ಶಿರಸಿ:ಕಾಲೇಜಿಗೆ ಪ್ರಥಮ ರ್‍ಯಾಂಕ್ ಬರಬೇಕು ಎಂದು ಶ್ರಮವಹಿಸಿ ಓದುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪರೀಕ್ಷೆ ರದ್ದಾದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ಸಹಸ್ರಳ್ಳಿಯಲ್ಲಿ ಘಟನೆ ನಡೆದಿದೆ.
18 ವರ್ಷದ ಜಿ.ಧನ್ಯಾ ಆಚಾರಿ ಮೃತ ವಿದ್ಯಾರ್ಥಿನಿ. ಶಿರಸಿ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯ ಓದುತ್ತಿದ್ದು,ಕೋವಿಡ್ ನಿಂದ ಕಾಲೇಜು ಬಂದ್ ಆಗಿದ್ದರೂ ಆನ್‌ಲೈನ್ ಮೂಲಕ ನಿರಂತರ ಅಭ್ಯಾಸ ಮಾಡುತ್ತಿದ್ದಳು.
ಪರೀಕ್ಷೆ ರದ್ದಾದ ಕಾರಣ ವರ್ಷಪೂರ್ತಿ ಓದಿದ್ದು
ವ್ಯರ್ಥವಾಯಿತು ಎಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಈ ಕುರಿತು ಮೃತ ಯುವತಿಯ ತಂದೆ ಗಂಗಾಧರ ದೇವಪ್ಪ ಆಚಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.















