ಬಂಟ್ವಾಳ: ಸಜೀಪಮೂಡ ಗ್ರಾಮದ ಕಲ್ಲಗುಂಡಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ೨ ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬಿಜೆಪಿ ಸರಕಾರವು ನೀರಿಗೆ ಹೆಚ್ಚಿನ ಮಹತ್ವ ನೀಡಿದ್ದು, ಹಿಂದಿನ ಸಿಎಂ ಬಿಎಸ್ ವೈ ಅವರು ಅನುದಾನ ಇಟ್ಟು ವಾರ್ಷಿಕವಾಗಿ ೫೦೦ ಕೋ.ರೂ.ಗಳನ್ನು ನೀಡಲಾಗುತ್ತಿದೆ. ಬಂಟ್ವಾಳ ಕ್ಷೇತ್ರದಲ್ಲಿ ೨೬೬ ಕೋ.ರೂ.ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಲ್ಲಗುಂಡಿಗೆ ಸಂಪರ್ಕ ರಸ್ತೆಗೂ ಅನುದಾನ ನೀಡುವ ಕಾರ್ಯ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ
ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಸಂಕೇಶ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಶಿವಪ್ರಸನ್ನ, ಸಜೀಪಮೂಡ ಗ್ರಾ.ಪಂ.ಸದಸ್ಯರಾದ ಸೀತಾರಾಮ ಅಗೋಳಿಬೆಟ್ಟು, ಪ್ರಶಾಂತ್ ವಿಟ್ಲುಕೋಡಿ, ಗೋಳ್ತಮಜಲು ಗ್ರಾ.ಪಂ.ಸದಸ್ಯ ಎಲಿಯಾಸ್ ಡಿಸೋಜ, ಸುಂದರಿ ಬೊಳ್ಳಾಯಿ, ಪ್ರಮುಖರಾದ ಯಶವಂತ ನಾಯ್ಕ್ ನಗ್ರಿ, ವಸಂತ ಕಲ್ಲಗುಂಡಿ ಉಪಸ್ಥಿತರಿದ್ದರು.
ರವಿ ಪೂಜಾರಿ ಕಲ್ಲಗುಂಡಿ ಸ್ವಾಗತಿಸಿದರು. ಚಂದ್ರಹಾಸ ವಂದಿಸಿದರು.














