ಮೇಷ ಹೊಸ ಉದ್ಯಮ ಪ್ರಾರಂಭಿಸಲು ಸಾಕಷ್ಟು ಚಿಂತನೆ ಮಾಡುವಿರಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆಗಳಿವೆ. ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿ ತಲೆನೋವು ಇತ್ಯಾದಿ ಕಾಯಿಲೆ ಬರಬಹುದು.
ವೃಷಭ
ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ಹೆಚ್ಚಿನ ಬೇಡಿಕೆ ಬಂದು ಲಾಭ ಬರುತ್ತದೆ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ನಿಧಾನಗತಿ ಇರಲಿದೆ. ಹಿರಿಯ ಅಧಿಕಾರಿಗಳೊಡನೆ ವಾದ-ವಿವಾದ ಖಂಡಿತ ಬೇಡ. ಸ್ವಂತ ಉದ್ದಿಮೆ ನಡೆಸುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ.
ಮಿಥುನ
ಹಂತಹಂತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಮುನ್ನಡೆಯುವಿರಿ. ವಿದ್ಯಾರ್ಥಿಗಳು ಅಭ್ಯಾಸದತ್ತ ಹೆಚ್ಚಿನ ಗಮನಹರಿಸುವುದು ಅಗತ್ಯ. ಸರ್ಕಾರದಿಂದ ಬರಬೇಕಾಗಿದ್ದ ಹಣ ಈಗ ಬರುತ್ತದೆ. ಸರ್ಕಾರಿ ಹೂಡಿಕೆಯಲ್ಲಿದ್ದ ಹಣ ಇಡಿ ಗಂಟಾಗಿ ಒದಗಿ ಬರುತ್ತದೆ.
ಕಟಕ
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪನ್ಮೂಲ ಕ್ರೋಡೀಕರಣ ಮಾಡುವಿರಿ. ನಿಮಗೆ ಬೇಕಾದ ಸಾಲ ಸೌಲಭ್ಯ ಸರಾಗವಾಗಿ ದೊರೆಯುತ್ತದೆ. ಆತ್ಮಸ್ಥೈರ್ಯದಿಂದ ಮಾಡಿದ ಕೆಲಸಗಳಿಗೆ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು.
ಸಿಂಹ
ಗಣ್ಯರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶಗಳು ಕೆಲವರಿಗೆ ಒದಗಿಬರುತ್ತದೆ. ನಿಮ್ಮ ಯೋಜನೆಗಳನ್ನು ಆದ್ಯತೆಯ ಮೇಲೆ ಜಾರಿಗೊಳಿಸುವುದು ಉತ್ತಮ. ಪ್ರಯಾಣ ಕಾಲದಲ್ಲಿ ಅಪರಿಚಿತರ ಜೊತೆ ಎಚ್ಚರವಾಗಿರಿ. ಇವರು ನಿಮ್ಮನ್ನು ದಾರಿತಪ್ಪಿಸಲು ಯತ್ನಿಸುವರು.
ಕನ್ಯಾ
ಮನೆಯವರ ಅಸಮ್ಮತಿಯ ನಡುವೆಯೂ ಕೆಲವರು ಸಂಗಾತಿಯ ಆಯ್ಕೆಯನ್ನು ಮಾಡಿಕೊಳ್ಳುವರು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಗುವ ಸಂದರ್ಭವಿದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ನಿರೀಕ್ಷಿತ ಲಾಭವಿರುತ್ತದೆ. ಮೂಳೆ ತೊಂದರೆ ಇರುವವರು ಎಚ್ಚರವಹಿಸಿರಿ.
ತುಲಾ
ಕೃಷಿ ಸಂಬಂಧಿತ ಯಂತ್ರೋಪಕರಣಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ವೃದ್ಧಿಸುತ್ತದೆ. ಲೆಕ್ಕ ಪರೀಕ್ಷಕರಿಗೆ ಅನಿರೀಕ್ಷಿತವಾದ ಸಮಸ್ಯೆಗಳು ತಲೆದೋರಬಹುದು. ಆದಾಯಕ್ಕಿಂತ ವೆಚ್ಚ ಹೆಚ್ಚಾಗುವ
ಸಾಧ್ಯತೆಯಿದೆ. ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳಿ.
ವೃಶ್ಚಿಕ
ತಂದೆ-ತಾಯಿಗಳಿಗೆ ಅವರ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಯೋಗವಿದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ನಿರೀಕ್ಷಿತ ಮೂಲಗಳಿಂದ ಆದಾಯವಿರುತ್ತದೆ. ಆಹಾರ ಪದಾರ್ಥಗಳ ವ್ಯವಹಾರ ಮಾಡುವವರಿಗೆ ವ್ಯವಹಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ.
ಧನು
ಯಂತ್ರೋಪಕರಣಗಳನ್ನು ದುರಸ್ತಿ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಹೊಸ ನಿವೇಶನವನ್ನು ಕೊಳ್ಳುವ ಯೋಗವಿದೆ. ಒಡಹುಟ್ಟಿದವರಿಂದ ಆಸ್ತಿಯ ಬಗ್ಗೆ ತಗಾದೆ ಬರಬಹುದು. ವಾಯುಯಾನ ತಂತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಸಂಶೋಧನೆ ಮಾಡುತ್ತಿರುವವರಿಗೆ ಉತ್ತಮ ಫಲಿತಾಂಶವಿರುತ್ತದೆ.
ಮಕರ
ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸಿರಿ. ನೆರೆಹೊರೆಯವರೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿಕೊಳ್ಳುವಿರಿ. ಸಂಯಮದಿಂದ ವ್ಯವಹರಿಸಿದಲ್ಲಿ ವೃತ್ತಿಯಲ್ಲಿನ ಕೆಲವು ತೊಂದರೆಗಳು ನಿವಾರಣೆಯಾಗುತ್ತವೆ. ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ.
ಕುಂಭ
ಸಾವಯವ ಕೃಷಿ ಪದಾರ್ಥಗಳನ್ನು ಬೆಳೆಯುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಜಮೀನಿನ ಕೆಲಸಗಳು ಭರದಿಂದ ಸಾಗುತ್ತವೆ. ಯುವಕರು ಅವರ ಸಾಮರ್ಥ್ಯವನ್ನು ಅರಿತು ಕೆಲಸ ವಹಿಸಿಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ಎಲ್ಲರ ಮುಂದೆ ಅಗೌರವಕ್ಕೆ ಪಾತ್ರರಾಗುವಿರಿ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ.
ಮೀನ
ಕೆಲವೊಂದು ತುರ್ತು ವಿಷಯಗಳ ಪರಿಹಾರಕ್ಕಾಗಿ ಸಂಬಂಧಿಕರನ್ನು ಓಲೈಸುವಿರಿ. ನೌಕರ ವರ್ಗದವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆತು ಪ್ರೋತ್ಸಾಹಧನ ಸಿಗುವ ಸಾಧ್ಯತೆ ಇದೆ. ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದಲ್ಲಿ ಅವರ ಗೌರವಕ್ಕೆ ಕುಂದು ಬರಬಹುದು.














