Coastal Bulletin

ಮೇಷ ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ವೃತ್ತಿರಂಗದಲ್ಲಿ ಅಧಿಕ ಒತ್ತಡದಿಂದಾಗಿ ಉದ್ವೇಗಕ್ಕೆ ಒಳಗಾಗುವಿರಿ. ದಾಂಪತ್ಯದಲ್ಲಿ ಅನಗತ್ಯ ವಿವಾದಗಳು ಮೂಡಬಹುದು. ನೌಕರಿಯಲ್ಲಿ ಉನ್ನತ ಸ್ಥಾನ ಅಥವಾ ಆಶಿಸಿದ ಸ್ಥಾನಕ್ಕೆ ವರ್ಗಾವಣೆಯನ್ನು ಪಡೆಯಬಹುದು. 

ವೃಷಭ


ತಾಳ್ಮೆ ಮತ್ತು ಸಮಾಧಾನ ಚಿತ್ತದಿಂದ ವ್ಯವಹರಿಸುವುದು ಬಹಳ ಒಳ್ಳೆಯದು. ವಿದೇಶಿ ವ್ಯಾಪಾರ ವ್ಯವಹಾರಗಳನ್ನು ಮಾಡುವವರ ವ್ಯವಹಾರ ವಿಸ್ತರಣೆಯಾಗುತ್ತದೆ. ಆಸ್ತಿ ಚಿಕಿತ್ಸಕರಿಗೆ ಹಾಗೂ ಮೂಳೆ ವೈದ್ಯರಿಗೆ ಹೆಚ್ಚಿನ ಬೇಡಿಕೆ ಬಂದು ಸಂಪಾದನೆ ವೃದ್ಧಿಸುತ್ತದೆ. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ


ಮಿಥುನ


ವಾಹನ ಖರೀದಿಯ ಅವಕಾಶಗಳು ಕಂಡುಬರುತ್ತಿವೆ. ಸ್ವಯಂ ಉದ್ಯೋಗವನ್ನು ಆರಂಭಿಸಬೇಕೆಂದು ಇರುವವರು ಈಗ ಆರಂಭಮಾಡಬಹುದು. ಗುಡಿ ಕೈಗಾರಿಕೆ ಮಾಡುವವರಿಗೆ ಬೇಡಿಕೆ ಬಂದು ಹೆಚ್ಚು ವ್ಯವಹಾರಗಳಾಗುತ್ತವೆ


ಕಟಕ


ದೂರ ಪ್ರಯಾಣದಿಂದ ಆಗಬೇಕಿದ್ದ ಕೆಲಸಗಳು ಈಗ ಸುಗಮವಾಗಿ ಆಗುತ್ತವೆ. ನಿಮ್ಮ ವ್ಯವಹಾರಗಳ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ. ಹಿರಿಯರೊಂದಿಗೆ ಹೆಚ್ಚಿನ ವಾದ-ವಿವಾದಗಳು ನಿಮಗೆ ಹಿನ್ನಡೆಯನ್ನು ತರುತ್ತವೆ. ನಿಮ್ಮ ಹುಡುಗಾಟದ ನಡವಳಿಕೆ ನಿಮ್ಮನ್ನು ಅಪಹಾಸ್ಯಕ್ಕೆ ಗುರಿ ಮಾಡಬಹುದು.


ಸಿಂಹ


ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಉತ್ತಮವಾಗಿರುತ್ತದೆ. ಆದಾಯಕ್ಕೆ ಮೀರಿದ ಖರ್ಚು ತಲೆದೋರುವ ಸಾಧ್ಯತೆಗಳಿವೆ. ಆದ್ದರಿಂದ ಹಣದ ನಿರ್ವಹಣೆ ಸರಿಯಾಗಿರಲಿ. ಭೂ ವಿವಾದಗಳು ನಿಮಗೆ ಮುತ್ತಿಕೊಳ್ಳುವ ಸಾಧ್ಯತೆಯಿದೆ.

ಕನ್ಯಾ


ಆರ್ಥಿಕ ಅನುಕೂಲ ಸ್ವಲ್ಪಮಟ್ಟಿಗೆ ಉತ್ತಮವಾಗಿರುತ್ತದೆ. ಭೂಮಿಯ ಅಭಿವೃದ್ಧಿ ಕೆಲಸಗಳನ್ನು ಮಾಡುವವರಿಗೆ ಸಾಕಷ್ಟು ಮುನ್ನಡೆ ಇರುತ್ತದೆ. ಸಾರ್ವಜನಿಕ ಕೆಲಸಗಳನ್ನು ಮಾಡುವಾಗ ಅಪವಾದ ಬರುವ ಸಾಧ್ಯತೆಗಳಿವೆ.


ತುಲಾ


ನಿಮ್ಮ ಹಿಂಬಾಲಕರು ನಿಮಗೆ ಶತ್ರುಗಳಾಗಬಹುದು. ನಿಮ್ಮ ಒರಟು

ಮಾತಿನಿಂದ ಕೆಲವು ಸಂಬಂಧಗಳು ಕಡಿಮೆಯಾಗಬಹುದು.ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮುನ್ನಡೆ ಇರುತ್ತದೆ. ಕುಟುಂಬದಲ್ಲಿನ ವ್ಯತ್ಯಾಸಗಳು ಸರಿಹೋಗುವ ಸಾಧ್ಯತೆ ಕಾಣುತ್ತಿದೆ. ಸರ್ಕಾರಿ ಕಚೇರಿಗಳ ಕೆಲಸಗಳು ಸುಗಮವಾಗಿ ಆಗುತ್ತವೆ.


ವೃಶ್ಚಿಕ


ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು. ಉದ್ಯೋಗಾಂಕ್ಷಿಗಳಿಗೆ ಹೊಸ ಉದ್ಯೋಗದ ಕಾರಣ ದೂರದೂರಿಗೆ ಹೋಗಬೇಕಾದ ಸಂದರ್ಭವಿದೆ. ಧನ ಆದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.


ಧನು


ನಿರೀಕ್ಷಿತ ಕಾರ್ಯಗಳಲ್ಲಿ ಪ್ರಗತಿಯನ್ನು ಕಂಡು ಸಂತಸಪಡುವಿರಿ. ವಿದೇಶದಲ್ಲಿ ವಿದ್ಯೆ ಮುಗಿಸಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭಸಮಾಚಾರವಿರುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸ್ತ್ರೀ ವರ್ಗದವರಿಗೆ ಬಹಳಷ್ಟು ಸಂತೋಷಕರ ವಾತಾವರಣವಿರುತ್ತದೆ.


ಮಕರ


ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಶತ್ರುಗಳು ಯಾರೆಂದು ಗೊತ್ತಾಗಿ ಅವರ ಮೇಲೆ ಕ್ರಮಕೈಗೊಳ್ಳುವ ಅವಕಾಶ ಒದಗಿಬರುತ್ತದೆ. ನಿಮ್ಮ ವ್ಯವಹಾರಗಳು ವಿಸ್ತರಣೆ ಆಗುವ ಲಕ್ಷಣಗಳಿವೆ. 


ಕುಂಭ


ಹಿಂದೆ ನೀವು ನಿಮ್ಮ ವ್ಯವಹಾರದಲ್ಲಿ ಕೈಗೊಂಡ ನಿರ್ಣಯಗಳು ಈಗ ಉತ್ತಮ ಫಲವನ್ನು ಕೊಡುತ್ತವೆ. ಆರ್ಥಿಕ ಸ್ಥಿತಿಯು ಸಮತೋಲನವಾಗಿರುತ್ತದೆ. ಹೊಸ ವಾಹನವನ್ನು ಕೊಳ್ಳುವ ಯೋಗವಿದೆ.


ಮೀನ


ಖಾದ್ಯತೈಲಗಳನ್ನು ಮಾರಾಟ ಮಾಡುವವರ ವ್ಯಾಪಾರ ಹೆಚ್ಚಾಗಿ ಲಾಭವೂ ಹೆಚ್ಚಾಗುತ್ತದೆ. ನಿಮ್ಮ ಒಡಹುಟ್ಟಿದವರಿಗೆ ವರ್ತಮಾನದ ವಿಷಯಗಳನ್ನು ಅವಲೋಕಿಸಿ ಸಹಾಯ ಮಾಡುವುದು ಒಳ್ಳೆಯದು. ಆರ್ಥಿಕ ಸ್ಥಿತಿಯು ಹೇಳಿಕೊಳ್ಳುವಂತೆ ಇರುವುದಿಲ್ಲ. ಸ್ವಂತ ಆರೋಗ್ಯದಲ್ಲಿ ವ್ಯತ್ಯಯವನ್ನು ಕಾಣಬಹುದು.
















Leave a Comment