಂದ ಕೊಂಚ ಮಾನಸಿಕ ಕಿರಿಕಿರಿ ಏನೋ ಭಯ ಆತಂಕ ಇರುತ್ತದೆ. ಕೆಲಸದ ಒತ್ತಡವೂ ಹೆಚ್ಚು. ನೌಕರಿ ಮತ್ತು ಮನೆ ಎರಡನ್ನೂ ಸಮತೋಲನ ಮಾಡಲಾರದೆ ಸೊರಗುತ್ತೀರಿ. ಯಾವುದೇ ಕೆಲಸ ಇತ್ತೀಚೆಗೆ ನಿಧಾನವಾಗುತ್ತಿದೆ. ಕುಟುಂಬದಲ್ಲಿ ಮನಃಶಾಂತಿ ಇಲ್ಲವಾಗಿದೆ. 

ಮೀನ ರಾಶಿ : ಈಗ ನಿಮಗೆ ಹನ್ನೆರಡನೇ ಮನೆಯ ಶನಿ ಪ್ರಭಾವ ಜೋರಾಗಿದೆ. ಉಗುಳಲೂ ಆಗದ ನುಂಗಲೂ ಆಗದ ಬಿಸಿ ತುಪ್ಪವಾಗಿದೆ. ಹಣಕಾಸಿನ ಪರಿಸ್ಥಿತಿ ಡೋಲಾಯಮಾನವಾಗಿದೆ.‌ ಎಷ್ಟೇ ಜಾಣತನ ಮಾಡಿದರೂ ಹಣಕಾಸಿನ ಏರುಪೇರನ್ನು ನಿಭಾಯಿಸಲು ಕಷ್ಟವಾಗಿದೆ. ಹತ್ತಿರದವರ ಅನಾರೋಗ್ಯ ಆಪ್ತರ ಕೆಟ್ಟ ವಾರ್ತೆ ಕೇಳಬೇಕಾಗಬಹುದು. ಎರಡನೇ ಮನೆಯಲ್ಲಿ ಶುಕ್ರ ಇರುವುದು ಕೊಂಚ ಉಪಶಮನ ನೀಡುತ್ತದೆಯಾದರೂ ಗುರು ಬಲ‌ಬರುವವರೆಗೂ ಕಾಯಬೇಕು.‌ 

Leave a Comment