ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ಜೋಡುಮಾರ್ಗ ನೇತ್ರಾವತಿ ಜೇಸಿಯಿಂದ ತುಳು ಬದುಕಿನ ಅವಲೋಕನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರದ ಅಧ್ಯಕ್ಷರಾದ ಡಾ. ತುಕಾರಾಮ ಪೂಜಾರಿ ಮಾತನಾಡಿ, ಜನಸಾಮಾನ್ಯರ ಬದುಕಿನ ಇತಿಹಾಸವನ್ನು ಅರಿಯಬೇಕು ಎಂಬ ಕಾಳಜಿ ನಮ್ಮಲ್ಲಿ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ ಜೇಸಿ ಸದಸ್ಯರು ಅಧ್ಯಯನ ಕೆಂದ್ರ ವೀಕ್ಷಿಸಿ ಇದರ
ಮಾಹಿತಿ ಪಡೆದಿರುವುದು ಅಭಿನಂದನೀಯ ಎಂದರು.
ಜೇಸಿ ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷೆ ಶೈಲಜಾ ರಾಜೇಶ್ ಶುಭ ಹಾರೈಸಿದರು. ಕಾರ್ಯದರ್ಶಿ ಕಿಶನ್ ಎನ್. ರಾವ್ ವಂದಿಸಿದರು. ಈ ಸಂದರ್ಭ ಕೇಂದ್ರದ ನಿರ್ದೇಶಕಿ ಡಾ.ಆಶಾಲತಾ ಸುವರ್ಣ, ಜೇಸಿ ಪೂರ್ವಾಧ್ಯಕ್ಷರಾದ ರಾಮಚಂದ್ರ ರಾವ್, ಹರ್ಷರಾಜ್ ಉಪಸ್ಥಿತರಿದ್ದರು.














