Coastal Bulletin

ಬೆಂಗಳೂರು : ಕೆಜಿಎಫ್ ಚಾಪ್ಟರ್​ 2 ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆಯಲಿದೆ ಎಂದು ಸಿನಿ ಪಂಡಿತರು ಮೊದಲೇ ಊಹಿಸಿದ್ದರು. ಈ ಊಹೆ ನಿಜವಾಗಿದೆ. ಈ ಭಾರತೀಯ ಸಿನಿಮಾ ಇತಿಹಾಸದಲ್ಲಿ ಈವರೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಮೂರು ಚಿತ್ರಗಳು ಮಾತ್ರ. ಕನ್ನಡದ ಸಿನಿಮಾ ಒಂದು ಈ ದಾಖಲೆ ಬರೆದಿದ್ದು ಇದೇ ಮೊದಲು ಅನ್ನೋದು ವಿಶೇಷ.

ಅಮೀರ್ ಖಾನ್ ನಟನೆಯ ಹಿಂದಿ ಸಿನೇಮಾ ದಂಗಲ್,ರಾಜಮೌಳಿ ನಿರ್ದೇಶನದ ಬಾಹುಬಲಿ 2, ಹಾಗೂ RRR ಸಾವಿರ

ಕೋಟಿ ದಾಟಿದ ಸಿನೇಮಾಗಳು. ಕೆಜಿಎಫ್ ನಂತಹ ಇನ್ನಷ್ಟು ಸಿನೇಮಾಗಳು ದಾಖಲೆಗಳನ್ನು ಬರೆಯಲಿ ಎಂದು ಸಿನಿ ಪ್ರಿಯರ ಆಗ್ರಹ.

Leave a Comment