ಕಾಸರಗೋಡು: ಶವರ್ಮಾ ಸೇವಿಸಿ ಬಾಲಕಿ ಸಾವು, 14 ಮಂದಿ ಅಸ್ವಸ್ಥಗೊಂಡಿದ್ದು, 5 ಮಂದಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ.
ಕರಿವೆಲ್ಲೂರು ಪೇರಲದ 16 ವರ್ಷದ ಬಾಲಕಿ ಮೃತಪಟ್ಟಿದ್ದು, ಇತರ 14 ಮಂದಿ ವಾಂತಿ, ಜ್ವರ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.
ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಎ. 29 ಮತ್ತು 30 ರಂದು ಚೆರ್ವತ್ತೂರಿನ ಕೂಲ್ ಬಾರ್ ನಲ್ಲಿ ಶವರ್ಮಾ ಸೇವಿಸಿದ್ದರು.














