Coastal Bulletin

ಮಂಗಳೂರು : ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಒಂದಾಗಿದ್ದರೂ ಕೂಡ ತುಳುನಾಡಿನ ರಾಜಕಾರಣಿಗಳ ಹಿತಾಸಕ್ತಿಯ ಕೊರತೆಯಿಂದಾಗಿಯೋ,ಸರಕಾರದ ನಿರ್ಲಕ್ಷ್ಯ ದಿಂದಾಗಿಯೋ,ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಹಾಗೂ 8 ನೇ ಪರಿಚ್ಛೇದಕ್ಕೆ ಸೇರದೇ ಉಳಿದಿದೆ ಇದರ ಪರಿಣಾಮವಾಗಿ "Tweet Tulunad" ಅಭಿಯಾನವು ಇಂದು ಬೆಳಗ್ಗೆ 6 ರಿಂದ ಆರಂಭಗೊಂಡು ರಾತ್ರಿ 12ರ ತನಕ ಟ್ವೀಟ್ ಮಾಡಬಹುದಾಗಿದೆ.

ಇಂದು ಮುಂಜಾನೆ ಆರಂಭಗೊಂಡ ಅಭಿಯಾನಕ್ಕೆ ಭರ್ಜರಿ ರೆಸ್ಪೋನ್ಸ್ ದೊರೆತಿದ್ದು ದ.ಕ,ಉಡುಪಿ,ಕಾಸರಗೋಡು,ಕೊಡಗು ಮುಂತಾದ ಜಿಲ್ಲೆಯ ತುಳುವರು ಊರು ಪರ ಊರುಗಳಿಂದ ಟ್ವೀಟ್ ಮಾಡಿ ಸರಕಾರಕ್ಕೆ

ಬಿಸಿ ಮುಟ್ಟಿಸಿದ್ದಾರೆ.

#TuluOfficialinKA_KL ಎಂಬ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನವನ್ನು ನಡೆಸುತ್ತಾ  ಈಗಾಗಲೇ ಲಕ್ಷಾಂತರ ಟ್ವೀಟ್ ಗಳು, ತುಳುವರ ಬೇಡಿಕೆಯ ಕೂಗು ಸರಕಾರಕ್ಕೆ ಮುಟ್ಟಿದೆ.

Leave a Comment