ಭಾರತೀಯ ಜನತಾ ಪಾರ್ಟಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ವತಿಯಿಂದ ಕ್ಷೇತ್ರದ ಕಲ್ಯಾಣ ಗಿರಿ ರಾಜಕುಮಾರ್ ರಸ್ತೆಯಲ್ಲಿರುವ ಕಲ್ಯಾಣ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಭಗತ್ ಸಿಂಗ್ ಹಾಗೂ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ಅಂಗವಾಗಿ ದೇಶಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆಯ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿತ್ತು .
18 ವರ್ಷದ ಒಳಪಟ್ಟ ಮಕ್ಕಳಿಗೆ ದೇಶ ಭಕ್ತಿಗೀತೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಮೈಸೂರಿನ ಅನೇಕ ಭಾಗಗಳಿಂದ 120 ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಹಾಡುಗಳನ್ನು ಹಾಡಿ ವಿಡಿಯೋ ಮುಖಾಂತರ ಭಾಗವಹಿಸಿದ್ದು ಹಾಡಿರುವ ತುಣುಕುಗಳಲ್ಲಿ ಭಗತ್ ಸಿಂಗ್ ಹಾಗೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಮತ್ತು ದೇಶಕ್ಕೆ ಸಂದೇಶ ಸಾರುವಂತಹ ಸಾಹಿತ್ಯದ ಹಾಡುಗಳನ್ನು ಹಾಡುವ ಮುಖಾಂತರ ವಿಭಿನ್ನವಾಗಿ ಭಾಗವಹಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸರಸ್ವತಿಪುರಂನ ಭುವನ.ಕೆ : ರೊ 3000 ಹಾಗೂ ಸದ್ವಿದ್ಯಾ ಶಾಲೆಯ ವಿದ್ಯಾರ್ಥಿನಿ, ದ್ವಿತೀಯ ಬಹುಮಾನವನ್ನು ಎಂ ಶರಣ್ಯಭಾರದ್ವಾಜ್ ರಾಘವೇಂದ್ರ ನಗರ ಜೆಎಸ್ ಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ರೂ 2000 ಬಹುಮಾನ ಪಡೆದರು. ತೃತೀಯ ಬಹುಮಾನವನ್ನು ಎಂ ಗಿರೀಶ್ ನಾಯಕ್, ಕ್ಯಾತಮಾರನಹಳ್ಳಿ ನಿವಾಸಿ ಹಾಗೂ ಜೆಎಸ್ ಎಸ್ ಬಾಲಜಗತ್ ಶಾಲೆ ವಿದ್ಯಾರ್ಥಿ ,ರೂ - 1000 ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು ಹಾಗೂ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ನಗರ ಮಾಜಿ ಮಹಾಪೌರರಾದ ಶ್ರೀ ಸಂದೇಶ್ ಸ್ವಾಮಿ ರವರು ಕರೋನಾ ಸಂದರ್ಭದಲ್ಲಿ ಸತತ 2ವರ್ಷಗಳಿಂದ ಮಕ್ಕಳು ಮನೆಯಲ್ಲೇ ಕುಳಿತು ಹೊರಗಡೆ ಬಾರದೆ ಆಟವನ್ನು ಆಡಲಿಕ್ಕೆ ಆಗದೇ ಮೊಬೈಲ್ ನಲ್ಲೇ ವಿದ್ಯಾಭಾಸವನ್ನು ಮಾಡುತ್ತಿದ್ದನ್ನು ವಿಶ್ವಾದ್ಯಂತ ನೋಡಿದೆವು, ಆದರೆ ಇವತ್ತಿನ ದಿನ ಮಕ್ಕಳು ಟಿಕ್ ಟಾಕ್ ಹಾಗೂ ಇನ್ನಿತರ ಗೇಮ್ ಗಳ ನಾಡುವ ಮುಖಾಂತರ ತಮ್ಮ ಅತ್ಯಮೂಲ್ಯ ಸಮಯವನ್ನು
ಹಾಳು ಮಾಡಿಕೊಳ್ಳುತ್ತಿದ್ದಾರೆ ಇಂದು ನರಸಿಂಹರಾಜ ಕ್ಷೇತ್ರ ಯುವಮೋರ್ಚಾ ತಂಡವು ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ ಮಾಡುವ ಮುಖಾಂತರ ಮಕ್ಕಳಿಗೆ ದೇಶದ ಬಗ್ಗೆ ಅರಿವು ಮೂಡಿಸುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ನಂತರ ಮಾತನಾಡಿದ ಬಿಜೆಪಿ ಮೈಸೂರು ನಗರ ಉಪಾಧ್ಯಕ್ಷರು ಹಾಗೂ ಯುವ ಮೋರ್ಚಾ ಉಸ್ತುವಾರಿಗಳಾದ ಟಿ ರಮೇಶ್ ರವರು ಭಗತ್ ಸಿಂಗ್ ಹಾಗೂ ಸ್ವಾಮಿ ವಿವೇಕಾನಂದರ ಸಾಧನೆಯ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇದೊಂದು ಅವಕಾಶವಾಗಿದೆ ಇವತ್ತಿನ ಯುವ ಪೀಳಿಗೆ ಅನ್ಯ ಭಾಷೆ ಗಳತ್ತ ಗಮನ ಹರಿಸುತ್ತಿದ್ದು ಇದು ಬೇಸರದ ಸಂಗತಿಯಾಗಿದೆ ಆದರೆ ಇವತ್ತಿನ ದಿನ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳನ್ನು ನೋಡುತ್ತಿದ್ದರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ನಮ್ಮ ದೇಶವನ್ನು ಸದೃಢಪಡಿಸಲು ಇಂತಹ ಮಕ್ಕಳಲ್ಲಿ ಕಂಡು ಬರುತ್ತಿದೆ ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿಲ್ ಥಾಮಸ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್ ಜಿ ಗಿರಿಧರ್, ಮೈಸೂರು ನಗರ ಯುವಮೋರ್ಚಾ ಅಧ್ಯಕ್ಷ ಎಂ ಜೆ ಕಿರಣ್ ಗೌಡ, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವೇಲು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್, ಹಾಗೂ ನವೀನ್ ಶೆಟ್ಟಿ, ಯುವ ಮೋರ್ಚಾ ಪದಾಧಿಕಾರಿಗಳಾದ ಕಾರ್ತಿಕ್ ಮರಿಯಪ್ಪ, ನಿಶಾಂತ್, ಪುನೀತ್, ಅರುಣ್, ನಯನ್, ಜಗದೀಶ್, ಮಂಜು ಸಿ, ಶಿವಾನಂದರಾವ್, ಸಂತೋಷ್ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.














