ಮೇಷ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರಿಗೆ ಉತ್ಪತ್ತಿ ಜಾಸ್ತಿಯಾಗುತ್ತದೆ. ಪಶು ಆಹಾರಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಮಾತಿನಲ್ಲಿ ಮೃದುತ್ವವಿದ್ದರೂ ಅದರ ಕಠಿಣತೆ ಜನರಿಗೆ ಅರ್ಥವಾಗಿ ದ್ವಂದ್ವಾರ್ಥಕ್ಕೆ ಕಾರಣವಾಗುತ್ತದೆ.
ವೃಷಭ
ಅವಿವಾಹಿತರಿಗೆ ಕಂಕಣ ಬಲದ ಯೋಗವಿದೆ. ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುವ ಯೋಗವಿದೆ. ಹಣದ ಒಳಹರಿವು ನಿಮ್ಮ ಅವಶ್ಯಕತೆಯನ್ನು ಪೂರೈಸುತ್ತದೆ. ದಿನಸಿ ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣಬಹುದು. ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ನಿಗಾವಹಿಸುವುದು ಬಹಳ ಉತ್ತಮ. ನಿಮ್ಮ ಹಿರಿಯರ ಕನಸಿನ ಯೋಜನೆಯೊಂದನ್ನು ಪ್ರಾರಂಭ ಮಾಡಲು ಆಲೋಚನೆಯ ಮಾಡುವಿರಿ.
ಮಿಥುನ
ಮನೆಯವರೊಂದಿಗೆ ತೀರ್ಥಯಾತ್ರೆ ಹೋಗಲು ಚಿಂತನೆ ನಡೆಸುವಿರಿ. ರಾಜಕಾರಣಿಗಳಿಗೆ ಹೆಚ್ಚು ಸಮಯ ತಮ್ಮ ಕ್ಷೇತ್ರದಲ್ಲಿ ಕಳೆಯಬೇಕಾದ ಅನಿವಾರ್ಯವಿರುತ್ತದೆ. ಹಣದ ಒಳಹರಿವು ನಿರೀಕ್ಷೆಯಷ್ಟು ಇರುತ್ತದೆ. ಒಡಹುಟ್ಟಿದವರಿಂದ ನಿಮಗೆ ಸಹಕಾರ ದೊರೆಯುತ್ತದೆ. ವಾಣಿಜ್ಯ ಅಥವಾ ಆರ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಅದರ ವಿವರ ತಿಳಿದು ಮಾಡಿರಿ. ರಾಸಾಯನಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ.
ಕಟಕ
ಈ ವಾರ ಸ್ವಲ್ಪ ಆನಂದದಾಯಕವಾಗಿರುತ್ತದೆ. ಹಣದ ಒಳಹರಿವು ವೆಚ್ಚಕ್ಕೆ ಸರಿ ಹೋಗುವಷ್ಟು ಇದ್ದೇ ಇರುತ್ತದೆ. ಹೈನುಗಾರಿಕೆಯವರಿಗೆ ಹಾಲಿನ ಇಳುವರಿಯಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಕೆಲವರಿಗೆ ಉದ್ಯೋಗದಲ್ಲಿ ಹೆಚ್ಚು ಓಡಾಟವಿರುತ್ತದೆ. ಆರ್ಥಿಕ ಸ್ಥಿರತೆಯ ಬಗ್ಗೆ ಗಮನ ಕೊಡಿರಿ. ದೀರ್ಘಕಾಲೀನ ಹೂಡಿಕೆಯ ಬಗ್ಗೆ ತಜ್ಞರೊಡನೆ ಅಭಿಪ್ರಾಯ ಪಡೆದು ಮುನ್ನಡೆಯುವುದು ಉತ್ತಮ.
ಸಿಂಹ
ಮೇಧಾವಿ ಜನರ ಸಂಪರ್ಕದಿಂದ ಕೆಲಸ ಕಾರ್ಯಗಳು ಸುಲಭವಾಗುತ್ತದೆ. ಯಂತ್ರಗಳ ಬಿಡಿ ಭಾಗಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯವಹಾರ ಹೆಚ್ಚುತ್ತದೆ. ಉದ್ಯೋಗದಲ್ಲಿರುವ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನ ಪಡುವಿರಿ. ವ್ಯಾಪಾರ-ವ್ಯವಹಾರದ ಆದಾಯದಲ್ಲಿ ಸ್ವಲ್ಪಮಟ್ಟಿನ ಏರಿಕೆಯನ್ನು ಕಾಣಬಹುದು. ಕಟ್ಟಡ ನಿರ್ಮಾಣಕಾರರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ.
ಕನ್ಯಾ
ಏನನ್ನಾದರೂ ಸಾಧಿಸಬೇಕೆನ್ನುವ ನಿಮಗೆ ಆತ್ಮಸ್ಥೈರ್ಯದ ಕೊರತೆ ಕಾಣುತ್ತದೆ. ಹಣದ ಒಳ ಹರಿವು ಮಂದಗತಿಯಲ್ಲಿ ಇರುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ರಾಜಕೀಯ ವ್ಯಕ್ತಿಗಳ ಸಂಪರ್ಕ ದೊರೆಯುವ ಸಾಧ್ಯತೆ ಇದೆ. ನೀವು ರೂಪಿಸಿದ ಷಡ್ಯಂತ್ರವೊಂದು ನಿಮಗೆ ತಿರುಗುಬಾಣವಾಗುವ ಸಾಧ್ಯತೆಗಳಿವೆ. ಗರ್ಭಿಣಿಯರು ಹೆಚ್ಚು ಎಚ್ಚರದಿಂದಿರುವುದು ಒಳ್ಳೆಯದು. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುನ್ನಡೆ ಇರುತ್ತದೆ.
ತುಲಾ
ವೃತ್ತಿಯಲ್ಲಿ ವರ್ಗಾವಣೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಹಿನ್ನಡೆಯಾಗುತ್ತದೆ. ಕೇಟರಿಂಗ್ ಸೇವೆಗಳನ್ನು ಮಾಡುವವರ ವ್ಯವಹಾರ ವಿಸ್ತರಣೆಯಾಗಿ ಆದಾಯ ಹೆಚ್ಚುತ್ತದೆ. ಷೇರು ವ್ಯವಹಾರಗಳಲ್ಲಿ
ಹಣ ತೊಡಗಿಸುವ ಮುನ್ನ ಆಲೋಚನೆ ಮಾಡಿರಿ. ಜಮೀನು ಮಾರಾಟ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಸಂಸಾರದಲ್ಲಿ ಹೆಚ್ಚಿನ ಸಂಘರ್ಷಗಳನ್ನು ಕಾಣಬಹುದು. ಹಣದ ಒಳಹರಿವು ನಿಧಾನಗತಿಯಲ್ಲಿ ಇರುತ್ತದೆ.
ವೃಶ್ಚಿಕ
ನಿಮ್ಮ ಕೆಲವೊಂದು ವೈಯಕ್ತಿಕ ಆಸೆ-ಆಕಾಂಕ್ಷೆಗಳು ಪೂರ್ಣಗೊಳ್ಳಬಹುದು. ನಿವೃತ್ತ ಉಪಾಧ್ಯಾಯರಿಗೆ ಮನೆಯ ಪಾಠಮಾಡುವ ಅವಕಾಶಗಳು ಒದಗಿ ಬರುತ್ತವೆ. ಹಾಲಿನ ಪದಾರ್ಥಗಳ ಉತ್ಪಾದಕರಿಗೆ ಬೇಡಿಕೆ ಹೆಚ್ಚುತ್ತದೆ. ಉನ್ನತ ಹುದ್ದೆಯಿಂದ ಮನಸ್ಸಿಗೆ ಖುಷಿಗೆ ಇದ್ದರೂ ಕೆಲಸದ ಒತ್ತಡ ಬೇಸರವೆನಿಸುತ್ತದೆ. ಗುತ್ತಿಗೆ ಕೆಲಸಗಾರರಿಗೆ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ.
ಧನು
ಬಹಳಷ್ಟು ತಾಳ್ಮೆಯಿಂದ ಕೆಲಸಗಳನ್ನು ನಿರ್ವಹಿಸಬೇಕಾದ ಅನಿವಾರ್ಯವಿದೆ. ಕಾನೂನು ಹೋರಾಟದಲ್ಲಿ ಯಶಸ್ಸಿನತ್ತ ವಾಲುವಿರಿ. ಆಪ್ತ ಸ್ನೇಹಿತರ ಸಹಾಯದಿಂದ ಗೃಹ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳುವಿರಿ. ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ಮಾಡಿದಲ್ಲಿ ಉದ್ಯೋಗದ ಕೆಲವು ಸಮಸ್ಯೆಗಳು ಪರಿಹಾರವಾಗುವುದು. ದಂತ ವೈದ್ಯರಿಗೆ ಹೆಚ್ಚು ಸಂಪಾದನೆಯಾಗುವ ಸಂಭವವಿದೆ.
ಮಕರ
ಕನಸುಗಳು ಕೈಗೂಡುವ ದಿನ ಹತ್ತಿರ ಇದೆ. ನಿಮ್ಮ ಪ್ರಾಮಾಣಿಕತೆಗೆ ಅತಿಯಾದ ಗೌರವ ದೊರೆತು ಸಂಭ್ರಮಿಸುವಿರಿ. ಗೃಹೋಪಕರಣ ಮತ್ತು ಪೀಠೋಪಕರಣಗಳ ಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗಿ ಲಾಭ ಹೆಚ್ಚುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇದ್ದರೂ ಹಣದ ನಿರ್ವಹಣೆಯನ್ನು ಉತ್ತಮವಾಗಿ ಮಾಡುವಿರಿ. ಉದ್ಯೋಗದಲ್ಲಿ ಬದಲಾವಣೆಗೆ ಪೂರಕ ಸನ್ನಿವೇಶ ಕಂಡುಬರುತ್ತಿದೆ.
ಕುಂಭ
ಯಾವುದೇ ವಾದ-ವಿವಾದ ಆದರೂ ಕಾರ್ಯಸಾಧನೆಗೆ ಅಡ್ಡಿಯಾಗುವುದಿಲ್ಲ. ಸೃಜನಶೀಲ ಬರಹಗಾರರು ತಮ್ಮ ಬರವಣಿಗೆಯಿಂದ ಖ್ಯಾತಿ ಹಾಗೂ ಧನ ಸಂಪಾದನೆ ಮಾಡಿಕೊಳ್ಳುವರು. ಸ್ವಲ್ಪ ಧಾರ್ಮಿಕ ಶ್ರದ್ಧೆ ಹಿರಿಯರಲ್ಲಿ ಹೆಚ್ಚಾಗುವುದು. ಅದಕ್ಕೆ ತಕ್ಕಂತೆ ಸಮಾಜದ ಸಹಕಾರ ದೊರೆಯುತ್ತದೆ. ಸ್ವಲ್ಪ ವ್ಯತ್ಯಾಸವಾಗಿದ್ದ ಶಾರೀರಿಕ ಸಮಸ್ಯೆ ಈಗ ಸರಿಯಾಗುವುದು. ಸಹೋದ್ಯೋಗಿಗಳ ನಡವಳಿಕೆ ನಿಮಗೆ ಕೆಲಸದಲ್ಲಿ ಹೆಚ್ಚಿನ ಸ್ಫೂರ್ತಿಯನ್ನು ಕೊಡುವುದು.
ಮೀನ
ಸಹೋದ್ಯೋಗಿಯೊಬ್ಬರು ನಿಮ್ಮ ಕೆಲಸಕಾರ್ಯಗಳಿಗೆ ಹೆಚ್ಚಿನ ಸಹಕಾರ ಕೊಡುವರು. ಶ್ರಮಜೀವಿಗಳಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತವಾಗಿ ದೊರೆತು ತೃಪ್ತಿಪಡುವರು. ಕೆಲವರಿಗೆ ಕಚೇರಿ ಕೆಲಸದ ಮೇಲೆ ಆಕಸ್ಮಿಕ ಪ್ರಯಾಣ ಬರಬಹುದು. ಕಾನೂನು ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಇರುತ್ತದೆ. ನ್ಯಾಯವಾದಿಗಳಿಗೆ ಹೆಚ್ಚಿನ ದಾವೆಗಳು ದೊರೆತು ಸಂಪಾದನೆ ಹೆಚ್ಚುತ್ತದೆ.















