ತುಂಬೆ :ಶಾಲಾ ಕ್ರಿಡಾಂಗಣದಲ್ಲಿ ನಿಲ್ಲಿಸಿದ್ದ ಬಸ್ಸುಗಳ ಬ್ಯಾಟರಿ ಕಳವು.

Coastal Bulletin
ತುಂಬೆ :ಶಾಲಾ ಕ್ರಿಡಾಂಗಣದಲ್ಲಿ ನಿಲ್ಲಿಸಿದ್ದ ಬಸ್ಸುಗಳ ಬ್ಯಾಟರಿ ಕಳವು.

ಬಂಟ್ವಾಳ : ತುಂಬೆ ಪದವಿ ಪೂರ್ವ ಕಾಲೇಜಿನ ಶಾಲಾ ಕ್ರಿಡಾಂಗಣದ ಮರದಡಿಯಲ್ಲಿ ನಿಲ್ಲಿಸಿದ್ದ 4 ಶಾಲಾ ಬಸ್ಸುಗಳ  ಬ್ಯಾಟರಿಗಳನ್ನು ಕಳವು ಮಾಡಿದ ಘಟನೆ ಎ. 30ರಂದು ನಡೆದಿದೆ.

ಕಚೇರಿಯ ಅಧಿಕ್ಷಕ ಅಬ್ದುಲ್ ಕಬೀರ್  ನೀಡಿದ ದೂರಿನಂತೆ ಕಾಲೇಜಿನ 4 ಬಸ್ಸುಗಳನ್ನು ಎಂದಿನಂತೆ  ಶಾಲಾ ಕ್ರಿಡಾಂಗಣದ ಮರದಡಿಯಲ್ಲಿ ನಿಲ್ಲಿಸಿದ್ದು ಎ 30ರಂದು ಬೆಳಿಗ್ಗೆ 11ಗಂಟೆಗೆ ಶಾಲಾ ಬಸ್ಸಿನ ಡ್ರೈವರ್ ಗಳು ಆಗಮಿಸಿ, ದಿನ ನಿತ್ಯದಂತೆ ಶಾಲಾ ಬಸ್ಸನ್ನು ಸ್ಟಾರ್ಟ್ ಮಾಡುವ

ಸಂದರ್ಭದಲ್ಲಿ ಸ್ಟಾರ್ಟ್ ಆಗದೇ ಇದ್ದಾಗ ಬ್ಯಾಟರಿಯನ್ನು ಪರಿಶೀಲಿಸಿದ್ದಾರೆ. ಆಗ 4 ಶಾಲಾ ಬಸ್ಸುಗಳ  ಬ್ಯಾಟರಿಗಳು ಕಳವಾಗಿರುವುದು ಗಮನಕ್ಕೆ ಬಂದಿದ್ದು ಕೂಡಲೆ ಡ್ರೈವರ್ ಗಳು ಕಾಲೇಜಿನ ಕಚೇರಿಯ ಅಧಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ  ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.


Leave a Comment