ಸುಜೀರು :ನಾಳೆ (ಮೇ 3) ವೈದ್ಯನಾಥ ಕ್ರಿಕೆಟರ್ಸ್ ರಜತ ಸಂಭ್ರಮ ಸಮಾರಂಭ.

Coastal Bulletin
ಸುಜೀರು :ನಾಳೆ (ಮೇ 3) ವೈದ್ಯನಾಥ ಕ್ರಿಕೆಟರ್ಸ್ ರಜತ ಸಂಭ್ರಮ ಸಮಾರಂಭ.

ಬಂಟ್ವಾಳ:  ತಾಲೂಕಿನ ಪುದು ಗ್ರಾಮದ ಸುಜೀರು ದೇವರಪಾಲುವಿನ ವೈದ್ಯನಾಥ ಕ್ರಿಕೆಟರ್ಸ್ ನ ಇದರ ರಜತ ಸಂಭ್ರಮ ಮೇ 3ರಂದು ಸುಜೀರು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನದ ಆವರಣದಲ್ಲಿ ನಡೆಯಲಿದೆ.

ಅಂದು ಸಂಜೆ 4ರಿಂದ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ, 6 ಗಂಟೆಗೆ ಸ್ಥಳೀಯ ಕಲಾವಿದರಿಂದ ನೃತ್ಯ ಕಾರ್ಯಕ್ರಮ ಹಾಗೂ ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಹಲವು ಗಣ್ಯರು

ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 8ಕ್ಕೆ ಸಂಗೀತ ಕಾರ್ಯಕ್ರಮ, 8.30ಕ್ಕೆ ಅನ್ನ ಸಂತರ್ಪಣೆ ಹಾಗೂ 9ಕ್ಕೆ ಜೋಡು ಜೀಟಿಗೆ ನಾಟಕ ಪ್ರದರ್ಶನವಾಗಲಿದೆ ಎಂದು ಗೌರವಾಧ್ಯಕ್ಷ ಕಿಶೋರ್ ಸುಜೀರು ಪ್ರಕಟನೆಯಲ್ಲಿ ತಿಳಿಸಿದೆ.

Leave a Comment