ವಾರ ಭವಿಷ್ಯ
ಮೇಷ
ಭೂ ವ್ಯವಹಾರದಲ್ಲಿ ಹೆಚ್ಚು ಶ್ರಮ ವಹಿಸಿದರೂ ಲಾಭ ಕಡಿಮೆ ಇರುತ್ತದೆ. ಕೊಟ್ಟ ಸಾಲದಲ್ಲಿ ಸ್ವಲ್ಪ ಭಾಗ ವಾಪಸ್ಸು ಬರುತ್ತದೆ. ವಿದೇಶಿ ಹಣ ಬದಲಾವಣೆಯನ್ನು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ.
ವೃಷಭ
ಮುಂದಾಲೋಚನೆಯಿಂದ ಮುಂಬರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಸ್ತ್ರೀ ವರ್ಗದವರಿಗೆ ಅತ್ಯಂತ ಸಂತೋಷಕರವಾದ ವಾತಾವರಣ ದೊರೆಯಲಿದೆ.
ಮಿಥುನ
ಸ್ನೇಹಿತರು ಮತ್ತು ಬಂಧುಗಳೊಂದಿಗೆ ಸಂಬಂಧ ಗಟ್ಟಿಗೊಳ್ಳುವ ಅವಕಾಶವಿದೆ. ಗೃಹ ಆಲಂಕಾರಿಕ ವಸ್ತುಗಳನ್ನು ಖರೀದಿ ಮಾಡುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಯೋಗವಿದೆ. ಹಿರಿಯರ ಸಹಕಾರದಿಂದ ಹೊಸ ಆದಾಯದ ಮೂಲಗಳನ್ನು ಶೋಧಿಸುವಿರಿ.
ಕಟಕ
ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ ಇದೆ. ಕುಟುಂಬದಲ್ಲಿನ ಅಶಾಂತಿಯನ್ನು ಕುಳಿತು ಮಾತನಾಡಿ ಪರಿಹರಿಸಿಕೊಳ್ಳುವುದು ಒಳ್ಳೆಯದು.
ಸಿಂಹ
ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿರುವವರಿಗೆ ಉತ್ತಮ ಸೌಕರ್ಯಗಳು ದೊರೆಯುತ್ತವೆ. ವಾಹನ ಮಾರಾಟ ಮಾಡುವವರ ವ್ಯವಹಾರ ಅಭಿವೃದ್ಧಿಯತ್ತ ಸಾಗುತ್ತದೆ. ಕಳೆದುಕೊಂಡಿದ್ದ ವಸ್ತುವೊಂದು ಮತ್ತೆ ದೊರೆತು ಸಂತಸವಾಗುತ್ತದೆ.
ಕನ್ಯಾ
ವೃತ್ತಿಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರನ್ನು ಸಾಮಾಜಿಕವಾಗಿ ಜನರು ಗುರುತಿಸಿ ಅಭಿನಂದನೆ ಸಲ್ಲಿಸುವರು.
ತುಲಾ
ಅನಗತ್ಯ ಮಾತುಕತೆಗಳಲ್ಲಿ ಭಾಗವಹಿಸುವುದು ಬೇಡ.
ಯಾರಿಗೋ ನೀತಿ ಹೇಳಲು ಹೋಗಿ ನೀವು ಮುಜುಗರಕ್ಕೀಡಾಗುವ ಸಂದರ್ಭವಿದೆ. ಭೂ ವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಸ್ವಲ್ಪ ಎಚ್ಚರ ವಹಿಸಿರಿ.
ವೃಶ್ಚಿಕ
ಸ್ವಲ್ಪ ಹಣ ಕಾಣೆಯಾಗಿ ಕಷ್ಟನಷ್ಟಗಳನ್ನು ಅನುಭವಿಸುವ ಸಾಧ್ಯತೆಯಿದೆ. ಉದ್ಯೋಗ ಬದಲಾವಣೆಗಾಗಿ ಚಿಂತನೆ ಮಾಡುವಿರಿ. ಸರಿಯಾದ ಉದ್ಯೋಗ ದೊರೆಯುವವರೆಗೆ ಬದಲಾವಣೆಯ ಚಿಂತೆ ಬೇಡ.
ಧನು
ದೊಡ್ಡ ದೊಡ್ಡ ವ್ಯವಹಾರಸ್ಥರ ಸಂಪರ್ಕದಿಂದಾಗಿ ನಿಮ್ಮ ವ್ಯವಹಾರವು ಒಂದು ಸ್ಪಷ್ಟ ತಿರುವನ್ನು ಪಡೆಯುತ್ತದೆ. ನಿಮ್ಮ ಪ್ರಭಾವದಿಂದಾಗಿ ನೆರೆಹೊರೆಯವರ ಸಮಸ್ಯೆಗಳನ್ನು ಪರಿಹರಿಸುವಿರಿ.
ಮಕರ
ವಿದ್ಯಾರ್ಥಿಗಳು ಶ್ರಮವಹಿಸಿ ಮಾಡಿದ ಅಧ್ಯಯನಕ್ಕೆ ಸೂಕ್ತ ಫಲ ದೊರೆಯುತ್ತದೆ. ಸರ್ಕಾರಿ ನೌಕರರಿಗೆ ಸ್ಥಾನಪಲ್ಲಟದ ಯೋಗವಿದೆ. ಸ್ವಯಂ ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಹೆಚ್ಚಳವನ್ನು ಕಾಣಬಹುದು.
ಕುಂಭ
ಗೃಹಾಲಂಕಾರ ಸಾಮಗ್ರಿಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಬರುತ್ತದೆ. ಚಿನ್ನಾಭರಣಗಳಿಗೆ ಕುಸುರಿ ಕೆಲಸವನ್ನು ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ವಿದೇಶ ಪ್ರಯಾಣದ ಕನಸು ಗರಿಗೆದರುವ ಸಾಧ್ಯತೆಗಳಿವೆ.
ಮೀನ
ಆರ್ಥಿಕ ಸದೃಢತೆಯಿಂದ ಗೃಹ ನಿರ್ಮಾಣ ಕಾರ್ಯದಲ್ಲಿ ಯಶಸ್ಸನ್ನು ಕಾಣುವಿರಿ. ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ಆಶಾಕಿರಣವೊಂದು ಮೂಡಿಬರಲಿದೆ. ಅನಾವಶ್ಯಕ ವ್ಯವಹಾರಗಳಲ್ಲಿ ಅಥವಾ ವಿಚಾರಗಳಲ್ಲಿ ತಲೆ ಹಾಕದಿರುವುದು ಬಹಳ ಉತ್ತಮ.















