Coastal Bulletin

ಇಂದಿನ ವಾರ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಏನು ಫಲ ಎಂದು ನೋಡೋಣ.

 ಮೇಷ

ನೂತನ ವಸ್ತ್ರ ಖರೀದಿಯ ಮಾಡಿ ಶುಭ ಸಮಾರಂಭಗಳಿಗೆ ಹೋಗಿ ಬರುವ ಸಾಧ್ಯತೆ ಇದೆ. ದೂರದ ಊರಿಂದ ಅನಿರೀಕ್ಷಿತ ಬಂಧುಗಳ ಆಗಮನ ಆಗಬಹುದು.

ವೃಷಭ 

ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲಕರ ವಾದ ವಾರ. ನಿರುದ್ಯೋಗಿಗಳ ಜೀವನದಲ್ಲಿ ಮಹತ್ವದ ತಿರುವು ಪಡೆದು ಉದ್ಯೋಗ ಸಿಗುವ ಸಾಧ್ಯತೆ ಇದೆ.

ಮಿಥುನ

ಸಂಗಾತಿಯ ಸಹಾಯದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಚರ್ಚೆ ಮನೆಯಲ್ಲಿ ನಡೆಯುತ್ತದೆ.

ಕಟಕ

ಕರಕುಶಲ ಕಾರ್ಮಿಕರಿಗೆ ಉತ್ತಮ ಮನ್ನಣೆ ದೊರೆಯುತ್ತದೆ. ಇವರುಗಳು ಸರ್ಕಾರದಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷೆ ಮಾಡಬಹುದು. ಕೆಲವು ಕೃಷಿಕರಿಗೆ ಬರಬೇಕಾಗಿದ್ದ ಸರ್ಕಾರದ ಸಹಾಯ ಧನಗಳು ಬರುತ್ತವೆ.

 ಸಿಂಹ

ಮಾನಸಿಕ ಸ್ಥೈರ್ಯ ದೃಢವಾಗಿ ನೀವು ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವಿರಿ. ಕೌಟುಂಬಿಕ ಬಿಕ್ಕಟ್ಟಿನ ಕುರಿತು ಹಿರಿಯರ ಮಧ್ಯಸ್ಥಿಕೆ ನಡೆಯು ತ್ತದೆ,ಇದು ಸಾಕಷ್ಟುಪರಿಣಾಮಕಾರಿ ಫಲಿತಾಂಶವನ್ನು ಕೊಡುತ್ತದೆ.

ಕನ್ಯಾ

ಭೂಮಿಯ ವ್ಯವಹಾರಗಳಿಗೆ ಸಂಬಂಧಿ ಸಿದಂತೆ ಶೀಘ್ರಗತಿಯಲ್ಲಿ ಕಾರ್ಯಚಟುವಟಿಕೆಗಳು ನಡೆದು ಲಾಭ ಬರುತ್ತದೆ. ತೈಲ ಸಂಸ್ಕರಣೆಯನ್ನು ಮಾಡುವ ವರಿಗೆ ಬೇಡಿಕೆ ಬರುತ್ತದೆ.

 ತುಲಾ

ಯೋಜಿಸಿದ್ದ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ಮಾಡುವ ಆಕಾಶವಿದೆ.

ವಸ್ತ್ರವಿನ್ಯಾಸಕಾರರಿಗೆ ಹೆಚ್ಚಿನ ಮಾರುಕಟ್ಟೆ ಒದಗುತ್ತದೆ. ಕೈಮಗ್ಗ ವಸ್ತುಗಳನ್ನು ತಯಾರಿಸುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ.

ವೃಶ್ಚಿಕ

ಕಟ್ಟಡ ನಿರ್ಮಾಣ ವಸ್ತುಗಳ ಮಾರಾಟಗಾರರಿಗೆ ವ್ಯಾಪಾರದಲ್ಲಿ ಮುನ್ನಡೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತಸವನ್ನು ಕಾಣಬಹುದು.ರಾಜಕೀಯ ನಾಯಕರುಗಳಿಗೆ ನಿಭಾಯಿಸಲಾಗದ ಜವಾಬ್ದಾರಿ ಒಂದು ಹೆಗಲೇರಿ ಕಸಿವಿಸಿಯಾಗುವುದು.

ಧನು 

ಉದ್ಯೋಗ ಕ್ಷೇತ್ರದಲ್ಲಿ ಬಹಳ ಲವಲವಿಕೆಯುಳ್ಳ ಕಾಲ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗಳು ಕೇಳಿ ಬರುತ್ತವೆ.ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಒತ್ತಡ ಕಂಡರು ಸ್ನೇಹಿತರ ಸಹಕಾರದಿಂದ ಅದು ಪರಿಹಾರವಾಗುತ್ತದೆ.

 ಮಕರ

ಚಿಲ್ಲರೆ ವ್ಯಾಪಾರಿಗಳಿಗೆ ಕಡಿಮೆ ವ್ಯಾಪಾರ ವಿದ್ದರೂ ಇರುವ ವ್ಯಾಪಾರವನ್ನು ನಡೆಸುವುದು ಉತ್ತಮ. ಹಣಕಾಸಿನ ವಿಷಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆಯನ್ನು ಕಾಣಬಹುದುಶೀತಭಾದೆಗಳು ನಿಮ್ಮನ್ನು ಕಾಡಬಹುದು.

 ಕುಂಭ 

ನಿಮ್ಮ ಮಾನಸಿಕ ಚಿಂತನೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ಒಳ್ಳೆಯದು. ಸಂಸಾರದ ಸೌಕರ್ಯಕ್ಕಾಗಿ ಹೊಸ ಪ್ರಯತ್ನಗಳನ್ನು ಮಾಡುವಿರಿ. ಹೊಸ ಆದಾಯಮೂಲದ ಅನ್ವೇಷಣೆ ಯನ್ನು ಮಾಡುವಿರಿ.

ಮೀನ

ಕೆಲಸಗಳಲ್ಲಿ ಭಿನ್ನಾಭಿಪ್ರಾಯ ಬಂದರು ಚಿಂತಿಸುವ ಅಗತ್ಯ ಇಲ್ಲ, ಹಾಗೆಂದು ಎಲ್ಲರ ವಿಷಯ ದಲ್ಲೂ ಮೂಗು ತೂರಿಸಲು ಹೋದಲ್ಲಿ ನಿಮಗೆ ಸಾಕಷ್ಟು ಹಿನ್ನಡೆಯಾಗುವ ಸಂದರ್ಭವಿದೆಮಾಡಿದ ಕೆಲಸಗಳಲ್ಲಿ ನಿಮಗೆ ತೃಪ್ತಿ ಇರುವುದಿಲ್ಲ.

Leave a Comment