ಮೇಷ : ಈ ವಾರ ಬಹಳಷ್ಟು ಶುಭಫಲಗಳಿವೆ. ಹತ್ತನೇ ಮನೆಯಲ್ಲಿ ಕೇಂದ್ರ ತ್ರಿಕೋಣಾದಿಪತಿ ಯೋಗ ಅಗಿದೆ. ಇದು ನಿಮ್ಮ ವೃತ್ತಿ ಸ್ಥಾನಕ್ಕೆ ಅದೃಷ್ಟ ತರುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಮಯ. ವಾರದ ಕೊನೆಗೆ ಒಳ್ಳೆಯ ಸುದ್ದಿ ಸಿಗುವ ಸಂಭವ. ಒಂಬತ್ತರಲ್ಲಿ ಸೂರ್ಯ ಬುಧ ನಿಮಗೆ ಮಾತಿನಿಂದ ಲಾಭ ಇದೆ. ಕುಲದೇವತಾ ದರ್ಶನ ಆಗುತ್ತದೆ.
ವೃಷಭ : ಒಂಬತ್ತರಲ್ಲಿ ಶನಿ ಶುಕ್ರ ಕೇಂದ್ರ ತ್ರಿಕೋಣಾದಿಪತಿ ಯೋಗ ಅಗಿದೆ. ಇದು ನಿಮಗೆ ಕೀರ್ತಿಯನ್ನು ಗೌರವವನ್ನೂ ಕೊಡುತ್ತದೆ. ಧನಲಾಭ ಇದೆ. ಹನ್ನೊಂದರ ಗುರು ಕೆಲಸಕಾರ್ಯಗಳಲ್ಲಿ ಜಯವನ್ನು ಯಶಸ್ಸನ್ನು ಕೊಡುತ್ತಾನೆ. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ಬಡ್ತಿ ಸಿಗುವ ಸಮಯ. ವಾರದ ಕೊನೆಯಲ್ಲಿ ಗಜಕೇಸರಿ ಯೋಗ ವಾಗುತ್ತದೆ. ಅದು ನಿಮಗೆ ಛಲವನ್ನೂ ಧೈರ್ಯವನ್ನೂ ಕೊಡುತ್ತದೆ. ಎಂಟರಲ್ಲಿ ಸೂರ್ಯ ಬುಧ ನಿಮ್ಮ ರಕ್ಷಣೆ ಮಾಡುತ್ತಾರೆ.
ಮಿಥುನ : ಏಳರಲ್ಲಿ ಬುಧ ಸೂರ್ಯ ಕುಟುಂಬ ಶಾಂತಿಯನ್ನು ಹೆಚ್ಚಿಸುತ್ತಾರೆ. ಗಂಡ ಹೆಂಡತಿ ವೈಮನಸ್ಯ ಕೊನೆಗಾಣುವ ಸಮಯ . ಹನ್ನೊಂದರ ರಾಹು ನಿಮಗೆ ಅಧಿಕ ಧನಲಾಭ ವನ್ನೂ ಕೈಕೊಂಡ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕೊಡುತ್ತಾನೆ. ಶತ್ರುಗಳನ್ನು ನಿವಾರಿಸುತ್ತಾನೆ. ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ.
ಕಟಕ : ಹತ್ತರ ರಾಹು ವೃತ್ತಿಯಲ್ಲಿ ಒತ್ತಡವನ್ನು ತಂದರೂ ಒಂಬತ್ತರ ಗುರು ನಿಮಗೆ ರಕ್ಷಣೆಗೆ ಇದ್ದಾನೆ.ಯಾವುದೇ ರೀತಿಯ ತೊಂದರೆ ಅಪಾಯ ಆಗದ ಹಾಗೆ ಗುರು ರಕ್ಷಿಸುತ್ತಾನೆ. ಹನ್ನೊಂದರ ಕುಜಕೂಡ ಧನಲಾಭ ಕೊಡುತ್ತಾನೆ. ಈ ವಾರ ನಿಮಗೆ ಶುಭಯೋಗದ ಸಮಯ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯುತ್ತದೆ. ಮಕ್ಕಳಿಗೆ ಅಭಿವೃದ್ಧಿ ಇದೆ.
ಸಿಂಹ : ಐದನೇ ಮನೆಯಲ್ಲಿ ಸೂರ್ಯ ಬುಧ ನಿಮ್ಮ ಮಾತಿನಿಂದ ಲಾಭ ಇದೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು ಈಗ ಶೀಘ್ರವಾಗಿ ನೆರವೇರುತ್ತದೆ. ಆರರಲ್ಲಿ ಶುಕ್ರ ವೃತ್ತಿಯಲ್ಲಿ ಒತ್ತಡ ಕೊಡುತ್ತಾನೆ. ಎಂಟರಲ್ಲಿ ಗುರು ಆರೋಗ್ಯದಲ್ಲಿ ಏರುಪೇರು ಮಾಡುತ್ರಾನೆ. ಹತ್ತನೇ ಮನೆಯಲ್ಲಿ ಕುಜ ಭೂಮಿಯಿಂದ ಲಾಭ ಮಾಡಿಸುತ್ತಾನೆ. ಮೂರರ ಕೇತು ನಿಮ್ಮ ಧೈರ್ಯ ಹೆಚ್ಚಿಸುತ್ತಾನೆ. ಒಂಬತ್ತರ ರಾಹುವಿನಿಂದ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಐದರಲ್ಲಿ ಬುಧ ಶುಕ್ರ ಹಾಗೂ ಸೂರ್ಯ ಕೊಂಚ ಬಲವನ್ನು ಕೊಡುತ್ತಾರೆ. ವಿದ್ಯಾರ್ಥಿಗಳಿಗೆ ಶುಭ. ಹಣಕಾಸು ಹರಿವು ಉತ್ತಮವಾಗಿದೆ.
ಕನ್ಯಾ : ನಿಮಗೆ ಈಗ ಗುರುಬಲ ಇದೆ.ಇನ್ನು ಕೆಲವೆ ದಿನಗಳಲ್ಲಿ ಶನಿ ಬಲವೂ ಸೇರುತ್ತದೆ. ಇದು ನಿಮಗೆ ಅದೃಷ್ಟವನ್ನು ದ್ವಿಗುಣ ಮಾಡುತ್ತದೆ. ನಾಲ್ಕರಲ್ಲಿ ಬುಧ ಸೂರ್ಯ, ಐದರಲ್ಲಿ ಶುಕ್ರ ಸಹ ಒಳ್ಳೆಯ ಫಲಗಳನ್ನು ನೀಡುತ್ತಾನೆ. ಸಾಮಾಜಿಕ ಗೌರವ, ಸ್ಥಾನಮಾನ ಸಿಗುವ ಯೋಗ ಇದೆ. ಎರಡರ ಕೇತು ಹಾಗೂ ಎಂಟರ ರಾಹುವಿನಿಂದ ಜಾಗರೂಕರಾಗಿರಿ.
ತುಲಾ : ನಿಮ್ಮ ರಾಶಿಯಲ್ಲೇ ಇರುವ ಕೇತು ಹಾಗೂ ಏಳರ ರಾಹು ನೀವೆಷ್ಟೇ ಮುಂದೆ ಹೋಗಲು ಪ್ರಯತ್ನ ಪಟ್ಟರೂ ಹಿಂದಕ್ಕೆ ಎಳೆಯುತ್ತಾರೆ. ಆರರ ಗುರು ಕೂಡ ನಿಮಗೆ ಶುಭಕಾರಕನಲ್ಲ.ಈಗ ಸದ್ಯಕ್ಕೆಮೂರನೇ ಮನೆಯಲ್ಲಿ ಇರುವ ಸೂರ್ಯ ಬುಧರೆ ನಿಮ್ಮ ಮಿತ್ರರು.ಮೂರರ ಸೂರ್ಯ ನಿಮ್ಮ ಪರಾಕ್ರಮವನ್ನು ಹೆಚ್ಚಿಸುತ್ತಾನೆ. ನಿಮ್ಮ ಮಾತು ನಿಮಗೆ ಗೌರವವನ್ನು ತಂದುಕೊಡುತ್ತದೆ. ನಾಲ್ಕರ ಶುಕ್ರನಿಂದ ವಾಹನದಿಂದ ಲಾಭ. ಸ್ತ್ರಿಯರಿಂದ ಲಾಭ.
ವೃಶ್ಚಿಕ : ಈಗ ನಿಮಗೆ ಗುರುಬಲ ಇರುವುದರಿಂದ ಎಲ್ಲ
ಕೆಲಸ ಕಾರ್ಯಗಳೂ ಚುರುಕಿನಿಂದ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ರಾಹು ಬಲವಾಗಿರುವುದರಿಂದ ಶತ್ರುಗಳು ಹಿಮ್ಮೆಟ್ಟುತ್ತಾರೆ. ಸಾಲ ತೀರಿಸಲು ಮಾರ್ಗ ಸಿಗುತ್ತದೆ. ಮಕ್ಕಳಿಗೆ ಮತ್ತು ಮಕ್ಕಳಿಂದ ಶುಭಫಲಗಳಿವೆ. ಎರಡನೇ ಮನೆಯ ಸೂರ್ಯ ಬುಧ ನಿಮ್ಮ ವಾಕ್ ಶಕ್ತಿಯನ್ನು ಬಲಪಡಿಸುತ್ತಾರೆ. ಮಾತಿನಿಂದ ಲಾಭ ಇದೆ. ಮೂರರ ಶುಕ್ರನಿಂದ ವಾಹನದಿಂದ ಲಾಭ, ಸಂಗಾತಿಯಿಂದ ಲಾಭ ಇದೆ.
ಧನಸ್ಸು : ನಿಮ್ಮ ರಾಶಿಯಲ್ಲೇ ಬುಧ ಸೂರ್ಯರು ನಿಮಗೆ ಮಾತಿನ ಚಾತುರ್ಯವನ್ನು ಹೆಚ್ಚಿಸುತ್ತಾರೆ. ಎರಡನೇ ಮನೆಯ ಶುಕ್ರ ಧನಲಾಭ ಮಾಡಿಸುತ್ತಾನೆ. ವಾಹನ ಖರೀದಿ ಯೋಗ ಇದೆ. ನಾಲ್ಕರ ಗುರು ಐದರ ರಾಹು ಅಷ್ಟು ಶುಭಕಾರಕರಲ್ಲ. ಹನ್ನೊಂದರ ಕೇತು ಧೈರ್ಯ ವನ್ನು ಹೆಚ್ಚಿಸುತ್ತಾನೆ. ಇನ್ನು ಕೆಲವೇ ದಿನಗಳಲ್ಲಿ ಶನಿ ಮೂರನೇ ಮನೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನಅದೃಷ್ಟ ಒದಗಿಬರುತ್ತದೆ. ಕುಜ ಆರನೇ ಮನೆಯಲ್ಲಿ ಇದ್ದು ಭೂಮಿಯಿಂದ ಲಾಭ ಕೊಡಿಸುತ್ತಾನೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ ಇದೆ. ವಿದ್ಯುತ್ ಹಾಗೂ ಕಾಂತೀಯ ಶಕ್ತಿಗಳ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭಫಲಗಳಿವೆ.
ಮಕರ : ಅವಕಾಶಗಳು ಒಂದೊಂದೇ ಬಂದು ಬಾಗಿಲು ತಟ್ಟುತ್ರದೆ. ಆಯ್ಕೆ ನಿಮಗೆ ಸೇರಿದ್ದು.ಸಣ್ಣ ಅವಕಾಶ ಸಿಕ್ಕರೂ ಬಿಡಬೇಡಿ. ಸಣ್ಣ ಬೆಳಕಿನ ಕಿಂಡಿ ನಾಳೆ ದೊಡ್ಡದಾಗಿ ಬಾಳು ಬೆಳಗಬಹುದು. ನಿಮ್ಮ ಗರಿಮೆ ಕೀರ್ತಿ ಹೆಚ್ಚಲಿದೆ. ಹನ್ನೆರಡರ ಸೂರ್ಯ ಬುಧ ನಿಮಗೆ ಯಶಸ್ಸನ್ನು ಕೊಡುತ್ತಾರೆ. ರಾಶಿಯಲ್ಲೇ ಇರುವ ಶುಕ್ರ ನಿಮಗೆ ಶುಭಪಲವನ್ನು ಕೊಡುತ್ತಾನೆ.ಮೂರರ ಗುರು ಸಾತ್ವಿಕ ಪರಾಕ್ರಮವನ್ನು ಕೊಟ್ಟು ಕಾರ್ಯಸಿದ್ಧಿ ಮಾಡಿಸುತ್ತಾನೆ. ನಾಲ್ಕನೇ ಮನೆಯ ರಾಹು ನೀವು ಮನೆಯಿಂದ ದೂರ ಇರುವಂತೆ ಮಾಡಬಹುದು. ಇದು ವೃತ್ತಿಸಂಬಂಧ ವಾಗಿಯೂ ಇರಬಹುದು. ಮಕ್ಕಳಿಂದ ಶುಭಸುದ್ದಿ ಇದೆ.
ಕುಂಭ : ದೃಢ ನಿರ್ಧಾರಗಳನ್ನು ಕೈಗೊಳ್ಳುವುದು ಬಹಳ ಉತ್ತಮ. ಹಣದ ಹರಿವು ಅಗತ್ಯವನ್ನು ಪೂರೈಸುತ್ತದೆ. ಸಂಗೀತಗಾರರಿಗೆ ಬೇಡಿಕೆ ಬರುತ್ತದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ಒಡಹುಟ್ಟಿದವರಿಂದ ಉತ್ತಮ ಸಹಕಾರ ಇರುವುದಿಲ್ಲ. ಆಸ್ತಿ ವಿಷಯದಲ್ಲಿ ಮುನ್ನಡೆಯನ್ನು ಕಾಣುವಿರಿ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ತೆರಿಗೆ ತಜ್ಞರಿಗೆ ಮತ್ತು ಗಣಿತಜ್ಞರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಶೀತಬಾಧೆ ಇರುವವರು ಚಿಕಿತ್ಸೆ ಪಡೆದುಕೊಳ್ಳಿರಿ.
ಮೀನ : ಹತ್ತರಲ್ಲಿ ಸೂರ್ಯ ಬುಧ ಹನ್ನೊಂದರಲ್ಲಿ ಶುಕ್ರ ಮೂರರಲ್ಲಿ ಕುಜ ನಿಮಗೆ ಈಗ ಅದೃಷ್ಟ ತರುವ ಗ್ರಹಗಳು.ಯಶಸ್ಸು ಕಾರ್ಯಸಿದ್ಧಿ ಧನಲಾಭ ಇದೆ. ಪರಿಸ್ಥಿತಿಗಳನ್ನು ಧೈರ್ಯವಾಗಿ ಎದುರಿಸುತ್ತೀರಿ. ನಿಮ್ಮ ರಾಶಿಯಲ್ಲೆ ಇರುವ ಗುರು ಮತ್ತು ಎರಡನೇ ಮನೆಯಲ್ಲಿ ಇರುವ ರಾಹು ನಿಮಗೆ ಹಿನ್ನಡೆ ಕೊಡುತ್ತಾರೆ. ನೀವು ಎಣಿಸಿದ ಕಾರ್ಯಗಳಲ್ಲಿ ವಿಘ್ನಗಳು ಅಡೆತಡೆಗಳು ಎದುರಾಗುತ್ತದೆ. ಮಾತಿನಿಂದ ತೊಂದರೆ ಇದೆ. ಯಾರೊಂದಿಗೂ ವಾದ ಮಾಡಬೇಡಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಈಗ ಶ್ರಮ ಹೆಚ್ಚು ಫಲ ಕಡಿಮೆ.














