ಬಂಟ್ವಾಳ : ಕುಲಾಲ ಸುಧಾರಕ ಸಂಘದ ಗೌರವಾಧ್ಯಕ್ಷರಾಗಿ ಮಚ್ಚೇಂದ್ರ ಸಾಲಿಯಾನ್ ಗುರುಕೃಪಾ  ಆಯ್ಕೆ.

Coastal Bulletin
ಬಂಟ್ವಾಳ : ಕುಲಾಲ ಸುಧಾರಕ ಸಂಘದ ಗೌರವಾಧ್ಯಕ್ಷರಾಗಿ ಮಚ್ಚೇಂದ್ರ ಸಾಲಿಯಾನ್ ಗುರುಕೃಪಾ  ಆಯ್ಕೆ.

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ರಿ. ಪೊಸಳ್ಳಿ ಇದರ ಜುಲೈ ತಿಂಗಳ ಮಾಸಿಕ ಸಭೆ ದಿನಾಂಕ 12 ರಂದು ಶ್ರೀ ರಮೇಶ್ ಸಾಲಿಯಾನ್ ಸಂಚಯಗಿರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ಸಂಘಕ್ಕೆ ಜೀವಮಾನದ ಅತಿಹೆಚ್ಚು ಸಮಯವನ್ನು ಮೀಸಲಿಟ್ಟು ಸಲಹೆ ಸಹಕಾರ ನೀಡಿ ಸಹಕರಿಸಿದ ಮಾಜಿ ಅಧ್ಯಕ್ಷರಾದ  ಮಚ್ಚೇಂದ್ರ ಸಾಲಿಯಾನ್ ಗುರುಕೃಪಾ ರನ್ನು 2026-28 ರ ಸಾಲಿಗೆ ಗೌರವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗೌರವಾನ್ವಿತರು ಪ್ರಸ್ತುತ ಮಾಣಿಲ ಶ್ರೀ

ಧಾಮ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ ದ ಆಡಳಿತ ಟ್ರಸ್ಟಿ ಹಾಗೂ ವಿವೇಕಾನಂದ ಯುವಕ ವೃಂದ ರಿ. ಕುದನೆ ಇದರ ಸ್ಥಾಪಕ ಅಧ್ಯಕ್ಷ ಈಗ ಗೌರವಾಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಜನಸ್ನೇಹಿ ವ್ಯಕ್ತಿಯಾಗಿದ್ದಾರೆ

Leave a Comment