ಬೆಳಗಾವಿ: "ಜನರು ಸರ್ಕಾರ ನೀಡಿರುವ ಕ್ರಮಗಳನ್ನು ಸರಿಯಾಗಿ ಪಾಲಿಸಬೇಕು. ಆಗ ಲಾಕ್ ಡೌನ್ ಮಾಡುವುದಿಲ್ಲ. ಒಂದು ವೇಳೆ ಜನರು ಕೊರೋನಾದ ನಿಯಮಗಳನ್ನುಪಾಲಿಸದೆ ಇದ್ದಲ್ಲಿ ಖಂಡಿತವಾಗಿಯೂ ಲಾಕ್ ಡೌನ್ ಮಾಡಲಾಗುತ್ತದೆ " ಎಂದು ಸಿಎಂ ಬಸವರಾಜ ಬೊಮ್ಮಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇವರು " ಕಳೆದ ಒಂದು ವಾರದಿಂದ ಕೊರೋನಾ ಮತ್ತು ಒಮಿಕ್ರಾನ್ ನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕಾಗಿ ಕೇರಳ ಹಾಗೂ ಮಹರಾಷ್ಟ್ರ ಗಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಲಾಗಿದೆ" ಎಂದರು.
"ಅದಷ್ಟು ರಾಜ್ಯದ ಜನತೆ ಕೊರೋನಾದ ನಿಯಮಗಳನ್ನು ಪಾಲಿಸಿಕೊಂಡು
ಹೋಗಬೇಕು. ಇಲ್ಲವಾದಲ್ಲಿ ಕೊರೋನಾ ಮತ್ತು ಒಮಿಕ್ರಾನ್ ನ ಸಂಖ್ಯೆ ಹೆಚ್ಚಾದರೆ ಲಾಕ್ ಡೌನ್ ಮಾಡುವುದು ಅನಿವಾರ್ಯ ದ ಸಂಗತಿ. ಹಾಗಾಗಿ ಜನರು ಕೊರೋನಾದ ನಿಯಮ ಪಾಲಿಸಿ, ಸರ್ಕಾರದ ಜೊತೆಗೆ ಸಹಕರಿಸಿ " ಎಂದು ರಾಜ್ಯದ ಜನತೆಯಲ್ಲಿ ಸಿಎಂ ಮನವಿ ಮಾಡಿದ್ದಾರೆ.















