ಮೇಷ ಅಧಿಕಾರ ಅಥವಾ ಉದ್ಯೋಗದಲ್ಲಿ ತ್ವರಿತ ಬದಲಾವಣೆಯನ್ನು ನಿರೀಕ್ಷಿಸಬಹುದು. ವಿದೇಶದಲ್ಲಿ ಇರುವ ಬಂಧುಗಳು ನಿಮ್ಮ ಸಹಾಯಕ್ಕೆ ಬರುವ ಸಾಧ್ಯತೆಯಿದೆ. ತಾಮ್ರದ ಮೂರ್ತಿಗಳನ್ನು ಅಥವಾ ಪೂಜಾ ಪರಿಕರ ವಸ್ತುಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಅಗ್ನಿಯೊಡನೆ ದಿನವಿಡೀ ಕೆಲಸ ಮಾಡುವವರು ಸ್ವಲ್ಪ ಎಚ್ಚರ ವಹಿಸಿರಿ.
ವೃಷಭ
ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಂದರ್ಭವಿದೆ. ಕುಟುಂಬದ ಜಟಿಲ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಿರಿ. ಬ್ಯಾಂಕಿಂಗ್ ಅಥವಾ ಹಣಕಾಸು ಸಂಸ್ಥೆಗಳಿಗೆ ಆದಾಯ ಹೆಚ್ಚುತ್ತದೆ.
ಮಿಥುನ
ಗುತ್ತಿಗೆ ವ್ಯವಹಾರ ಮಾಡುತ್ತಿರುವವರಿಗೆ ಅಭಿವೃದ್ಧಿ ಇದೆ. ಕೆಲವರಿಗೆ ಸರ್ಕಾರಿ ಗುತ್ತಿಗೆಗಳು ಸಹ ಸಿಗುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಸಾಕಷ್ಟು ಏಳಿಗೆ ಇರುತ್ತದೆ. ಬರವಣಿಗೆಯಲ್ಲಿ ನಿರತರಾದವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.
ಕಟಕ
ಉದ್ಯಮವನ್ನು ವಿಸ್ತರಿಸುವ ಆಸೆಯು ಈಗ ಸಾಕಾರಗೊಳ್ಳಬಹುದು. ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಸರಿಯಾಗಿ ಮಾಡಿಕೊಳ್ಳಿ. ಆರ್ಥಿಕ ಆದಾಯ ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ.
ಸಿಂಹ
ಮಕ್ಕಳ ವಿಚಾರದಲ್ಲಿ ಶುಭ ವಾರ್ತೆಗಳನ್ನು ಕೇಳಬಹುದು. ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ಹಣ ಅಥವಾ ಸಹಾಯಧನ ಬರುತ್ತದೆ. ನಿಮ್ಮ ನಡವಳಿಕೆಯಿಂದ ಮಕ್ಕಳ ಮೇಲೆ ಪ್ರಭಾವವನ್ನು ಹೆಚ್ಚಿಸಿಕೊಳ್ಳುವಿರಿ. ಚರ್ಮವ್ಯಾಧಿಗಳು ಸ್ವಲ್ಪ ನಿಮ್ಮನ್ನು ಬಾಧಿಸಬಹುದು.
ಕನ್ಯಾ
ಕೃಷಿಕರು ಬೆಳೆದ ಫಸಲಿಗೆ ಉತ್ತಮ ಬೆಲೆ ದೊರೆಯುತ್ತದೆ. ಹೀಗಾಗಿ ಕೃಷಿ ಕೆಲಸಗಳಲ್ಲಿ ಹೆಚ್ಚಿನ ಉತ್ಸಾಹ ಮೂಡುತ್ತದೆ. ಸಂತಾನ ಆಕಾಂಕ್ಷಿಗಳಿಗೆ ಶುಭಸಮಾಚಾರ ದೊರೆಯುವ ಸಾಧ್ಯತೆ ಇದೆ. ಹಮ್ಮಿನ ಮಾತಿನಿಂದ ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯನ್ನು ಮಾಡಿಕೊಳ್ಳುವಿರಿ.
ತುಲಾ
ಮನೆ
ಅಥವಾ ನಿವೇಶನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯವಿರುತ್ತದೆ. ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ಮುಜುಗರ ಉಂಟಾಗಬಹುದು. ಅಪರೂಪದ ವಸ್ತುಗಳನ್ನು ಸಂಗ್ರಹ ಮಾಡುವ ಆಸಕ್ತಿ ಹೆಚ್ಚುತ್ತದೆ.
ವೃಶ್ಚಿಕ
ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿರುವವರಿಗೆ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ವಿದೇಶಿ ಉತ್ಪನ್ನಗಳನ್ನು ತರಿಸಿ ಮಾರುವವರಿಗೆ ಉತ್ತಮ ಲಾಭವಿರುತ್ತದೆ. ಆರ್ಥಿಕ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಕಸೂತಿ ವಸ್ತ್ರಗಳನ್ನು ತಯಾರಿಸುವವರ ವ್ಯವಹಾರ ಹೆಚ್ಚು ವಿಸ್ತರಣೆಯಾಗುತ್ತವೆ.
ಧನು
ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಈಗ ಸ್ವಲ್ಪ ಕಾರ್ಯಕ್ರಮಗಳು ಒದಗಿಬರುತ್ತವೆ. ವಿದ್ಯಾರ್ಥಿಗಳಿಗೆ ಬೇಕಾದ ಒಳ್ಳೆಯ ಅನುಕೂಲತೆಗಳು ಸಿಗುತ್ತವೆ. ವ್ಯವಹಾರದಲ್ಲಿ ಪ್ರಗತಿಯನ್ನು ನಿರೀಕ್ಷಿಸಬಹುದು.
ಮಕರ
ಸಣ್ಣ ಕೈಗಾರಿಕೆಗಳ ಉದ್ಯಮಿಗಳಿಗೆ ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನ ಬರುತ್ತದೆ. ಉದ್ದಿಮೆಯ ಬಗ್ಗೆ ಸಾಕಷ್ಟು ಆಳವಾದ ಚಿಂತನೆ ನಡೆಸಿ ಮುಂದಡಿಯಿಡುವಿರಿ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕಿಂತ ಹೆಚ್ಚಿರುತ್ತದೆ
ಕುಂಭ
ಧನಾದಾಯ ಉತ್ತಮವಾಗಿರುತ್ತದೆ. ಸ್ವಯಂ ಉದ್ಯೋಗ ಮಾಡುವವರಿಗೆ ಸಂಪಾದನೆ ಹೆಚ್ಚುತ್ತದೆ. ಹೊಸ ನಿವೇಶನ ಅಥವಾ ಮನೆ ಕೊಳ್ಳುವ ಯೋಗವಿದೆ. ಹಿರಿಯರು ಸನ್ಮಾರ್ಗದಲ್ಲಿ ನಡೆಯುವುದರಿಂದ ಸಂಸಾರ ಮತ್ತು ಸಮಾಜದಲ್ಲಿ ಗೌರವವಿರುತ್ತದೆ. ಸ್ವಲ್ಪ ಮಟ್ಟಿನ ಆರ್ಥಿಕ ಸ್ಥಿರತೆಯನ್ನು ಈಗ ಕಾಣಬಹುದು
ಮೀನ
ಉದ್ಯೋಗದಲ್ಲಿರುವವರಿಗೆ ವರ್ಗಾವಣೆಯ ಸಾಧ್ಯತೆ ದಟ್ಟವಾಗಿದೆ. ಆರ್ಥಿಕ ಸಂಪನ್ಮೂಲ ಸಾಮಾನ್ಯವಾಗಿರುತ್ತದೆ. ಔದ್ಯೋಗಿಕ ವಿಷಯಗಳಲ್ಲಿ ಬೆಳವಣಿಗೆಯನ್ನು ಕಾಣಬಹುದು. ವೈದ್ಯಕೀಯ ವೃತ್ತಿಯಲ್ಲಿರುವವರು ಉತ್ತಮ ಧನ ಆದಾಯ ನಿರೀಕ್ಷಿಸಬಹುದು.














