Coastal Bulletin

ದೆಹಲಿ : ಇಂದು ಇಡೀ ಜಗತ್ತು ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ಯೋಗ ಭರವಸೆಯ ಆಶಾಕಿರಣವಾಗಿದೆ ಎಂದು ಪ್ರಧಾನಿ‌ ನರೇಂದ್ರ ಮೋದಿ ಹೇಳಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಎಲ್ಲಾ ಜನತೆಗೆ ಯೋಗ ದಿನದ ಶುಭಾಶಯ ಹೇಳುವ ಮೂಲಕ ತಮ್ಮ ಭಾಷಣ ಆರಂಭಿಸಿದರು.

ಕೊರೊನಾ ನಡುವೆಯೂ ಯೋಗ ದಿನ ಆಚರಣೆ ಮಾಡಲಾಗುತ್ತದೆ. ಆದರೂ ನಮ್ಮ ಉತ್ಸಾಹ ಕಡಿಮೆ ಆಗಿಲ್ಲ. ಯೋಗ ಮಾಡುವ ಮೂಲಕ ಎಲ್ಲರು ಸ್ವಾಸ್ಥ್ಯರಾಗಬೇಕು. ಕೊರೊನಾ ಸಮಯದಲ್ಲೂ ಜನರು ಯೋಗವನ್ನು ಮರೆತಿಲ್ಲ. ಯೋಗ ಆತ್ಮಬಲವನ್ನು ಹೆಚ್ಚಿಸುತ್ತದೆ. ಕೊರೊನಾ ನಡುವೆ ಯೋಗ ನಮ್ಮೆಲ್ಲರ ಆಶಾಕಿರಣವಾಗಿದೆ.

ದೈಹಿಕ ಸ್ವಾಸ್ಥ್ಯದ ಜತೆಗೆ ಮಾನಸಿಕ ಸಾಮರ್ಥ್ಯವು ಮುಖ ಯೋಗ ಮಾಡುವುದರಿಂದ ವಿಶ್ವದ ಯಾವುದೇ ನಕರಾತ ಶಕ್ತಿ ನಮ್ಮನ್ನು ಏನು ಮಾಡುವುದಿಲ್ಲ. ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಮಾಡಬಹುದು. ಯೋಗದಿಂದ ನಮ್ಮ ವಿಚಾರ ಶಕ್ತಿಯು ಹೆಚ್ಚಾಗುತ್ತದೆ. ಆರೋಗ್ಯಕ್ಕಾಗಿ ಯೋಗ ಎಂಬುದು ಮೂಲಮಂತ್ರ ಆಗಬೇಕು.


ಇಂದು ವೈದ್ಯಕೀಯ ವಿಜ್ಞಾನವು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆಗೆ ಒತ್ತು ನೀಡುತ್ತದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ. 'ಯೋಗ ಫಾರ್ ವೆಸ್'

ಎಂಬ ಧೇಯ್ಯ ವಾಕ್ಯದೊಂದಿಗೆ ಈ ಬಾರಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಜನರನ್ನು ಯೋಗ ಮಾಡಲು ಇನ್ನಷ್ಟು ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ದೇಶ, ಪ್ರದೇಶ ಮತ್ತು ಜನರು ಆರೋಗ್ಯವಾಗಿರಲು ನಾನು ಪ್ರಾರ್ಥಿಸುತ್ತೇನೆ.

ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಾ ಅನುಲೋಮ, ವಿಲೋಮ, ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮ ಮಾಡುತ್ತಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅಂತರರಾಷ್ಟ್ರೀಯ ತಜ್ಞರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈಗ ಎಂ-ಯೋಗ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ. ಆ್ಯಪ್‌ನಲ್ಲಿ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಹೊಂದಿರುತ್ತದೆ. ಇದರಿಂದ ಯೋಗದ ಮಹತ್ವ ಮತ್ತಷ್ಟು ಜನರಿಗೆ ತಿಳಿಯಲಿದೆ. 'ಒಂದು ವಿಶ್ವ, ಒಂದು ಆರೋಗ್ಯ' ಧೈಯವಾಕ್ಯದಲ್ಲಿ ಇದು ಸಹಾಯ ಮಾಡುತ್ತದೆ.

Leave a Comment