ಮೇಷ : ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಅವರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಕರಿದ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಶಿಸ್ತನ್ನು ಕಾಯ್ದುಕೊಳ್ಳುವುದು ಉತ್ತಮ. ಕೃಷಿ ಸಂಬಂಧಿತ ಉಪಕರಣಗಳನ್ನು ತಯಾರಿಸುವವರಿಗೆ ವ್ಯವಹಾರ ಹೆಚ್ಚುತ್ತದೆ. ಸಂಗಾತಿಯ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ.
ವೃಷಭ : ಮನೆಯಲ್ಲಿ ಶಾಂತಿ ಕಾಪಾಡಿಕೊಳ್ಳುವುದು ಅನಿವಾರ್ಯವಾಗಬಹುದು. ವ್ಯಾಪಾರ ವ್ಯವಹಾರ ಮಾಡುವವರಿಗೆ ಅತಿಯಾದ ಲಾಭವಿರುವುದಿಲ್ಲ. ಹಾಗೆಂದು ನಷ್ಟವೂ ಇಲ್ಲ. ಕೃಷಿಯಿಂದ ಆದಾಯವಿರುತ್ತದೆ. ಹೈನುಗಾರಿಕೆ ಮಾಡುವವರು ಬಂದಿದ್ದ ಗಂಡಾಂತರದಿಂದ ಪಾರಾಗುವರು. ಕೆಲವರಿಗೆ ಕಚೇರಿಯಲ್ಲಿ ತರಬೇತಿ ಸಿಗುವ ಯೋಗವಿದೆ. ನೀವು ಕೈಗೆತ್ತಿಕೊಂಡ ಕೆಲಸಗಳು ಖರ್ಚಿಗೆ ಕಾರಣವಾದರೂ ಮುಂದೆ ಪ್ರಯೋಜನಕ್ಕೆ ಬರುತ್ತವೆ.
ಮಿಥುನ : ದಿನನಿತ್ಯದ ಕೆಲಸಗಳಲ್ಲಿ ಸಿಬ್ಬಂದಿಯಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ಈ ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಿರಿ. ಖರ್ಚಿಗೆ ಕಡಿವಾಣ ಹಾಕಬೇಕಾದ ಪರಿಸ್ಥಿತಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಶ್ರಮವಹಿಸಬೇಕು. ಸಮಾನಮನಸ್ಕರಲ್ಲಿ ಹಣಕಾಸಿನ ವಿಚಾರದಿಂದ ಸಂಬಂಧ ವ್ಯತ್ಯಾಸಗೊಳ್ಳಬಹುದು. ನಿಮ್ಮ ಮಕ್ಕಳ ಆಸೆಗಾಗಿ ಹೆಚ್ಚು ಹಣ ಖರ್ಚಾಗುತ್ತದೆ.
ಕಟಕ : ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಸಹೋದರಿಯರಿಂದ ನಿಮ್ಮ ಕೆಲಸಗಳಿಗೆ ಪೂರಕ ಸಹಾಯ ದೊರೆಯುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಬಂಧುಗಳ ಮನೆಯ ಸತ್ಕಾರಕೂಟದಲ್ಲಿ ಭಾಗವಹಿಸುವ ಅವಕಾಶಗಳಿವೆ. ಎಲೆಕ್ಟ್ರಾನಿಕ್ಸ್ ಉದ್ದಿಮೆದಾರರಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಆಸ್ತಿಯ ವಿಚಾರದಲ್ಲಿ ಹೊಸ ರೀತಿಯ ತಗಾದೆಗಳು ಬರಬಹುದು. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಯಶಸ್ಸಿರುತ್ತದೆ.
ಸಿಂಹ : ಸ್ನೇಹಿತರ ಅನುಕೂಲದಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಯಶಸ್ಸು ದೊರೆಯುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಸಮೀಪವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ. ಕಫದ ಸಮಸ್ಯೆಯನ್ನು ನಿರ್ಲಕ್ಷ್ಯಮಾಡಬೇಡಿರಿ. ಉದ್ದಿಮೆದಾರರು ಶಾಂತಚಿತ್ತದಿಂದ ಕಾರ್ಮಿಕರ ಸಮಸ್ಯೆಯನ್ನು ಆಲಿಸುವುದು ಉತ್ತಮ. ಕೆಲಸದ ಒತ್ತಡ ಹೆಚ್ಚಿಗೆ ಇರುವಾಗ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿರಿ.
ಕನ್ಯಾ : ಜಟಿಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಮಾರ್ಗದರ್ಶಕರನ್ನು ಹುಡುಕುವಿರಿ. ನಿಮ್ಮವರ ನಡುವೆ ಉಂಟಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಕುಳಿತು ಬಗೆಹರಿಸಿಕೊಳ್ಳಿರಿ. ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ದೊರೆಯುವ ಸಂದರ್ಭವಿದೆ. ಆದಾಯವು ನಿರೀಕ್ಷೆಯ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಯಾರನ್ನಾದರೂ ನಂಬಿ ಹಣ ಹೂಡುವ ಮುಂಚೆ ಅವರ ಬಗ್ಗೆ ಸರಿಯಾಗಿ ತಿಳಿಯಿರಿ.
ತುಲಾ : ನಿಮ್ಮ ಅತಿಯಾದ ಒರಟುತನ ನಿಮ್ಮನ್ನು ಜನಸಮೂಹದಲ್ಲಿ ಇಕ್ಕಟ್ಟಿಗೆ ಸಿಲುಕಿಸಬಹುದು. ಉಸಿರಾಟದಲ್ಲಿ ತೊಂದರೆ ಕಂಡುಬಂದಲ್ಲಿ ಎಚ್ಚರವಹಿಸಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮವಹಿಸಬೇಕಾದ ಅಗತ್ಯವಿದೆ. ದಿನಸಿ ಸಗಟು ದಾಸ್ತಾನುದಾರರಿಗೆ
ಅಗತ್ಯವೆನಿಸುವಷ್ಟು ದಾಸ್ತಾನು ದೊರೆಯುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳು ಹುಟ್ಟಿಕೊಳ್ಳುವರು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ನಿಮ್ಮ ಕೆಲಸ ಸರಾಗವಾಗಿ ಆಗುತ್ತದೆ. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗುತ್ತದೆ.
ವೃಶ್ಚಿಕ : ಆಧ್ಯಾತ್ಮಿಕ ವಿಚಾರಗಳತ್ತ ಮನಸ್ಸು ಹರಿಯತೊಡಗುತ್ತದೆ. ಆತ್ಮೀಯರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಂಡು ಸಂತೋಷಪಡುವಿರಿ. ಪ್ರಯಾಣದಲ್ಲಿ ನಷ್ಟ ಸಂಭವಿಸುವ ಸಾಧ್ಯತೆಯಿದೆ, ಎಚ್ಚರವಹಿಸಿರಿ. ಕಟ್ಟಡ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ನಿರೀಕ್ಷಿತ ಆದಾಯ ಬಂದು ಸೇರುತ್ತದೆ. ಮನೆಯ ನಿರ್ಮಾಣದ ಬಗ್ಗೆ ಹಿತೈಷಿಗಳಿಂದ ಸಲಹೆ ದೊರೆಯುತ್ತದೆ.
ಧನು : ಯಾರಿಗೂ ಯಾವುದೇ ರೀತಿಯ ಭರವಸೆಗಳನ್ನು ನೀಡಬೇಡಿರಿ. ವಾಹನ ಖರೀದಿಯು ನಿಮ್ಮಿಷ್ಟದಂತೆ ನಡೆಯುತ್ತದೆ. ಉದ್ಯೋಗಕ್ಕೆ ಅನುಕೂಲವಾಗುವ ಹೊಸ ಜನರ ಪರಿಚಯವಾಗುತ್ತದೆ. ಮಿತ್ರರ ಜೊತೆ ಸೇರಿ ಸಣ್ಣಮಟ್ಟದ ಉತ್ಪಾದನಾ ಘಟಕವನ್ನು ಆರಂಭಿಸುವ ಆಲೋಚನೆ ಇರುತ್ತದೆ. ಧನಾದಾಯವು ಸಾಮಾನ್ಯವಾಗಿರುತ್ತದೆ. ರಾಜಕೀಯ ವ್ಯಕ್ತಿಗಳು ವೈಯಕ್ತಿಕ ಅನುಕೂಲಕ್ಕಾಗಿ ಹೆಚ್ಚು ಶ್ರಮಪಡುವರು.
ಮಕರ : ನಿಮ್ಮ ಸಮಸ್ಯೆಗಳನ್ನು ನ್ಯಾಯಯುತವಾಗಿ ಹಾಗೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಿರಿ. ಮನೆಯಲ್ಲಿನ ಆಗುಹೋಗುಗಳ ಬಗ್ಗೆ ಹೆಚ್ಚಿನ ಗಮನ ಕೊಡಿರಿ. ನೀವು ಮಾಡಿದ್ದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯ ಯೋಗವಿರುತ್ತದೆ. ಬೋಧಕ ವರ್ಗದವರಿಗೆ ಹೆಚ್ಚಿನ ಸ್ಥಾನಮಾನ ದೊರೆಯುವ ಸಾಧ್ಯತೆಗಳಿವೆ. ಕಳೆದು ಹೋಗಿದ್ದ ವಸ್ತುವನ್ನು ಹುಡುಕುವಿರಿ. ನಿಮಗೆ ಅಚ್ಚರಿ ಪಡುವ ವಿಷಯವೊಂದು ಅನ್ಯರ ಮೂಲಕ ತಿಳಿದು ಬರುತ್ತದೆ.
ಕುಂಭ : ಸಹಕಾರ ರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಗೌರವ ದೊರೆಯುತ್ತದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆಗಳಿವೆ. ಆದಾಯದಷ್ಟೇ ಖರ್ಚು ಇರುತ್ತದೆ. ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ನಿಮ್ಮ ಶ್ರಮದ ದುಡಿಮೆಗೆ ತಕ್ಕ ಫಲವಿರುತ್ತದೆ. ತಂದೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ನಿಮ್ಮ ಇಷ್ಟದ ಆಸೆಗಳನ್ನು ಪೂರೈಸಿಕೊಳ್ಳಲು ಹಿರಿಯರ ಮನವೊಲಿಕೆ ಮಾಡಬೇಕಾಗುತ್ತದೆ.
ಮೀನ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದು. ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿ ಇರುತ್ತದೆ. ಹೊಸ ಆಸ್ತಿ ಖರೀದಿ ಮಾಡುವ ವಿಚಾರ ಮುನ್ನೆಲೆಗೆ ಬರುತ್ತದೆ. ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರ ವ್ಯಾಪಾರ ಹೆಚ್ಚುತ್ತದೆ. ನಿಮ್ಮ ನಡವಳಿಕೆಯಿಂದ ಬಂಧುಗಳು ದೂರವಾಗುವರು. ಅವಿವಾಹಿತರಿಗೆ ಸಂಬಂಧ ದೊರೆಯುವ ಸಾಧ್ಯತೆ ಇದೆ. ಕೆಲವರಿಗೆ ಭಾಷೆಗಳನ್ನು ಕಲಿಯುವ ಆಸಕ್ತಿ ಮೂಡುತ್ತದೆ.














