Coastal Bulletin

ಮೇಷ ರಾಶಿ: ಕಳೆದ 17 ರಂದು ಶನಿ ನಿಮಗೆ ಲಾಭಸ್ಥಾನಕ್ಕೆ ಬಂದಿದ್ದಾನೆ.‌ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ. ಕಾದುನೋಡಿ.‌ ನೆನೆಗುದಿಗೆ ಬಿದ್ದ ಕೆಲಸಗಳೆಲ್ಲ ಈಗ ಸುಸೂತ್ರವಾಗಿ ಆಗುತ್ತದೆ. ಧನಲಾಭ ಇದೆ. ವೃತ್ತಿಯಲ್ಲಿ ಯಶಸ್ಸು ಇದೆ.‌ ಲಾಭಸ್ಥಾನದಲ್ಲಿ ಶನಿ ಚಂದ್ರ ಶುಕ್ರ ಸೇರಿ ಒಂದು ರಾಜಯೋಗ ಆಗಿದೆ.‌ ಎಲ್ಲ ವಿಷಯದಲ್ಲೂ ಲಾಭಾಂಶವೇ ಹೆಚ್ಚು‌ಇದೆ.‌ಶತ್ರು ಧ್ವಂಸವಾಗುತ್ತದೆ. ನಿಮ್ಮ ರಾಶ್ಯಾಧಿಪತಿ ಎರಡನೇ ಮನೆಯಲ್ಲಿ ಇದ್ದು ಎಂಟನೇ ಮನೆಯನ್ನು ನೋಡುವುದರಿಂದ ನಿಮಗೆ ಅಪಾಯಗಳಿಂದ ರಕ್ಷಣೆ ಸಿಗುತ್ತದೆ.

ವೃಷಭ ರಾಶಿ :

ಗುರು ಹನ್ನೊಂದು ಶನಿ- ಶುಕ್ರ-ಚಂದ್ರ ಹತ್ತನೇ ಮನೆಯಲ್ಲಿ‌ಇದ್ದು ವೃತ್ತಿಯಲ್ಲಿ ಬಹಳ‌ದೊಡ್ಡ ಬೆಳವಣಿಗೆಯನ್ನು ಕೊಡುತ್ತಾರೆ. ಬಡ್ತಿ ಸಿಗುವ ಯೋಗ ಇದೆ.‌ ಪ್ರವಾಸ ಮಾಡುವ ಯೋಗ ಇದೆ.‌ ಧನಲಾಭ ಇದೆ. ಬುಧ ಎಂಟನೇ ಮನೆಯಲ್ಲಿ‌ನಿಮ್ಮನ್ನು ಅಪಾಯಗಳಿಂದ ರಕ್ಷಿಸುತ್ತಾನೆ.‌ ಆರನೇ ಮನೆಯ ಕೇತು ನಿಮಗೆ ರಕ್ಷಣೆ ಕೊಡುತ್ತಾನೆ. ಧನ ಲಾಭ ಇದೆ. ಕೆಲಸಕಾರ್ಯಗಳಲ್ಲಿ ಜಯ ಸಿಗುತ್ತದೆ.‌ ಅಂದುಕೊಂಡ ಕೆಲಸ ಸಾಧಿಸುತ್ತೀರಿ.

ಮಿಥುನ ರಾಶಿ :

ಅಷ್ಠಮ ಶನಿಯಿಂದ ಬಿಡುಗಡೆ ಸಿಕ್ಕಿದೆ. ಹೊಸ ಅವಕಾಶಗಳು ಹೊಸ ಬದಲಾವಣೆಗಳಿಗೆ ಸಿದ್ಧರಾಗಿ. ಇಷ್ಟು ದಿನ ಕಷ್ಟ ಪಟ್ಟ ಕಾಲ ಮುಗಿಯಿತು ಇನ್ನು ಸುಖ ಸಂತೋಷವನ್ನು ಬರಮಾಡಿಕೊಳ್ಳುವ ಸಮಯ. ಹಣದ ಹರಿವು ಉತ್ತಮವಾಗಲಿದೆ. ಸೋಲು ಎನಿಸಿದ್ದೆಲ್ಲ ಗೆಲುವಾಗಿ ಪರಿವರ್ತನೆ ಆಗುತ್ತದೆ. ಜನ ನಿಮ್ಮನ್ನು ಹುಡುಕಿ ಬರುತ್ತಾರೆ. ಈಗ ನೀವು ಗೆಲ್ಲುವ ಕುದುರೆ. ನಿಮ್ಮ ಮಾತಿಗೆ ಬೆಲೆ ಗೌರವ ಸಿಗುವ ಕಾಲ.

ಕಟಕ ರಾಶಿ :

ಶನಿಯ ಎಂಟನೇ ಮನೆ ಪ್ರವೇಶದಿಂದ ವೇಗವಾಗಿ ಹೋಗುತ್ತಿದ್ದ ಜೀವನದ ಬಂಡಿಗೆ ಬ್ರೇಕ್ ಬಿದ್ದ ಹಾಗಿದೆ. ಈಗ ಸ್ವಲ್ಪ ಸಮಾಧಾನದಿಂದ ಸಾವಧಾನದಿಂದ ಚಲಿಸಬೇಕಾಗಿದೆ.‌ ಯೋಚಿಸಿ ಮುಂದಡಿಯಿಡಿ.‌ ಕ್ಷಣಕ್ಷಣಕ್ಕೂ ಅಡೆತಡೆಗಳು ಎದುರಾಗುತ್ತದೆ. ಸವಾಲುಗಳು ತಲೆಯೆತ್ತಿ ನಿಲ್ಲುತ್ತದೆ. ವೃತ್ತಿಯಲ್ಲೂ ತೊಡಕುಗಳು ಎದುರಾಗುತ್ತದೆ. ಜಾಗ್ರತೆ ಇರಲಿ. ಹಣ ನೀರಿನಂತೆ ಖರ್ಚಾಗುತ್ತದೆ.‌ಈಗ ನಿಮಗೆ ತಾಳ್ಮೆಯೇ ಮುಖ್ಯ. ಯಾರೊಂದಿಗೂ ಜಗಳ ವಾದ ಬೇಡ. ‌

ಸಿಂಹ ರಾಶಿ :

ಇದುವರೆಗೂ ನಿಮಗೆ ಆರನೇ ಮನೆಯಲ್ಲಿದ್ದ ಶನಿಯಿಂದ ಕೆಲಸಗಳು ವೇಗವಾಗಿ ನಡೆಯುತ್ತಿತ್ತು. ಆದರೆ ಈಗ ಶನಿ ಏಳನೆ ಮನೆಗೆ ಬಂದಿದ್ದಾನೆ ಜೊತೆಗೆ ಗುರುಬಲ ಇಲ್ಲ.‌ ಹೀಗಾಗಿ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ. ಕಿರಿಕಿರಿ ಒತ್ತಡ ಇರುತ್ತದೆ. ಹಣಕಾಸಿನ‌ ಖರ್ಚು ಇರುತ್ತದೆ. ಯಾವುದನ್ನೂ ಒಂದಲ್ಲ ಎರಡು ಬಾರಿ ಯೋಚಿಸಿ ಮುಂದಡಿ‌ಇಡಿ.‌ ಕೇತು ಮೂರನೇ ಮನೆಯಲ್ಕಿ ನಿಮಗೆ ಧೈರ್ಯ ಕೊಡುತ್ತಾನೆ. ‌ಧನಲಾಭವನ್ನೂ ಕೊಡುತ್ತಾನೆ. ಕೇತು ಈಗ ನಿಮ್ಮ ಪರವಾಗಿ ಅವನೊಬ್ಬನೇ ಇದ್ದಾನೆ.

ಕನ್ಯಾ ರಾಶಿ :

ಈಗ ನಿಮಗೆ ಗುರುಬಲ ಶನಿಬಲ ಎರಡೂ ಇರುವುದರಿಂದ ನೀವು ಕೈಹಾಕಿದ ಕೆಲಸಕಾರ್ಯಗಳು ನಿರ್ವಿಘ್ನವಾಗಿ‌ ನೆರವೇರುತ್ತದೆ. ಗುರುಬಲ ಮತ್ತು ಶನಿಬಲ ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸರ್ಕಾರದಿಂದ ಲಾಭ, ಬಂಧು ಬಳಗದಲ್ಲಿ ಒಳ್ಳೆಯ ಹೆಸರು, ಸಾಮಾಜಿಕ ಗೌರವ ಎಲ್ಲವೂ ಸಿಗುವ ಸಮಯ. ಆಸ್ತಿ ಖರೀದಿ ಮಾಡುತ್ತೀರಿ. ಉನ್ನತ ಶಿಕ್ಷಣಕ್ಕೆ ಅವಕಾಶ ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಧನಲಾಭ ಇದೆ. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಮಾತನಾಡುವಾಗ ದುಡುಕದಿರಿ.

ತುಲಾ ರಾಶಿ :

ಪಂಚಮ ಶನಿ ಶುರುವಾಗಿದೆ. ಪ್ರತಿಯೊಂದು ಹೆಜ್ಜೆಯನ್ನೂ ಯೋಚಿಸಿ ಇಡಿ.‌ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳವುದು, ತಪ್ಪುದಾರಿಯಲ್ಲಿ ನಡೆಯುವುದು ಮುಂತಾದ ಪ್ರಸಂಗಗಳು ಬರುತ್ತದೆ. ಯೋಚಿಸಿ ವಿವೇಚನೆಯಿಂದ ನಿಭಾಯಿಸಿ.‌ ಹಣದ ಅಡಚಣೆ ಬಹಳವಾಗಿ ಇರುತ್ತದೆ.‌ ಆರೋಗ್ಯ ಕೈಕೊಡುತ್ತದೆ. ಗುರುಬಲ ಬರುವವರೆಗೂ ಸ್ವಲ್ಪ ಕಾಯಬೇಕು.‌ ಮೂರರಲ್ಲಿ ಬುಧ

ಬಂಧುಗಳ ಸಹಕಾರ ಕೊಡಿಸುತ್ತಾನೆ. ನಾಲ್ಕರ ಸೂರ್ಯ ಸರ್ಕಾರದ ಕೆಲಸಗಳಲ್ಲಿ ಲಾಭ ಮಾಡಿಸುತ್ತಾನೆ. ಐದರಲ್ಲಿ ಶುಕ್ರ ವಾಹನದಿಂದ ಲಾಭ ಹಾಗೂ ಉನ್ನತ ವಿದ್ಯೆಗೆ ಅವಕಾಶ ಕೊಡುತ್ತಾನೆ.

ವೃಶ್ಚಿಕ ರಾಶಿ :

ನಿಮಗೆ ನಾಲ್ಕನೇ ಮನೆಯ ಶನಿ ಅಷ್ಟೊಂದು‌ ಪ್ರಯೋಜನ ಇಲ್ಲ.‌ ಹಾಗಂತ ನಷ್ಟ ಇಲ್ಲ. ಮಧ್ಯಮ ಫಲ.‌ ಅರ್ಧಾಷ್ಟಮ ಶನಿ ಎಂದೆಲ್ಲ ಹೇಳುವವರನ್ನು ದೂರವಿಡಿ. ಅರ್ಧಾಷ್ಟಮ ಶನಿ ದೋಷಕಾರಿಅಲ್ಲ. ತಟಸ್ಥ.‌ ಇದುವರೆಗೂ ವೇಗವಾಗಿ‌ ಹೋಗುತ್ತಿದ್ದ ಜೀವನಕ್ಕೆ ತಡೆಯೊಡ್ಡಿದಂತೆ ಆಗುತ್ತದೆ. ಗುರುಬಲ ರಾಹು ಬಲ‌ ಇದೆ. ಚಿಂತೆ ಬೇಡ. ಎರಡನೆ ಮನೆ ಬುಧ ಕುಟುಂಬ ಸೌಖ್ಯವನ್ನೂ, ಮೂರರ ಸೂರ್ಯ ಧೈರ್ಯವನ್ನೂ, ನಾಲ್ಕರ ಶುಕ್ರ ಆಸ್ತಿಲಾಭ, ವಾಹನಲಾಭ ಮೊದಲಾದ ವಿಶೇಚಗಳಿಗೆ ಕಾರಣನಾಗುತ್ತಾನೆ.

ಧನಸ್ಸು ರಾಶಿ :

ಈಗ ನಿಮಗೆ ಶನಿ ಮೂರನೇ ಮನೆಗೆ ಬಂದಿದ್ದಾನೆ. ವಕೀಲರು, ನ್ಯಾಯಾಧೀಶರು, ತೈಲವ್ಯಾಪಾರಿಗಳು, ಕಬ್ಬಿಣಕ್ಕೆ ಸಂಬಂಧಿಸಿದ ವ್ಯಾಪಾರಿಗಳು. ಕಟ್ಟಡ ಕಾಂಟ್ರಾಕ್ಟ್ ಮಾಡಿಸುವವರು‌ ಇವರಿಗೆಲ್ಲ ಶುಭ. ಮುಖ್ಯವಾಗಿ ಕೋರ್ಟ್‌ನಲ್ಲಿ ದಾವೆ ಹಾಕಿ ಯಾವುದೊಂದೂ ತೀರ್ಮಾನ‌ಸಿಗದೆ ಒದ್ದಾಡುತ್ತ ಇರುವವರಿಗೆ ಈಗ ಕೇಸು ನಿಮ್ಮ ಕಡೆಗೆ ಆಗಿ ನಿಮಗೆ ನಿರಾಳತೆಯನ್ನು ಕೊಡುತ್ತದೆ. ವಿವಿಧ ಮೂಲಗಳಿಂದ ಧನಲಾಭ ಇದೆ. ಪರಾಕ್ರಮ ದಿಂದ ಯಾವ ಕೆಲಸ ಮಾಡಿದರೂ ಜಯ ನಿಮ್ಮದಾಗುತ್ತದೆ.‌

ಮಕರ ರಾಶಿ :

ಈಗ ನಿಮಗೆ ಜನ್ಮ ಶನಿ ಮುಕ್ತಾಯವಾಯಿತು. ಅಂತ್ಯ ಶನಿ ಇದೆ. ಇದು ಅಷ್ಟೊಂದು ಭಾದಕವಿಲ್ಲ. ಐದು ವರ್ಷಗಳು ಕಷ್ಟ ಪಟ್ಟಿದೀರಿ. ಈಗ ಸುಖ ಪಡುವ ಕಾಲ. ಕಳೆದದ್ದನ್ನು ಗಳಿಸಿಕೊಳ್ಳುವ ಕಾಲ. ಹೊಸ ಹೊಸ ಅವಕಾಶಗಳು ಬರುತ್ತದೆ. ಯಾವುದು ಬೇಕೆಂಬುದು ವಿವೇಚನೆಯಿಂದ ಆರಿಸಿಕೊಳ್ಳಿ.‌ ಎರಡನೇ ಮನೆಯ ಶನಿ ಲಾಭಸ್ಥಾನವನ್ನೂ ನೋಡುವುದರಿಂದ ಧನಲಾಭ ಕೊಡುತ್ತಾನೆ. ಹಣ ಸಂಪಾದನೆ ಚೆನ್ನಾಗಿದೆ. ಮಾತಾಡುವಾಗ ಎಚ್ಚರ ಇರಲಿ. ದುಡುಕಿ ಏನೂ ಮಾತನಾಡಬೇಡಿ.

ಕುಂಭ ರಾಶಿ :

ಈಗ ನಿಮಗೆ ಗುರುಬಲ ರಾಹುಬಲ ಎರಡೂ ಇದೆ. ಆದರೂ ಶನಿ‌ಈಗ ನಿಮ್ಮ ರಾಶಿಗೆ ಬಂದಿದ್ದಾನೆ. ರಾಶಿಗೆ ಶನಿ ಬಂದಿರುವುದು ಕೊಂಚ ನಿಮ್ಮ‌ ವರ್ಚಸ್ಸಿಗೆ ಹಾಗೂ ಆರೋಗ್ಯಕ್ಕೆ ತೊಂದರೆ ಆಗುತ್ತದೆ. ಯಾರೋ ನಿಮ್ಮ ಬಗ್ಗೆ ಇಲ್ಲ ಸಲ್ಲದ ಚಾಡಿ ಹೇಳಬಹುದು. ನಿಮ್ಮ ವಿರುದ್ದ ಪಿತೂರಿ ಮಾಡಬಹುದು. ಜಾಗರೂಕರಾಗಿರಿ. ಈಗ ಗುರುಬಲ‌ ಇರುವುದರಿಂದ ನಿಮಗೆ ಅಷ್ಟೊಂದು ಬಿಸಿ ತಾಕುವುದಿಲ್ಲ ಆದರೂ ನಿಮ್ಮ ಎಚ್ಚರಿಕೆಯಲ್ಲಿ ಇರಿ. ಹಣಕಾಸಿನ ವಿಷಯದಲ್ಲ ಜಾಗ್ರತೆ ಇರಲಿ. ಯಾರಿಗೂ ಸಾಲ ಕೊಡಬೇಡಿ.

ಮೀನ ರಾಶಿ :

ಈಗ ನಿಮಗೆ ಸಾಡೆಸಾತಿ ಶನಿ ಅಂದರೆ ಏಳೂವರೆ ಶನಿಯ ಪ್ರಭಾವ ಶುರುವಾಗಿದೆ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ. ಹಣಕಾಸಿನ ಖರ್ಚು ವಿಪರೀತ ಇರುತ್ತದೆ. ಮನೆಯಲ್ಲಿ ಅಶಾಂತಿ ಗಂಡಹೆಂಡಿರಲ್ಲಿ ವಿರಸ ಮುಂತಾದ ಸಮಸ್ಯೆಗಳು ಕಾಣಿಸುತ್ತದೆ. ನಿಮ್ಮ ದುರ್ಬಲತೆ ಯಾವುದೋ ಅದನ್ನೇ ಶನಿ ಹಿಡಿದು ಆಟವಾಡಿಸುತ್ತಾನೆ. ತಪ್ಪು ದಾರಿಯಲ್ಲಿ ಹೋಗುವಂತೆ ಮಾಡುತ್ತಾನೆ. ಅವಮಾನವಾಗುವಂತೆ ಮಾಡುತ್ತಾನೆ. ಅಭಿವೃದ್ಧಿ ಯ ಯಾವ ಕೆಲಸಗಳೂ ನಡೆಯುವುದಿಲ್ಲ.

Leave a Comment