Coastal Bulletin

ಮೇಷ‌: ನಿಂತುಹೋಗಿದ್ದ ಕೆಲವು ಅಭಿವೃದ್ಧಿಯ ಕೆಲಸದ ಕಡೆ ಗಮನಹರಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ತಿಕ್ಕಾಟ ಬಂದರೂ ಮಾತಿನಲ್ಲೇ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ. ಪ್ರವಾಸೋದ್ಯಮ ಸಂಸ್ಥೆಯನ್ನು ನಡೆಸುವವರಿಗೆ ಉತ್ತಮವಾದ ವ್ಯವಹಾರವಿರುತ್ತದೆ. ತಾಂತ್ರಿಕ ತಜ್ಞರಿಗೆ ಉತ್ತಮ ಕೆಲಸ ಸಿಗುವ ಯೋಗವಿದೆ. ನಿಮ್ಮ ಸಂಗಾತಿಗೆ ಹೊಸ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ.

ವೃಷಭ : ಮನೆಯ ಆಗುಹೋಗುಗಳ ಬಗ್ಗೆ ಹಿರಿಯರೊಡನೆ ಚರ್ಚೆ ಮಾಡುವಿರಿ. ಅಭಿಪ್ರಾಯಗಳ ವಿನಿಮಯದಿಂದ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದು. ಹಣದ ಹರಿವು ಸಾಕಷ್ಟಿರುತ್ತದೆ. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರು ಸ್ವಲ್ಪ ಹಿನ್ನಡೆ ಅನುಭವಿಸಬಹುದು. ಒಡಹುಟ್ಟಿದವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಕೃಷಿಯಿಂದ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳ ಜೊತೆಗೆ ಸೂಕ್ತ ಮಾರ್ಗದರ್ಶನವೂ ಸಿಗುತ್ತದೆ.

ಮಿಥುನ : ನಿರೀಕ್ಷಿಸಿದ ಕಾರ್ಯಗಳು ನಿಧಾನವಾಗಿಯಾದರೂ ಆಗಿ ಮನಸ್ಸಿಗೆ ಹಗುರವೆನಿಸುವುದು. ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಇದುವರೆಗೆ ನಡೆಸುತ್ತಿದ್ದ ಐಶಾರಾಮಿ ಜೀವನದ ಬಗ್ಗೆ ಜಿಗುಪ್ಸೆ ಹುಟ್ಟಬಹುದು. ಹೋಟೆಲ್ ಉದ್ಯಮದವರಿಗೆ ಸ್ವಲ್ಪಮಟ್ಟಿಗೆ ಲಾಭ ಹೆಚ್ಚಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಹೆಚ್ಚು ಶ್ರಮವಹಿಸಬೇಕು.

ಕಟಕ : ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು, ಆಗ ಹಿಂಜರಿಕೆ ಬೇಡ. ನೀವು ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಯಾವುದೇ ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ರಾಜಕೀಯದಲ್ಲಿ ಆಸಕ್ತಿ ಇರುವವರು ಹೆಚ್ಚು ಚುರುಕಾಗಿ ಜನಗಳ ಮಧ್ಯೆ ಓಡಾಡುವುದು ಅತಿ ಅಗತ್ಯ. 

ಸಿಂಹ : ಅತಿಯಾದ ಆತ್ಮಾಭಿಮಾನ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಂತೆ ಇರುವುದಿಲ್ಲ.  ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಹಿನ್ನಡೆ ಕಾಣಬಹುದು. ಕೈಕಾಲು ಸೆಳೆತ ಇರುವವರು ಸ್ವಲ್ಪ ಎಚ್ಚರವಹಿಸಿರಿ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಕಾಣಬಹುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು.

ಕನ್ಯಾ : ತಿಳಿವಳಿಕೆ ಹೊಂದಿದ ನೀವು ಯಾರದೋ ವಶೀಲಿಗೆ ಮಣಿದು ಹಣಕ್ಕಾಗಿ ಅಪರಾಧ ಕೆಲಸವನ್ನು ಮಾಡಲು ಮುಂದಾಗುವಿರಿ.  ಧನ ಸಂಪಾದನೆಗಾಗಿ ಬದಲಿ ಮಾರ್ಗಗಳನ್ನು ಹುಡುಕುವಿರಿ. ದೇಹಾರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕಾದ ಅಗತ್ಯವಿದೆ. ಕೃಷಿಕರಿಗೆ ಬೇಕಾದ ಕೃಷಿ ಸಲಕರಣೆಗಳು ಸಕಾಲಕ್ಕೆ ದೊರೆಯುತ್ತದೆ. ಪಾರಂಪರಿಕ ಬೀಜೋತ್ಪಾದನೆಗೆ ಹೆಚ್ಚು ಬೆಂಬಲ ದೊರೆತು, ಈ ರೀತಿ ಬೀಜೋತ್ಪಾದನೆ ಮಾಡುವವರಿಗೆ ಲಾಭವಿರುತ್ತದೆ. 

ತುಲಾ: ನಿಮ್ಮ ನಿಲುವುಗಳಿಂದ ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗುವುದು. ಹಿರಿಯ ಅಧಿಕಾರಿಗಳಿಗೆ ಅವರ

ಸಹೋದ್ಯೋಗಿಗಳಿಂದ ಸರಿಯಾದ ಸಹಕಾರ ಸಿಗುವುದಿಲ್ಲ. ವ್ಯವಹಾರದಲ್ಲಿ ಮಂದಗತಿಯ ನಡೆ ಕಂಡರೂ ನಷ್ಟವಿರುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ತಮ್ಮ ಪಕ್ಷವನ್ನು ಬಲಗೊಳಿಸಬೇಕಾದ ಅನಿವಾರ್ಯವಿರುತ್ತದೆ. 

ವೃಶ್ಚಿಕ : ಸಂಶೋಧಕರಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಅವಕಾಶ ದೊರೆಯುತ್ತದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯಗಳ ಜೊತೆ ಆದಾಯವು ಬರುತ್ತದೆ. ಕೃಷಿಕರಿಗೆ ಆದಾಯ ಹೆಚ್ಚುತ್ತದೆ. ಅವರು ಬೆಳೆದ ಕೃಷಿ ವಸ್ತುಗಳಿಗೆ ಹೆಚ್ಚು ಬೆಲೆ ಸಿಗುತ್ತದೆ. ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆತು ಹೆಚ್ಚು ಯಶಸ್ಸು ಪಡೆಯಬಹುದು. 

ಧನು : ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲವನ್ನು ನೀವು ಪಡೆದೇ ಪಡೆಯುವಿರಿ. ನಿಮ್ಮ ಗುರಿ ತಲುಪಲು ಶ್ರಮಪಡಲೇಬೇಕು. ಉತ್ತಮ ಉದ್ಯೋಗ ಅವಕಾಶಗಳು ನಿಮ್ಮನ್ನು ಅರಸಿ ಬರುತ್ತದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಿರಿ. ಮಕ್ಕಳ ವಿಷಯದಲ್ಲಿ ಸಂಯಮದಿಂದ ಇರುವುದು ಬಹಳ ಒಳ್ಳೆಯದು. ನಿಮ್ಮದೇ ವಿಧಾನದಿಂದ ಶತ್ರುಗಳನ್ನು ಮಟ್ಟಹಾಕುವಿರಿ. ಹೊಸ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಸರಿಯಾಗಿ ವಿಚಾರಣೆ ಮಾಡಿರಿ

ಮಕರ : ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಪರಿಸ್ಥಿತಿ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮಾತಿನಿಂದ ಕಾರ್ಯ ಸಾಧನೆ ಮಾಡಿ ಮೆಚ್ಚುಗೆ  ಪಡೆಯುವಿರಿ. ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಜಾಗ್ರತೆ  ವಹಿಸಿರಿ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮತ್ತು ರಿಪೇರಿ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ.

ಕುಂಭ :ಏರುಪೇರಾಗಿದ್ದ ವ್ಯಾಪಾರ ವ್ಯವಹಾರಗಳನ್ನು ಸುಸ್ಥಿತಿಗೆ ತಂದುಕೊಳ್ಳಬಹುದು. ಸಂಘ ಸಂಸ್ಥೆಗಳ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಯುವಕರು ತಮ್ಮ ಏಕಮುಖ ನಿರ್ಧಾರಗಳಿಂದ ವೃತ್ತಿಯಲ್ಲಿ ಇಕ್ಕಟ್ಟಿಗೆ ಸಿಲುಕುವರು. ರಂಗಕರ್ಮಿಗಳಿಗೆ ಉತ್ತಮ ಹೆಸರು ಮಾಡುವ ಹೊಸ ಅವಕಾಶಗಳು ದೊರೆಯುತ್ತವೆ. 

ಮೀನ : ಅತ್ಯುತ್ತಮವಾದ ಜೀವನಶೈಲಿಯನ್ನು ಬಯಸುವವರು ಜೀವನೋಪಾಯಕ್ಕಾಗಿ ಬದಲಿ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿದಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಅವಕಾಶ ತಪ್ಪುತ್ತದೆ. ರೇಷ್ಮೆ ನೂಲು ತೆಗೆಯುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. 

Leave a Comment