Coastal Bulletin

ನವದೆಹಲಿ: ದಿನದಿಂದ ದಿನಕ್ಕೆ ದೇಶದ ಜನತೆಗೆ ಬೆಲೆಯ ಏರಿಕೆಯ ಬಿಸಿ ಜಾಸ್ತಿ ಆಗುತ್ತಲೇ ಇದೆ. ಇಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 102.50 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,335.50 ರೂಪಾಯಿಗೆ ಏರಿಕೆಯಾಗಿದೆ.

ಏಪ್ರಿಲ್​ 1ರಂದು ಬರೋಬ್ಬರಿ 250 ರೂಪಾಯಿ ಏರಿಕೆಯಾಗಿ, 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,253 ರೂಪಾಯಿ ತಲುಪಿತ್ತು. ಇದೀಗ ಮೇ 1ರ ಕಾರ್ಮಿಕ ದಿನದಂದು ಕೂಡ ವಾಣಿಜ್ಯ ಬಳಕೆಯ ಸಿಲಿಂಡರ್​ನ ಬೆಲೆಯಲ್ಲಿ 102.50 ರೂಪಾಯಿ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ

19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,335.50 ರೂಪಾಯಿ ತಲುಪಿದೆ. 

ವಾಣಿಜ್ಯ ಬಳಕೆ ಸಿಲಿಂಡರ್​ ದರ ಏರಿಕೆಯಿಂದ ಹೋಟೆಲ್​ ತಿಂಡಿ ತಿನಿಸುಗಳ ಬೆಲೆ ಸಹಜವಾಗಿ ಏರಿಕೆಯಾಗಿದ್ದು, ಇದರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ. ಇನ್ನು 5 ಕೆಜಿ ಸಿಲಿಂಡರ್​ನ ಬೆಲೆ 655 ರೂಪಾಯಿ ಆಗಿದೆ. 

Leave a Comment