ಮಂಗಳೂರು:ಚಕ್ರಪಾಣಿ ಸೇವಾ ಸಮಿತಿ ಅತ್ತಾವರ ಆಶ್ರಯದಲ್ಲಿ ಜರಗುವ ಸಾರ್ವಜನಿಕ 36ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಗಣೇಶ ದೇವರ ವಿಗ್ರಹದ ಮುಹೂರ್ತ ಕಾರ್ಯಕ್ರಮ ವೈದಿಕ ವಿಧಿ ವಿಧಾನದೊಂದಿಗೆ ಗೋಪಿನಾಥ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಈ ವೇಳೆ ಚಕ್ರಪಾಣಿ ಸೇವಾ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಗೂ ಕ್ಷೇತ್ರದ ಆಡಳಿತ ಮಂಡಳಿ
ಯ ಅಧ್ಯಕ್ಷರು ವ್ಯವಸ್ಥಾಪನೆ ಸಮಿತಿಯ ಸದಸ್ಯರುಗಳು ಹಾಗೂ ಊರಿನ ಭಗವದ್ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು















