Coastal Bulletin

ಮೇಷ : ಏರುಪೇರಾಗಿದ್ದ ವ್ಯಾಪಾರ ವ್ಯವಹಾರಗಳನ್ನು ಸರಿದೂಗಿಸಲು ಸಾಕಷ್ಟು ಹೆಣಗಾಡುವಿರಿ. ಕಚೇರಿ ಕೆಲಸದಲ್ಲಿರುವವರಿಗೆ ಹೊಸ ಜವಾಬ್ದಾರಿಯೊಂದು ಹೆಗಲೇರುತ್ತದೆ. ರಾಜಕೀಯಕ್ಕೆ ಪ್ರವೇಶ ಮಾಡಬೇಕೆನ್ನುತ್ತಿರುವವರು ಸಾಕಷ್ಟು ವಿಚಾರ ಮಾಡುವುದು ಒಳ್ಳೆಯದು. ಆರಕ್ಷಕ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ವಿವಾದಾಸ್ಪದ ವಿಷಯಗಳನ್ನು ಕೆಣಕದಿರುವುದೇ ಒಳ್ಳೆಯದು. ಮಕ್ಕಳ ವಿಷಯದಲ್ಲಿ ಅತ್ಯಂತ ಕಠಿಣ ನಿರ್ಧಾರ ಖಂಡಿತ ಬೇಡ.

ವೃಷಭ : ಕಾಗದದ ಉದ್ಯಮವನ್ನು ನಡೆಸುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ನಿಮ್ಮ ಸಮಾನಮನಸ್ಕರಲ್ಲಿ ಮಾತ್ರ ವ್ಯಾಪಾರ ವ್ಯವಹಾರಗಳನ್ನು ನಡೆಸಬಹುದು. ಸಮೀಪವರ್ತಿಗಳಿಂದ ನಿಮ್ಮ ವ್ಯವಹಾರಗಳಿಗೆ ಸೂಕ್ತ ಸಲಹೆ ಮತ್ತು ಸಹಾಯ ಸಿಗುತ್ತದೆ. ಹಣದ ವಿಷಯದಲ್ಲಿ ಪಾಲುದಾರರ ಜೊತೆ ಕಠಿಣವಾಗಿರುವುದು ಒಳ್ಳೆಯದು. ಉದ್ಯೋಗದ ಸ್ಥಾನದಲ್ಲಿ ಬದಲಾವಣೆಯಾಗಿ ಸ್ವಲ್ಪಮಟ್ಟಿನ ನೆಮ್ಮದಿಯನ್ನು ಕಾಣುವಿರಿ. 

ಮಿಥುನ : ಕೆಲಸ ಕಾರ್ಯಗಳಲ್ಲಿ ವಿಳಂಬವಾದರೂ ಕೆಲಸಗಳು ನಿಲ್ಲುವುದಿಲ್ಲ. ಧನ ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿರುವವರು ಹೆಚ್ಚು ಎಚ್ಚರವಹಿಸಿರಿ. ಬಂಧುಗಳೊಡನೆ ಅನಗತ್ಯ ವಿವಾದಗಳು ಬೇಡ. ಖಾದ್ಯತೈಲಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಸಿಹಿ ತಿಂಡಿಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ವ್ಯಾಪಾರ ನಡೆದು ಸಾಕಷ್ಟು ಆದಾಯ ಹೆಚ್ಚುತ್ತದೆ. 

ಕಟಕ : ಸಜ್ಜನರ ಭೇಟಿಯಿಂದ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ. ಕುಟುಂಬದವರ ಜೊತೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಪ್ರಕೃತಿ ವೀಕ್ಷಣೆಗಾಗಿ ಸ್ನೇಹಿತರ ಜೊತೆ ವಿಹಾರಕ್ಕಾಗಿ ಹೊರಡುವಿರಿ. ಮನೆಯಲ್ಲಿ ನಡೆಸಬೇಕೆಂದಿರುವ ಶುಭ ಕಾರ್ಯಕ್ಕಾಗಿ ಸಾಕಷ್ಟು ತಯಾರಿ ಮಾಡುವಿರಿ. ಸೊಪ್ಪು, ತರಕಾರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಧನ ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ.

ಸಿಂಹ : ನಿಮ್ಮ ಪ್ರತಿಯೊಂದು ಕೆಲಸಕ್ಕೂ ನಿಮ್ಮ ಸಂಗಾತಿಯ ಸಹಾಯ ಖಂಡಿತ ದೊರೆಯುತ್ತದೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಬರುತ್ತದೆ. ಆಹಾರಧಾನ್ಯಗಳನ್ನು ಮಾರಾಟ ಮಾಡುವವರಿಗೆ ಉತ್ತಮ ವ್ಯಾಪಾರ ನಡೆದು ವ್ಯವಹಾರ ವಿಸ್ತರಿಸುತ್ತದೆ. ರಜೆ ದಿನಗಳಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯ ಕೆಲವರಿಗೆ ಬರುತ್ತದೆ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಕ್ರೀಡಾಪಟುಗಳಿಗೆ ಗೌರವ ದೊರೆಯುವ ಸಾಧ್ಯತೆ ಇದೆ.

ಕನ್ಯಾ : ಪ್ರತಿಯೊಂದರಲ್ಲೂ ಯಶಸ್ಸನ್ನು ಕಾಣುವ ಹಂಬಲವಿರುವ ನೀವು ಅದಕ್ಕಾಗಿ ಸಾಕಷ್ಟು ಶ್ರಮ ಹಾಕಲೇಬೇಕಾದ ಅನಿವಾರ್ಯವಿದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಖರ್ಚುಗಳನ್ನು ಸರಿಯಾಗಿ ನಿರ್ವಹಿಸುವುದು ಬಹಳ ಉತ್ತಮ. ಸ್ವಂತ ಉದ್ಯೋಗವನ್ನು ನಡೆಸುವವರಿಗೆ ವ್ಯವಹಾರದಲ್ಲಿ ನಷ್ಟವಿಲ್ಲ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ. ಇತರರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುದು ನಿಮಗೆ ದುಷ್ಪರಿಣಾಮ ತರಬಹುದು.

ತುಲಾ : ಗಿಡಮೂಲಿಕೆಗಳಿಂದ ನಾಟಿಔಷಧಿ ಕೊಡುವ ಪಂಡಿತರಿಗೆ ಬೇಡಿಕೆ ಬರುವ ಸಾಧ್ಯತೆಗಳಿವೆ. ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ರಾಜಕೀಯ ವರ್ಗದವರು ವಿವಿಧ ರೀತಿಯ ಪ್ರಯತ್ನವನ್ನು ಮಾಡುವರು. ಮಗನ ಓದಿನ ವಿಷಯದಲ್ಲಿ ಸ್ವಲ್ಪ ನಿರಾಸೆ ಆಗಬಹುದು. ಅಪವಾದದ

ಭಯ ಸದಾ ಕಾಡುತ್ತಿರುತ್ತದೆ. ಕೌಟುಂಬಿಕ ಸಮಸ್ಯೆಗಳಿದ್ದಲ್ಲಿ ಕುಳಿತು ಬಗೆಹರಿಸಿಕೊಳ್ಳುವುದು ಒಳ್ಳೆಯದು. ಧನ ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು ಉತ್ಸುಕರಾಗುವಿರಿ.

ವೃಶ್ಚಿಕ : ಹೆಚ್ಚು ಮಾತನಾಡದಿರುವುದು ಬಹಳ ಒಳ್ಳೆಯದು. ವಾಹನ ಚಾಲನೆ ಮಾಡುವಾಗ ಎಚ್ಚರವಹಿಸಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸನ್ನು ಪಡೆಯುವ ಕಾಲ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ನೂತನ ಸಂಬಂಧಗಳನ್ನು ಬೆಳೆಸುವಾಗ ಯಾವುದೇ ಗೊಂದಲಗಳಿಲ್ಲದಂತೆ ಎಚ್ಚರವಹಿಸಿರಿ. ವ್ಯವಹಾರಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿರಿ. ಮೂತ್ರ ಸಂಬಂಧಿ ತೊಂದರೆ ಇರುವವರು ಎಚ್ಚರವಹಿಸಿರಿ. ಸಂಗಾತಿ ಆಸೆಗಳಿಗಾಗಿ ಹೆಚ್ಚು ಹಣ ಖರ್ಚಾಗುವುದು.

ಧನು : ವಿದೇಶದಲ್ಲಿರುವ ಮಕ್ಕಳಿಂದ ದುಬಾರಿ ಉಡುಗೊರೆ ಸಿಗಬಹುದು. ರಾಜಕೀಯ ಪಟುಗಳಿಗೆ ಜನರನ್ನು ಮರುಳು ಮಾಡುವ ಕಲೆ ಸಿದ್ಧಿಸುತ್ತದೆ. ನಿಮ್ಮ ವ್ಯವಹಾರಗಳಲ್ಲಿ ಹೊಸಬರ ಪರಿಚಯ ಆಗುವುದು ಮತ್ತು ಇದರಿಂದ ವ್ಯವಹಾರ ಮುನ್ನಡೆಯಲು ಹೆಚ್ಚು ಅನುಕೂಲವಾಗುತ್ತದೆ. ಹಣ್ಣು ವ್ಯಾಪಾರ ಮಾಡುವವರಿಗೆ ಉತ್ತಮ ವ್ಯವಹಾರ ನಡೆಯುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವ ಯೋಗವಿದೆ. 

ಮಕರ : ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇರುತ್ತದೆ. ಅಪೇಕ್ಷಿತ ವರ್ಗಾವಣೆ ಬಯಸುತ್ತಿರುವವರಿಗೆ ಸೂಕ್ತ ಸ್ಥಳಕ್ಕೆ ವರ್ಗಾವಣೆಯು ದೊರೆಯುವ ಸಾಧ್ಯತೆ ಇದೆ. ಕೃಷಿ ವಿಜ್ಞಾನವನ್ನು ಓದುತ್ತಿರುವವರಿಗೆ ಸಾಕಷ್ಟು ಸೌಲಭ್ಯಗಳು ಒದಗಿ ಬರುತ್ತವೆ. ಶತ್ರುಗಳ  ಉಪಟಳ ತಡೆಯಲು ಅವರದೇ ತಂತ್ರಗಳನ್ನು ಅನುಸರಿಸುವಿರಿ. ಉದ್ದಿಮೆಗಳಿಗೆ ಮಾನವ ಸಂಪನ್ಮೂಲಗಳನ್ನು ಸರಬರಾಜು ಮಾಡುವ ಬೇಡಿಕೆ ಬಂದು ಆದಾಯವು ಹೆಚ್ಚುತ್ತದೆ. 

ಕುಂಭ : ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸುವುದು ಒಳ್ಳೆಯದು. ಜಮೀನಿನ ತಕರಾರುಗಳು ಇತ್ಯರ್ಥಗೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ ಹೊಸ ವ್ಯವಹಾರಗಳನ್ನು ಆರಂಭಿಸುವುದು ಒಳ್ಳೆಯದು. ಭಾಷಣಕಾರರಿಗೆ ಉಪನ್ಯಾಸಕರಿಗೆ ಉತ್ತಮ ವೇದಿಕೆ ದೊರೆಯುವ ಸಾಧ್ಯತೆಗಳಿವೆ. ಯುವಕರು ಆತ್ಮವಿಶ್ವಾಸದಿಂದ ಪರಿಶ್ರಮಪಟ್ಟು ಕೆಲಸ ಮಾಡುವುದು ಒಳ್ಳೆಯದು. ಹಣದ ಒಳಹರಿವು ತೃಪ್ತಿದಾಯಕವಾಗಿರುತ್ತದೆ.

ಮೀನ : ವೃತ್ತಿಯ ಸ್ಥಳದಲ್ಲಿ ಮೇಲಧಿಕಾರಿಗಳ ಜೊತೆ ಬುದ್ಧಿವಂತಿಕೆಯಿಂದ ವ್ಯವಹರಿಸಿರಿ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಬಂಧುಗಳ ಸಹಾಯ ನಿಮ್ಮ ಅವಶ್ಯಕತೆಗೆ ತಕ್ಕಂತೆ ದೊರೆಯುತ್ತದೆ. ಮುಕ್ತ ಮಾತುಕತೆಯ ಮೂಲಕ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಆಸ್ತಿ ವಿಚಾರದಲ್ಲಿ ನಿಮ್ಮ ಆಸೆ ಈಡೇರುತ್ತದೆ. ನಿಮ್ಮ ಮಕ್ಕಳಿಂದ ನಿಮಗೆ ಅಗೌರವ ಉಂಟಾಗಬಹುದು. ಶೀತ ಬಾಧೆ ಇರುವವರು ಎಚ್ಚರವಹಿಸಿರಿ.

Leave a Comment