ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು “ಚಿಣ್ಣರಲೋಕ ಲೋಕದ ಕಲಾವಿದರ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಆರಂಭವಾಗಿರುವ ಕರಾವಳಿ ಕಲೋತ್ಸವ -2022 ರ ಎರಡನೇ ದಿನವಾದ ಶನಿವಾರ ಸಂಜೆ ಕುಣಿತ ಭಜನಾ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಸಂಸ್ಕಾರ ಭಾರತಿ ದ.ಕ.ಜಿಲ್ಲೆ ಮತ್ತು ಬಂಟ್ವಾಳ ತಾ.ಘಟಕದ ಆಶ್ರಯದಲ್ಲಿ ನಡೆದ ಕುಣಿತ ಭಜನಾ ಸ್ಪರ್ಧೆಯನ್ನು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಉದ್ಘಾಟಿಸಿ,ಆಶೀರ್ವಚನಗೈದು, ಭಜನೆ,ಕುಣಿತ ಭಜನೆ ಜೀವನದಲ್ಲಿ ಹೊಸ ಆಯಾಮವನ್ನು ಸೃಷ್ಟಿಸುವ ಮೂಲಕ ಭಕ್ತಿಮಾರ್ಗಕ್ಕೆ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ತಾರನಾಥ ಕೋಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಇಂಜಿನಿಯರ್ ರೋ.ಸುದೀರ್ ಶೆಟ್ಟಿ, ಬಂಟ್ವಾಳ ಕುಂಬಾರ ಸಹಕಾರಿ ಸಂಘ ನಿಯಮಿತದ ನಿರ್ದೇಶಕಿ ಶುಭಾ ಆನಂದ ಬಂಜನ್, ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ದ.ಕ.ಜಿಲ್ಲಾಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ,ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಚಿಣ್ಣರಲೋಕ ಲೋಕದ ಕಲಾವಿದರ ಸೇವಾ ಟ್ರಸ್ಟ್ ನ
ಮಂಗಳೂರು ಸಂಚಾಲಕಿ ವಿಶಾಲಾಕ್ಷಿ ಉಪಸ್ಥಿತರಿದ್ದರು.
ರಾಮಕೃ ಷ್ಣ ಕಾಟುಕುಕ್ಕೆ , ಪ್ರದೀಪ್ ಎಸ್, ಆರ್ , ವಿಜಯಲಕ್ಷ್ಮೀ ಕಟೀಲ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.ಜಿಲ್ಲೆಯ ವಿವಿಧ 10 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕುಣಿತ ಭಜನೆ ಮಾಣಿಲಶ್ರೀಗಳು ಸೇರಿದಂತೆ ಸಂಘಟಕರು,ನೆರೆದ ಜನರ ಮನಸೂರೆಗೊಂಡಿತು.ಅದರಲ್ಲು ಮಕ್ಕಳು ಭಜನೆಯಲ್ಲಿ ಭಾಗವಹಿಸಿ ವಿಶೇಷ ಗಮಮಸೆಳೆದರು.
ಟ್ರಸ್ಟ್ ನ ಪ್ರಧಾನ ಸಂಚಾಲಕ ಮೋಹನದಾಸ್ ಕೊಟ್ಟಾರಿ ಪ್ರಸ್ತಾವಿಸಿದರು.
ಸಂಸ್ಕಾರ ಭಾರತಿಯ ಬಂಟ್ವಾಳ ಘಟಕದ ಸಂಯೋಜಕ ಮಂಜುವಿಟ್ಲ ಸ್ವಾಗತಿಸಿದರು. ದೇವದಾಸ್ ವಂದಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಭಜನಾ ಸ್ಪರ್ಧೆಯ ಬಳಿಕ ಸನಾತನ ನಾಟ್ಯಾಲಯದ ತಂಡದಿಂದ ರಾಜ್ಯ ಜಾಗೃತಿಯ ನೃತ್ಯವೈವಿಧ್ಯ "ಪುಣ್ಯ ಭೂಮಿ ಭಾರತ" , ಕಾರ್ಯಕ್ರಮ ನಡೆಯಿತು.














